ಗೋಕರ್ಣದ ತಾರಮಕ್ಕಿಯಲ್ಲಿ ಆಷಾಢ ಅಮಾವಾಸ್ಯೆ ಬುಧವಾರ ಸಂಜೆ ನಡೆದ ಹುಳಸೇಕೇರಿ ಹಾಲಕ್ಕಿ ಒಕ್ಕಲಿಗರ ಸಾಂಪ್ರದಾಯಿಕ ಮಹಿಳೆಯ ಜತೆಗಿನ ಮಹಿಳೆಯ ಮದುವೆ. ( Marriage) 
ಉತ್ತರ ಕನ್ನಡ

ಹೆಣ್ಣು-ಹೆಣ್ಣಿನ ನಡುವೆ ಮದುವೆ! Marriage

ಪ್ರಮುಖ ಮುಖ್ಯಾಂಶಗಳು

  • ಗೋಕರ್ಣದಲ್ಲಿ ಮಳೆ ದೇವರ ಪ್ರೀತ್ಯರ್ಥ ಆಚರಣೆ
  • ಹಾಲಕ್ಕಿಗಳ ಸಾಂಪ್ರದಾಯಿಕ ದಾದುಮ್ಮನ ಮದುವೆ
  • ಜಾನಪದ ಹಳೆಯ ಹಾಡುಗಳೆ ಮಂತ್ರ
ಹಾಲಕ್ಕಿಗಳ ಗ್ರಾಮ್ಯ ಭಾಷೆಯಲ್ಲಿ ದಾದುಮ್ಮ ಎಂದು ಕರೆಯಲ್ಪಟ್ಟ ಮಳೆ ದೇವರಾದ ದೇವೇಂದ್ರನ ಪ್ರೀತ್ಯರ್ಥ ಈ ಮದುವೆ ಸಂಘಟಿತವಾಗುತ್ತದೆ.
ಮಹಿಳೆಯ ಜತೆಗೆ ಮಹಿಳೆಯ ವಿವಾಹದ ಈ ಪದ್ಧತಿ ಅನಾದಿಯಿಂದ ಆಚರಿಸುತ್ತ ಬರಲಾಗಿರುವುದು ವಿಶೇಷ. ಈ ವಿವಾಹದಲ್ಲಿ ಸಂಪೂರ್ಣವಾಗಿ ಜಾನಪದ ಹಳೆಯ ಹಾಡುಗಳೆ ಮಂತ್ರವಾಗಿ ಮತ್ತು ಮಹಿಳೆಯರೆ ಪ್ರಧಾನವಾಗಿ ವೈವಾಹಿಕ ವಿಧಿ ನಡೆಸಲ್ಪಡುತ್ತದೆ.
ಈ ವರ್ಷದ ಮದುವೆಯಲ್ಲಿ ಲಕ್ಷ್ಮೀ ತುಳಸು ಗೌಡ ವರನಾಗಿ ಮತ್ತು ಲಕ್ಷ್ಮೀ ಹೊಲೆಯಪ್ಪ ಗೌಡ ವಧುವಾಗಿ ಪಾಲ್ಗೊಂಡರು. ಊರಗೌಡರಾದ ಆನಂದು ಬೀರಪ್ಪ ಗೌಡ ಅವರ ಮನೆಯಲ್ಲಿ ವಿವಾಹ ತರುವಾಯದ ಉಡುಗೊರೆ ಶಾಸ್ತ್ರ ಇನ್ನಿತರ ಕಾರ್ಯಕ್ರಮಗಳು ನಡೆದವು.