ಕುಮಟಾದ ನಾದಶ್ರೀ ಕಲಾಕೇಂದ್ರದಲ್ಲಿ ರೋಟರಿ ಕ್ಲಬ್ ಪದಗ್ರಹಣ ಸಮಾರಂಭದಲ್ಲಿ ಗಣ್ಯರು ರೋಟರಿ ಧ್ಯೇಯವಾಕ್ಯ ಅನಾವರಣಗೊಳಿಸಿದರು. ಡಾ. ಜೋರ್ಸನ್ ರ್ನಾಂಡೀಸ್, ಜಿತೇಂದ್ರ ವಿ. ತನ್ನಾ, ರಮೇಶ ವೈದ್ಯ, ಡಾ. ಸುಮನ್ ಹೆಗಡೆ, ಕಿರಣ ನಾಯಕ, ಗುಗುರಾಜ ಶೆಟ್ಟಿ, ವಿನಾಯಕ ಹೆಗಡೆ ಇತರರಿದ್ದರು.
ಕುಮಟಾ: ಸಮಾಜದಲ್ಲಿ ಶಾಶ್ವತ ಸಕಾರಾತ್ಮಕ ಪರಿಣಾಮ ಉಂಟುಮಾಡುವ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ರೋಟರಿಯ ಧ್ಯೇಯವನ್ನು ಸಾಕಾರಗೊಳಿಸಬೇಕು ಎಂದು ರೋಟರಿಯ ಮಾಜಿ ಜಿಲ್ಲಾ ಗವರ್ನರ್ ಡಾ. ಜೋರ್ಸನ್ ರ್ನಾಂಡಿಸ್ ಹೇಳಿದರು.
ನಾದಶ್ರೀ ಕಲಾಕೇಂದ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರೋಟರಿ ಕ್ಲಬ್ ಪ್ರಸಕ್ತ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಖ್ಯ ಅತಿಥಿ ಕರ್ಣಾಟಕ ಬ್ಯಾಂಕ್ನ ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ರಮೇಶ ವೈದ್ಯ ಅವರು ರೋಟರಿ ವರ್ಷದ ಧ್ಯೇಯವಾಕ್ಯ ಅನಾವರಣಗೊಳಿಸಿ ಮಾತನಾಡಿ, ಸಮಾಜ ಸೇವೆಯಲ್ಲಿ ರೋಟರಿಯ ಪಾತ್ರ ಮಾದರಿಯಾಗಿದೆ. ಕುಮಟಾ ರೋಟರಿ ಕ್ಲಬ್ ಸೇವಾ ಕಾರ್ಯಗಳಿಗೆ ಕರ್ನಾಟಕ ಬ್ಯಾಂಕ್ ಸದಾ ಬೆಂಬಲ ನೀಡಲಿದೆ. ಮಹಿಳಾ ಸಬಲೀಕರಣ ಕಾರ್ಯಕ್ಕಾಗಿ "ಪಿಂಕ್ ಆಟೋ' ಕೊಡುತ್ತೇವೆ ಎಂದರು.
ರೋಟರಿ ಜಿಲ್ಲಾ ಝೊನಲ್ ಕೋ&ಆಡಿರ್ನೇಟರ್ ಜಿತೇಂದ್ರ ವಿ. ತನ್ನಾ ಮಾತನಾಡಿದರು.
ರೋಟರಿ ಕ್ಲಬ್ ನೂತನ ಅಧ್ಯರಾಗಿ ಸಿ.ಎ. ವಿನಾಯಕ ಎಸ್. ಹೆಗಡೆ, ಕಾರ್ಯದಶಿರ್ಯಾಗಿ ಗುರುರಾಜ ಶೆಟ್ಟಿ, ಖಜಾಂಚಿಯಾಗಿ ಗಣೇಶ ನಾಯ್ಕ, ಆನ್ಸ್ ತಂಡದ ಅಧ್ಯೆಯಾಗಿ ಸಂಧ್ಯಾ ಹೆಗಡೆ, ಕಾರ್ಯದಶಿರ್ಯಾಗಿ ರಶ್ಮಿ ಶೆಟ್ಟಿ, ಖಜಾಂಚಿಯಾಗಿ ಉಷಾ ಗಣೇಶ ಹಾಗೂ ನೂತನ ನಿರ್ದೇಶಕರು, ಇನ್ನಿತರರು ಅಧಿಕಾರ ಸ್ವೀಕರಿಸಿದರು. ಡಿ.ಜಿ.ಎನ್.ಅಶೋಕ ನಾಯ್ಕ ಅವರು ದಿ. ವಿಷ್ಣು ಕಾಮತ ಸ್ಮರಣಾರ್ಥ ಸ್ಥಾಪಿಸಿದ ಅತ್ಯುತ್ತಮ ರೊಟೇರಿಯನ್ ಪ್ರಶಸ್ತಿಯನ್ನು ಮಂಜುನಾಥ ಅಂಬಿಗ ಅವರಿಗೆ ನೀಡಲಾಯಿತು. 30 ಪೌರಕಾಮಿರ್ಕರಿಗೆ ರೇನ್ಕೋಟ್ ವಿತರಿಸಲಾಯಿತು.
ಸಂಧ್ಯಾ ಹೆಗಡೆ ಪ್ರಾಥಿರ್ಸಿದರು. ಕಿರಣ ನಾಯಕ ಸ್ವಾಗತಿಸಿದರು. ನಿಖಿಲ್ ೇತ್ರಪಾಲ ವಾಷಿರ್ಕ ವರದಿ ಮಂಡಿಸಿದರು. ಪರಿಚಯಿಸಿದರು. ಜೈವಿಠ್ಠಲ ಕುಬಾಲ, ಡಾ. ಶ್ರೀದೇವಿ ಭಟ್ ನಿರೂಪಿಸಿದರು. ಕಾರ್ಯದಶಿರ್ ಗುರುರಾಜ ಶೆಟ್ಟಿ ವಂದಿಸಿದರು. ವ್ಯಾಸ್ ಕಾಮತ್, ಡಾ. ವಾಗೀಶ ಭಟ್, ವಿಶಾಲ್ ಶೇಟ್, ಯೋಗೇಶ್ ಕೊಡ್ಕಣಿ ನಿರ್ವಹಿಸಿದರು.