ಯಲ್ಲಾಪುರದ ಕೆ. ಮಿಲನ ಕ್ರಾಸ್ ಬಳಿ ಪಲ್ಟಿಯಾದ ಲಾರಿ.
ಯಲ್ಲಾಪುರ: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಪಟ್ಟಣದ ಕೆ.ಮಿಲನ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಂಭವಿಸಿದೆ. ಬಳ್ಳಾರಿ ಕಡೆಯಿಂದ ಕೇರಳದ ಕಡೆಗೆ ಸಿಮೆಂಟ್ ತುಂಬಿಕೊಂಡು ಹೊರಟಿದ್ದ ಲಾರಿ ಪಲ್ಟಿಯಾಗಿದ್ದು, ಚಾಲಕನ ಕೈ ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಜಖಂಗೊಂಡಿದ್ದು, ಸಿಮೆಂಟ್ ಚೀಲಗಳು ರಸ್ತೆಯಲ್ಲಿ ಬಿದ್ದಿವೆ. ಘಟನೆಯಿಂದಾಗಿ ಕೆಲ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಸ್ಥಳಕ್ಕೆ ಬಂದ ಪೊಲೀಸರು ಸಂಚಾರ ಸುಗಮಗೊಳಿಸಿದರು.