ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು 
ಉತ್ತರ ಕನ್ನಡ

ಮಂಕಿ ಪಪಂ ಮೊದಲ ಚುನಾವಣೆ ಬಿಜೆಪಿ ಜಯಭೇರಿ

ಸುಭಾಸ ಹೆಗಡೆ ಧೂಪದಹೊಂಡ
ಬುಧವಾರ ಹೊನ್ನಾವರ ತಹಸೀಲ್ದಾರ್ ಕಚೇರಿಯಲ್ಲಿ ಮತ ಎಣಿಕೆ ನಡೆಯಿತು.
ಒಟ್ಟು 20 ವಾರ್ಡ್ ಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಅದರಲ್ಲಿ ಎರಡು ವಾರ್ಡ್ ಗಳಿಗೆ ಕಾಂಗ್ರೆಸ್ ನ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದರು. ಡಿ.21 ರಂದು 18 ವಾರ್ಡ್ ಗಳಲ್ಲಿ ಮತದಾನ ನಡೆದಿತ್ತು. ಅದರಲ್ಲಿ 12 ಸ್ಥಾನವನ್ನು ಬಿಜೆಪಿ ಗೆದ್ದು, ಅಧಿಕಾರ ಹಿಡಿಯಲು ಅರ್ಹವಾಗಿದೆ.
ಕಾಂಗ್ರೆಸ್ 6 ಸ್ಥಾನಗಳನ್ನು ಮಾತ್ರ ಗೆದ್ದಿದ್ದು ಎರಡು ಅವಿರೋಧ ಆಯ್ಕೆ ಸೇರಿ 8 ಸ್ಥಾನ ಪಡೆದುಕೊಂಡಿದೆ.
2020 ರಲ್ಲಿ ರಚನೆಯಾದ ಮಂಕಿ ಪಟ್ಟಣ ಪಂಚಾಯಿತಿಗೆ ಇದು ಮೊದಲ ಚುನಾವಣೆಯಾಗಿದೆ. ಭಟ್ಕಳ ಮಾಜಿ ಶಾಸಕ ಸುನೀಲ ನಾಯ್ಕ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದರು.