ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿ ಮಾತೃವಂದನಾ ಕಾರ್ಯಕ್ರಮವನ್ನು ತಹಸೀಲ್ದಾರ್​ ಮಂಜುಳಾ ನಾಯಕ ಉದ್ಘಾಟಿಸಿದರು. ನ್ಯಾಯಾಧೀಶೆ ರಾಜೇಶ್ವರಿ ಹೆಗಡೆ. ಆರ್​.ಎಸ್​. ಹೆಗಡೆ, ದೇವರಾಜ ಹಿತ್ತೊಲಕೊಪ್ಪ, ಶ್ರೀಕಾಂತ ಹೆಗಡೆ, ನಾಗರಾಜ ಭಟ್ಟ ಇತರರಿದ್ದರು. 
ಉತ್ತರ ಕನ್ನಡ

ಬಳಕೆಯೊಂದಿಗೆ ಮಾತೃಭಾಷೆ ಉಳಿವಿಗೆ ಪ್ರಯತ್ನಿಸೋಣ

ಭುವನಗಿರಿಯಲ್ಲಿ ಮಾತೃವಂದನಾ ಕಾರ್ಯಕ್ರಮ

ಸಿದ್ದಾಪುರ: ನಾವು ಸ್ವಲ್ಪ ಇಂಗ್ಲೀಷ್​ ಕಲಿತಿದ್ದೇವೆಂದು ಅದೇ ಭಾಷೆಯಲ್ಲಿ ಮಾತನಾಡಲು ಬಯಸಬಾರದು. ಕನ್ನಡದವರು ಕನ್ನಡವನ್ನೇ ಮಾತನಾಡಿ ಮಾತೃಭಾಷೆಯ ಉಳಿವಿಗೆ ಪ್ರಯತ್ನಿಸಬೇಕು. ಕರ್ನಾಟಕ ಮತ್ತು ಕನ್ನಡ ಭಾಷೆ ಎತ್ತರಕ್ಕೆ ಬೆಳೆಯಲು ಕಾರಣಿಕರ್ತರಾದ ಎಲ್ಲರನ್ನೂ ಸಹ ಸ್ಮರಿಸಿಕೊಳ್ಳಬೇಕು. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಭಾಷೆ ಸಂಸತಿಯನ್ನು ತಿಳಿಸುವ ಅನಿವಾರ್ಯತೆ ಇದೆ ಎಂದು ಧಾರವಾಡ ಉಚ್ಚ ನ್ಯಾಯಾಲಯದ ನ್ಯಾಯಾಧೀಶೆ ರಾಜೇಶ್ವರಿ ಹೆಗಡೆ ಹೇಳಿದರು.

ತಾಲೂಕಿನ ಭುವನಗಿರಿಯ ಶ್ರೀ ಭುವನೇಶ್ವರಿ ದೇವಾಲಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಾತೃವಂದನಾ ಸಮಿತಿ, ಭುವನಗಿರಿ ದೇವಾಲಯದ ಸಹಕಾರದೊಂದಿಗೆ ಹಮ್ಮಿಕೊಂಡ ಮಾತೃವಂದನಾ ಕಾರ್ಯಕ್ರಮದಲ್ಲಿ ಶ್ರೀಮಾತಾ ಅನುಗ್ರಹ ಗೌರವ ಸನ್ಮಾನ ಸ್ವೀಕರಿಸಿ ಭಾನುವಾರ ಅವರು ಮಾತನಾಡಿದರು.

ಹೆಚ್ಚೆಚ್ಚು ಕನ್ನಡ ಭಾಷೆಯನ್ನು ಬಳಸಿದರೆ ಮಾತ್ರ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯ. ಇಂತಹ ಕಾರ್ಯಕ್ರಮಗಳಲ್ಲಿ ಸಾಧಕರನ್ನು ಗೌರವಿಸುವುದರಿಂದ ಯುವ ಪೀಳಿಗೆಗೆ ಸ್ಪೂರ್ತಿ ನೀಡಿದಂತಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದರ್​ ಮಂಜುಳಾ ಕೆ. ನಾಯಕ ವಿದ್ಯೆಯ ಅಧಿದೇವತೆ ನೆಲೆಸಿರುವ ತಾಲೂಕಿನಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಿದೆ. ಸುತ್ತಲೂ ಹಸಿರನ್ನು ಹೊಂದಿರುವ ಈ ಪ್ರದೇಶ ಅದ್ಬುತವಾದ ತಾಣವಾಗಿದೆ. ತಾಲೂಕಿನಲ್ಲಿ ಪಾರಂಪರಿಕ ಗಿಡಮೂಲಿಕೆಗಳನ್ನು ಬಳಸಿ ಔಷಧ ನೀಡುವ ಹಲವಾರು ನಾಟಿ ವೈದ್ಯರಿದ್ದಾರೆ. ಅಂತಹವರನ್ನು ಗುರುತಿಸುವ ಕೆಲಸವಾಗಬೇಕಿದೆ ಎಂದರು.

ಶ್ರೀಮಾತಾ ಅನುಗ್ರಹ ಗೌರವ ಸನ್ಮಾನ:

ಸಿದ್ದಾಪುರ ಹಲಗೇರಿ ಮೂಲದ ಪ್ರಸ್ತುತ ಧಾರವಾಡ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಹೆಗಡೆ, ಮೈಸೂರು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ಅಧ್ಯ ಡಾ. ಎಸ್​.ಎನ್​. ಹೆಗಡೆ ಗುಡ್ಡೇಕಣ ಮತ್ತು ಯಗಾನ ಕಲಾವಿದ ಹೆಗ್ಗರಣಿಯ ರುಪತಿ ನಾಯ್ಕ ಅವರಿಗೆ ಶ್ರೀಮಾತಾ ಅನುಗ್ರಹ ಗೌರವ ಸನ್ಮಾನ ನೀಡಿ ಗೌರವಿಸಲಾಯಿತು.

ಕಳೆದ ಸಾಲಿನ ಎಸ್​ಎಸ್​ಎಲ್​ಸಿ ಪರೀೆಯಲ್ಲಿ ತಾಲೂಕಿಗೆ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದ ರಜತ ವಿನಾಯಕ ಶೇಟ್​, ದಿಶಾ ನಾಯ್ಕ, ಹಂಸನಿ ಹೆಗಡೆ ಮತ್ತು ಮಾನ್ಯಾ ಭಟ್ಟ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ದೇವಾಲಯದ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು ಅಧ್ಯಕ್ಷತೆ ವಹಿಸಿದ್ದರು. ಮಾತೃ ವಂದನಾ ಸಮಿತಿ ಗೌರವಾಧ್ಯ ಎ.ಪಿ. ಭಟ್ಟ ಮುತ್ತಿಗೆ, ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ವಿಶ್ರಾಂತ ಮುಖ್ಯೋಪಾಧ್ಯಾಯ ಆರ್​.ಎಸ್​. ಹೆಗಡೆ ಇದ್ದರು.

ರಾಜೇಶ್ವರಿ ಹೆಗಡೆ ಡೊಂಬೆಕೈ, ಸುಜಯ್​ ಭಟ್ಟ ಮುತ್ತಿಗೆ, ಮಂಜುನಾಥ ಹೆಗಡೆ ಮರಲಿಗೆ ಸನ್ಮಾನ ಪತ್ರ ವಾಚಿಸಿದರು. ನಾಗವೇಣಿ ಭಟ್ಟ ಮುತ್ತಿಗೆ ಸಂಗಡಿಗರು ಪ್ರಾಥಿರ್ಸಿದರು. ಮಾತೃ ವಂದನಾ ಸಮಿತಿ ಕಾರ್ಯಾಧ್ಯಕ್ಷ ನಾಗರಾಜ ಭಟ್ಟ ಕೆಕ್ಕಾರ್​ ಪ್ರಸ್ತಾವಿಕ ಮಾತನಾಡಿದರು. ದೇವಾಲಯ ಆಡಳಿತ ಮಂಡಳಿ ಉಪಾಧ್ಯಕ್ಷ ಚಂದ್ರಕಾಂತ ಹೆಗಡೆ ಸ್ವಾಗತಿಸಿದರು. ಗಣಪತಿ ಹೆಗಡೆ ಗುಂಜಗೋಡು ನಿರ್ವಹಿಸಿದರು. ಪ್ರಶಾಂತ ಹೆಗಡೆ ಕಾಶಿಗದ್ದೆ ವಂದಿಸಿದರು.