ತಿಮ್ಮಪ್ಪ ಎಂ.ಕೆ. 
ಉತ್ತರ ಕನ್ನಡ

protest ಸಿದ್ದಾಪುರದಲ್ಲಿ ಬೃಹತ್ ಪ್ರತಿಭಟನೆ 17ರಂದು

ಮಂಜುನಾಥ ಕೆಂಪಸಣ್ಣವರ
ಸಿದ್ದಾಪುರ: ಅರಣ್ಯ ಅತಿಕ್ರಮಣದಾರರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳ ದಬ್ಬಾಳಿಕೆ ವಿಪರೀತವಾಗಿದೆ. ಅನಾದಿ ಕಾಲದಿಂದ ಸಾಗುವಳಿ ಮಾಡುತ್ತ ಬಂದಿರುವ, ವಾಸದ ಮನೆ ಕಟ್ಟಿಕೊಂಡಿರುವ ರೈತರ ಅತಿಕ್ರಮಣ ಜಮೀನುಗಳನ್ನು ಖುಲ್ಲಾಗೊಳಿಸಲು ಕಿರುಕುಳ ನೀಡಲಾಗುತ್ತಿದೆ. ರೈತರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿ ಡಿ. 17ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ protest ನಡೆಸಲಾಗುವುದು ಎಂದು ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿನ ಶಾಸಕರು, ಸಚಿವರು ಅರಣ್ಯ ಅತಿಕ್ರಮಣದಾರರಿಗೆ ನ್ಯಾಯ ಕೊಡಿಸುವ, ಹಕ್ಕುಪತ್ರ ಒದಗಿಸುವ ಭರವಸೆಯ ಮಾತುಗಳನ್ನಾಡಿದ್ದರು. ಕಾಂಗ್ರೆಸ್ ಸರ್ಕಾರ ಬಂದು ಎರಡೂವರೆ ವರ್ಷ ಕಳೆದರೂ ಅತಿಕ್ರಮಣದಾರಿಗೆ ನ್ಯಾಯ ಸಿಕ್ಕಿಲ್ಲ ಎಂದರು.
ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯ ಮಿತಿಮೀರಿದ್ದು ರೈತರಿಗೆ ಕೇಸ್ ಹಾಕುವುದಾಗಿ ಬೆದರಿಸಲಾಗುತ್ತಿದೆ. ರೈತರು ಬೆಳೆದ ಬೆಳೆಗಳನ್ನು ಹಾನಿ ಮಾಡಲಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ರಾಜಕಾರಣ ಮಾಡುತ್ತಿದ್ದಾರೆ. ಅಧಿಕಾರಿಗಳ ದಬ್ಬಾಳಿಕೆ ವಿರೋಧಿಸಿ, ಅತಿಕ್ರಮಣದಾರರಿಗೆ ಧೈರ್ಯ ತುಂಬುವ ದೃಷ್ಟಿಯಿಂದ, ಅತಿಕ್ರಮಣದಾರರಿಗೆ ಸರ್ಕಾರ ಶೀಘ್ರ ಹಕ್ಕುಪತ್ರ ವಿತರಿಸಲು ಆಗ್ರಹಿಸಿ, ಎಲ್ಲ ರೈತರ ಜತೆಗೆ ಪ್ರತಿಭಟನೆ ನಡೆಸಲಾಗುವುದು ಎಂದರು.
ತಾಲೂಕಿನ ಎಲ್ಲ ರಸ್ತೆಗಳಲ್ಲೂ ಹೊಂಡ, ಗುಂಡಿಗಳಿದ್ದು ಸಂಚಾರಕ್ಕೆ ಅಯೋಗ್ಯವಾಗಿವೆ. ಕಳೆದ ವರ್ಷ ಕೂಡ ರಸ್ತೆಗಳ ನಿರ್ವಹಣೆಗೆ ಲೋಕೋಪಯೋಗಿ ಇಲಾಖೆಗೆ ಕೋಟಿಗಟ್ಟಲೆ ಅನುದಾನ ಬಂದಿದ್ದರೂ ಸಮರ್ಪಕ ಕೆಲಸ ಮಾಡದೇ ಶೇ. 80ರಷ್ಟು ಹಣವನ್ನು ಗುಳುಂ ಮಾಡಲಾಗಿದೆ ಎಂದು ಆರೋಪಿಸಿದರು.
ಈಗ ಹೊಂಡಗಳನ್ನು ಸ್ವಚ್ಛಗೊಳಿಸಿ, ಡಾಂಬರು ಹಾಕದೇ, ಕಾಟಾಚಾರದ ಕೆಲಸ ಮಾಡಲಾಗುತ್ತಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡುತ್ತಾರೆ. ವಿಶ್ವೇಶ್ವರ ಹೆಗಡೆಯವರ ಶಾಸಕತ್ವದ ಅವಧಿಯಲ್ಲಿ ಸಾಗರ ರಸ್ತೆಯ ಚೂರಿಕಟ್ಟೆಯಿಂದ ಕವಂಚೂರುವರೆಗೆ ರಸ್ತೆ ಕಾಮಗಾರಿಗೆ 6 ಕೋಟಿ ರೂ. ಮಂಜೂರಾಗಿದೆ. ಗುತ್ತಿಗೆದಾರರಿಗೆ ಕರಾರು ಆಗಿದ್ದು, ಈಗಿನ ಶಾಸಕರು ಪೂಜೆ ಮಾಡಿದ್ದರೂ ಈವರೆಗೆ ಕಾಮಗಾರಿ ನಡೆದಿಲ್ಲ. ಇಲಾಖೆ ಅಧಿಕಾರಿಗಳು ನಿರ್ಲಕ್ಷೃ ಬಿಟ್ಟು ರಸ್ತೆ ನಿರ್ವಹಣೆ ಕಾಮಗಾರಿ ಸಮರ್ಪಕವಾಗಿ ನಡೆಸಲಿ ಎಂದರು.