ಲಕ್ಷ್ಮಣ ಸವದಿ  
ಉತ್ತರ ಕನ್ನಡ

ಕಂದಾಯ ಉಪವಿಭಾಗಕ್ಕೊಂದು ಕಂದಾಯ ನ್ಯಾಯಾಲಯ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಸಹಕಾರಿ ಕಾಯ್ದೆಯಡಿ ದಾಖಲಾಗಿರುವ ವ್ಯಾಜ್ಯಗಳ ಶೀಘ್ರ ಪರಿಹಾರಕ್ಕೆ ರಾಜ್ಯದ ನಾಲ್ಕು ಕಂದಾಯ ವಿಭಾಗಳಲ್ಲೂ ವಿಚಾರಣೆ ನಡೆಸಲು ಕ್ರಮ ವಹಿಸಲಾಗುವುದು ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ಕಾರವಾರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಹಕಾರ ಸಂಘಗಳ ವ್ಯಾಜ್ಯಗಳು ನಾಲ್ಕೈದು ವರ್ಷವಾದರೂ ಬಗೆಹರಿಯದೇ ಗ್ರಾಹಕರಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಬೆಂಗಳೂರಿನಲ್ಲಿ ಜಂಟಿ ರಿಜಿಸ್ಟ್ರಾರ್‌ ಮಟ್ಟದ ಒಬ್ಬ ಅಧಿಕಾರಿ ಎಲ್ಲ ಪ್ರಕರಣಗಳ ವಿಚಾರಣೆ ಮಾಡಬೇಕಿರುವುದರಿಂದ ಈ ಪ್ರಕ್ರಿಯೆ ವಿಳಂಬವಾಗುತ್ತದೆ. ಅದನ್ನು ನಿವಾರಿಸಲು ಡಿ-ಸೆಂಟ್ರಲೈಜೇಶನ್ ಮಾಡಿ ಪ್ರತಿ ಕಂದಾಯ ಉಪವಿಭಾಗಕ್ಕೆ ಒಬ್ಬ ಅನುಭವಿ ಅಧಿಕಾರಿಯನ್ನು ನೇಮಿಸಲಾಗುವುದು ಎಂದರು.
ಇನ್ನು ಸೌಹಾರ್ದ ಸಹಕಾರಿ ಕಾಯ್ದೆಯಡಿ ನಿಯಮ ಮೀರಿ ಠೇವಣಿ ಸಂಗ್ರಹ, ಸಾಲ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಸೌಹಾರ್ದ ಸಹಕಾರಿ ಕಾಯ್ದೆಯ ತಿದ್ದುಪಡಿಯ ಕೆಲವು ಪ್ಯಾರಾಗಳಿಗೆ ನ್ಯಾಯಾಲಯದ ತಡೆಯಾಜ್ಞೆಯೂ ಇದೆ. ಅಕ್ರಮಗಳನ್ನು ನಿಯಂತ್ರಿಸಲು ಅಽಕಾರಿಗಳ ಜೊತೆ ಚರ್ಚಿಸಿ ಸೌಹಾರ್ದ ಸಹಕಾರಿ ಕಾಯ್ದೆಗೆ ಕೆಲವು ತಿದ್ದುಪಡಿ ತರಲಾಗುವುದು ಎಂದರು.