ಉತ್ತರ ಕನ್ನಡ ಮತ್ತು ಶಿವಮೊಗ್ಗ ಅಂತರ ಜಿಲ್ಲಾಮಟ್ಟದ ಶರಾವತಿ ಶರಾವತಿ ಪಂಪ್ ಸ್ಟೋರೇಜ್ (ENVIRONMENT)ಸಾಧಕ-ಬಾಧಕಗಳ ಕುರಿತು ಸಾಗರದಲ್ಲಿ ಏರ್ಪಡಿಸಿದ್ದ ಭಾಷಣ ಸ್ಪರ್ಧೆಯನ್ನು ಎಂ.ಬಿ. ನಾಯ್ಕ ಕಡಕೇರಿ ಉದ್ಘಾಟಿಸಿದರು.
ಸಿದ್ದಾಪುರ: ಮರ ಕಡಿಯುವುದು ಸುಲಭ, ಆದರೆ ಗಿಡ ನೆಟ್ಟು ಬೆಳೆಸುವುದು ಕಷ್ಟ.(environment) ಪರಿಸರವನ್ನು ಪ್ರಾಮಾಣಿಕವಾಗಿ ರಕ್ಷಿಸಬೇಕಿದೆ.
ಪರಿಸರದ ಕುರಿತಾದ ತಪ್ಪುಗಳನ್ನು ಪ್ರಶ್ನಿಸದಿದ್ದರೆ ಮುಂದೊಂದು ದಿನ ಬೆನ್ನಿಗೆ ಆಮ್ಲಜನಕದ ಸಿಲಿಂಡರ್ ಕಟ್ಟಿಕೊಂಡು ಓಡಾಡುವ ಪರಿಸ್ಥಿತಿ ಬರಬಹುದು ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಎಚ್ಚರಿಸಿದರು.
ಸಾಗರದ ಸೈನ್ಸ್ ಸೆಂಟರ್‌ನಲ್ಲಿ ಉತ್ತರ ಕನ್ನಡ ಮತ್ತು ಶಿವಮೊಗ್ಗ ಅಂತರ ಜಿಲ್ಲಾಮಟ್ಟದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಸಾಧಕ-ಬಾಧಕಗಳು ಕುರಿತು ವಿವಿಧ ಸಂಘಟನೆಗಳು ಆಯೋಜಿಸಿದ್ದ ಭಾಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಯುವಜನತೆ ಪರಿಸರದೊಂದಿಗಿನ ಒಡನಾಟ ಕಳೆದುಕೊಳ್ಳುತ್ತಿದ್ದಾರೆ. ನಮ್ಮ ಸಂಸ್ಕೃತಿ ಮತ್ತು ಪರಿಸರಕ್ಕೆ ಅವಿನಾಭಾವ ಸಂಬಂಧವಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಸ್ಯ ವಿಜ್ಞಾನಿ ಎಂ.ಬಿ. ನಾಯ್ಕ ಕಡಕೇರಿ, ಪಶ್ಚಿಮಘಟ್ಟದ ಅಪರೂಪದ ಸಸ್ಯಪ್ರಭೇದಗಳ ಬಗ್ಗೆ ವಿವರಿಸಿ ಈ ಯೋಜನೆ ಜಾರಿಯಾದರೆ ಆಗುವ ಅನಾಹುತಗಳ ಬಗ್ಗೆ ತಮ್ಮ ಅಧ್ಯಯನದ ಅನುಭವಗಳನ್ನು ಹಂಚಿಕೊಂಡರು.
ಪರಿಸರ ಸಂರಕ್ಷಣಾವಾದಿ ಅಖಿಲೇಶ್ ಚಿಪ್ಪಿ, ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಪಾಲ್ಗೊಂಡ ಸಾಹಿತಿ-ಪತ್ರಕರ್ತ ಗಂಗಾಧರ ಕೊಳಗಿ, ನಿವೃತ್ತ ಪ್ರಾಚಾರ್ಯ ಎಚ್.ಬಿ.ಪಂಚಾಕ್ಷರಯ್ಯ, ಹಿರಿಯ ವಕೀಲ ಎಂ.ಆರ್.ಪಾಟೀಲ ಸೊರಬ ಮಾತನಾಡಿದರು.
ಫಲಿತಾಂಶ: ಶಿರಸಿ ಅರಣ್ಯ ಕಾಲೇಜಿನ ಶ್ರೀನಿಧಿ ರಾಮಚಂದ್ರ ನಾಯ್ಕ ಪ್ರಥಮ, ಯಶಸ್ವಿನಿ ಎನ್. ದ್ವಿತೀಯ, ಶಿವಮೊಗ್ಗದ ಪ್ರೇಮಾನಂದ ಜಿ. ತೃತೀಯ ಬಹುಮಾನ ಪಡೆದರು. ಸೊರಬದ ಗಗನದೀಪ್‌ರಾವ್‌ನಾಲ್ಕನೇ ಹಾಗೂ ಸಾಗರ ಗಂಗೋತ್ರಿ ಕಾನೂನು ಕಾಲೇಜಿನ ಅಕ್ಷತಾ ವಾಳದ್ ಮತ್ತು ಸೊರಬ ಕಾಲೇಜಿನ ಉಪನ್ಯಾಸಕಿ ಪವಿತ್ರಾ ಎ.ವಿ. ಐದನೇ ಸ್ಥಾನ ಹಂಚಿಕೊಂಡರು.
ಸುಮಾರು 30 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಎಂ.ಆರ್.ಪಾಟೀಲ ಸ್ವಾಗತಿಸಿದರು. ಕಾಂತಾರ ಯಜ್ಞ ಸಂಘಟನೆಯ ಮಂಜುನಾಥ ಎಸ್.ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಭಾರತಿ ಸಂಪದದ ಗಣಪತಿ ಹೆಗಡೆ ವಡ್ಡಿನಗದ್ದೆ ವಂದಿಸಿದರು. ನಿವೃತ್ತ ಉಪಾಧ್ಯಾಯ ಅಶೋಕ ಕೆ.ವಿ. ನಿರ್ವಹಿಸಿದರು.