ಲಿಕ್ಕರ್ ತುಂಬಿದ್ದ ಲಾರಿಯನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದರು.
ಕಾರವಾರ: ಇಂಪೋರ್ಟ್ ಎಕ್ಸ್ಪೋರ್ಟ್ ರಹದಾರಿ ಪ್ರಮಾಣಪತ್ರ ಮುಕ್ತಾಯವಾಗಿದ್ದ ಮದ್ಯ ತುಂಬಿದ ಲಾರಿಯೊಂದನ್ನು ಅಬಕಾರಿ ಅಽಕಾರಿಗಳು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.
ಮಾಜಾಳಿ ತನಿಖಾ ಠಾಣೆಯಲ್ಲಿ ತಪಾಸಣೆಯ ವೇಳೆ ಮಾ.10 ಕ್ಕೆ ರಹದಾರಿ ಪ್ರಮಾಣಪತ್ರ ಮುಗಿದ ಲಾರಿಯು ಗೋವಾದತ್ತ ತೆರಳುವಾಗ ವಶಕ್ಕೆ ಪಡೆದಿದ್ದಾರೆ. ಅದಲ್ಲಿ ಒಟ್ಟು 1200 ಪೆಟ್ಟಿಗೆ ಮದ್ಯ ಹಾಗೂ ಲಾರಿ ಸೇರಿ ಒಟ್ಟು ಮೌಲ್ಯ 35 ಲಕ್ಷ ರೂ.ಗಳಾಗಿವೆ. ಮದ್ಯ ಸಾಗಣೆಯ ವೇಳೆ ಅದಕ್ಕೆ ನಿಗದಿತ ಅವಽಯ ಪರವಾನಗಿ ಪತ್ರ ನೀಡಲಾಗುತ್ತದೆ. ಆ ಅವಽಯಲ್ಲೇ ಅದನ್ನು ಸಾಗಣೆ ಮಾಡಬೇಕು.