- ಜಲಾಂತರ್ಗಾಮಿ ನಿರೋಧಕ ನೌಕೆ
- ಕೊಚ್ಚಿ ಶಿಪ್ ಯಾರ್ಡ್‌ನಲ್ಲಿ ನಿರ್ಮಾಣ
- ಕಾರವಾರದಲ್ಲಿ ಜು.22 ರಂದು ಕಾರ್ಯಕ್ರಮ
ಕಾರವಾರ: ಭಾರತೀಯ ತಂತ್ರಜ್ಞಾನದಲ್ಲಿ ತಯಾರಿಸಲಾದ ಮಾಲ್ವಾಣ್ ಯುದ್ಧ ನೌಕೆ ಭಾರತೀಯ ನೌಕಾಸೇನೆಗೆ ಸೇರ್ಪಡೆಯಾಗಲು ಸಿದ್ಧವಾಗಿದ್ದು, ಜು.22 ರಂದು ಕಾರವಾರದಲ್ಲಿ ಸಮಾರಂಭ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ.
ನೌಕಾಸೇನೆ ಸಂಬಧ ತನ್ನ ಅಽಕೃತ ಜಾಲತಾಣಗಳಲ್ಲಿ ಪ್ರಚಾರ ನಡೆಸಿದೆ. ಕಾರವಾರದಲ್ಲಿ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ ವಾಯುಸೇನೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ವಹಿಸುವರು. ಪಶ್ಚಿಮ ನೌಕಾ ಕಮಾಂಡ್‌ನ್ ಮುಖ್ಯಸ್ಥ ವೈಸ್ ಅಡ್ಮಿರಲ್ ಸಂಜಯ್ ವತ್ಸಾಯನ್, ಕೊಚ್ಚಿನ್ ಶಿಪ್‌ಯಾರ್ಡ್ನ ಪ್ರಮುಖರು ಆಗಮಿಸುವರು.
ಕೇರಳ ಕೊಚ್ಚಿಯ ಕೊಚ್ಚಿನ್ ಶಿಪ್‌ಯಾರ್ಡ್ನಲ್ಲಿ ನಿರ್ಮಾಣವಾದ ಜಲಾಂತರ್ಗಾಮಿಗಳನ್ನು ಹೊಡೆದುರುಳಿಸಬಹುದಾದ ಅತ್ಯಾಧುನಿಕ ಯುದ್ಧ ಸಾಮಗ್ರಿಗಳನ್ನು ಹೊಂದಿದ ನೌಕೆಯಾಗಿದೆ. ಇದು ಮಾಹೆ-ಕ್ಲಾಸ್‌ನಲ್ಲಿ ಭಾರತೀಯ ಸೇನೆ ನಿರ್ಮಿಸುತ್ತಿರುವ ಮೂರು ನೌಕೆಗಳಲ್ಲಿ ಇದು ಎರಡನೇಯದಾಗಿದೆ.
ಶೇ.80 ಕ್ಕೀತ ಹೆಚ್ಚು ಭಾರತೀಯ ತಂತ್ರಜ್ಞಾನ
ಸುಮಾರು 13,440 ಕೋಟಿ ರೂ. ಮೊತ್ತದಲ್ಲಿ ಶೇ.80 ಕ್ಕಿಂತ ಹೆಚ್ಚು ಭಾರತೀಯ ತಂತ್ರಜ್ಞಾನದಲ್ಲಿ ನೌಕೆಯನ್ನು ನಿರ್ಮಿಸಲಾಗಿದೆ. ಕೊಚ್ಚಿಯ ಸ್ಮಾರ್ಟ್ ಇಂಜಿನಿಯರಿAಗ್ ಆ್ಯಂಡ್ ಡಿಸೈನ್ ಸೊಲ್ಯೂಶನ್ ಕಂಪನಿಯ ಇಂಜಿನಿಯರ್‌ಗಳು ಇದರ ಮೂಲ ಸ್ವರೂಪವನ್ನು ಡಿಸೈನ್ ಮಾಡಿದ್ದಾರೆ. ಡಿಆರ್‌ಡಿಒ ಸಿದ್ಧಪಡಿಸಿದ ಸೋನಾರ್, ಶಸ್ತಾçಸ್ತçಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಬಿಇಎಲ್, ಮಹೀಂದ್ರಾ ಮುಂತಾದ ಭಾರತೀಯ ಕಂಪನಿಗಳ ಬಿಡಿ ಭಾಗಗಳನ್ನು ಹಡಗಿನ ಇನ್ನಿತರ ವಿವಿಧ ವಿಭಾಗಳಲ್ಲಿ ಅಳವಡಿಸಲಾಗಿದೆ. ಕೆಲವು ಸಾಫ್ಟ್ವೇರ್‌ಗಳನ್ನು ಮತ್ರ ಪಿನ್‌ಲ್ಯಾಂಡ್‌ನಿAದ ಪಡೆಯಲಾಗಿದೆ. 2023 ರ ಫೆಬ್ರವರಿಯಲ್ಲಿ ಹಡಗಿನ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಇದೇ ಮಾರ್ಚ್ನಲ್ಲಿ ನಿರ್ಮಾಣ ಕಾರ್ಯ ಪೂರ್ಣವಾಗಿ ಈಗಾಗಲೇ ಪರೀಕ್ಷಾರ್ಥ ಓಡಾಟವೂ ಮುಗಿದಿದೆ.
ವಿಶೇಷತೆ:
78 ಮೀಟರ್ ಉದ್ದ 11.26 ಮೀಟರ್ ಅಗಲ ಹಾಗೂ 2.7 ಮೀಟರ್‌ನಷ್ಟು ಆಳವಿರುವ ನೌಕೆ 800 ಟನ್‌ಗೂ ಅಽಕ ಭಾರವಿದೆ. ಗಂಟೆಗೆ 25 ನಾಟಿಕಲ್ ಮೈಲ್ ವೇಗದಲ್ಲಿ ತೆರಳಬಲ್ಲದು. 7 ಅಽಕಾರಿಗಳು ಸೇರಿ 57 ಸೇಲರ್‌ಗಳು ಇದರಲ್ಲಿ ಕಾರ್ಯ ನಿರ್ವಹಿಸುವರು. ಗಾತ್ರದಲ್ಲಿ ಚಿಕ್ಕದಾಗಿದ್ದರೂ ಶಕ್ತಿಶಾಲಿಯಾಗಿರುವ ಈ ಹಡಗು, ಕಡಿಮೆ ನೀರಿನಲ್ಲಿ ತನ್ನ ಪ್ರಭುತ್ವವನ್ನು ಸಾಧಿಸಲು ಅಗತ್ಯವಿರುವ ಚುರುಕುತನ, ನಿಖರತೆ ಮತ್ತು ಸಹಿಷ್ಣುತೆಯನ್ನು ಹೊಂದಿದೆ. ಜಲಾಂತರ್ಗಾಮಿಗಳನ್ನು ಹೊಡೆದು ಮುಳುಗಿಸಬಹುದಾದ ಟಾರ್ಪಿಡೋ ಲಾಂಚರ್, ರಾಕೆಟ್ ಲಾಂಚರ್‌ಗಳನ್ನು, ಗನ್‌ಗಳನ್ನು ಹಡಗಿನಲ್ಲಿ ಅಳವಡಿಸಲಾಗಿದೆ. ನೌಕೆ ಸೇರ್ಪಡೆಯಿಂದ ಸೇನೆಗೆ ಮತ್ತಷ್ಟು ಬಲ ಬರಲಿದೆ.
ಏಕೆ ಈ ಹೆಸರು
ಸಾಮಾನ್ಯವಾಗಿ ಯುದ್ಧ ನೌಕೆಗಳಿಗೆ ಒಂದೊಂದು ಪ್ರಮುಖ ಊರುಗಳ ಹೆಸರಿಡುವ ವಾಡಿಕೆ ಇದೆ. ಮಾಲ್ವಾಣ್ ಎಂಬುದು ಮಹಾರಾಷ್ಟç ಸಿಂದದುರ್ಗ ಜಿಲ್ಲೆಯ ಕರಾವಳಿಯ ಪ್ರಸಿದ್ಧ ಊರು. 1983 ರಿಂದ 2003 ರ ಅವಽಯಲ್ಲಿ ಭಾರತೀಯ ನೌಕೆಯಲ್ಲಿ ಇದೇ ಹೆಸರಿನ ಸಣ್ಣ ಹಡಗು (ಮೈನ್‌ಸ್ವೀಪರ್)ಕಾರ್ಯ ನಿರ್ವಹಿಸಿತ್ತು. ಈಗ ಈ ನೌಕೆಗೆ ಹೆಸರಿಡಲಾಗುತ್ತಿದೆ. ನೌಕಾಸೇನೆ ಸೇರಿದ ನಂತರ ಈ ಹಡಗು ಕಾರವಾರದಿಂದಲೇ ಕಾರ್ಯ ನಿರ್ವಹಿಸಲಿದೆ.