ಯಲ್ಲಾಪುರದಲ್ಲಿ ಬೆಟ್ಟ ಬಳಕೆದಾರ ಹಕ್ಕು ಸಂರಣೆ, ಬಳಕೆ ಜಾಗೃತಿ ಕಾರ್ಯಾಗಾರವನ್ನು ಟಿ.ಆರ್.ಸಿ ಅಧ್ಯ ರಾಮಕೃಷ್ಣ ಹೆಗಡೆ ಉದ್ಘಾಟಿಸಿದರು. ಹರಿಪ್ರಕಾಶ ಕೋಣೆಮನೆ, ಎನ್.ಕೆ. ಭಟ್ಟ, ರಾವೇಂದ್ರ ಭಟ್ಟ, ಕೆ.ಟಿ. ಹೆಗಡೆ, ಎಸ್.ಕೆ. ಭಾಗ್ವತ ಇತರರಿದ್ದರು.
ಯಲ್ಲಾಪುರ:
ಬೆಟ್ಟ ಬಳಕೆದಾರರು ತಮ್ಮ ಹಕ್ಕು ಸಂರಕ್ಷಣೆಗೆ ಜಾಗೃತರಾಗಿ, ಸಂಟಿತರಾಗಬೇಕಾಗಿದೆ ಎಂದು ಶಿರಸಿ ಟಿಆರ್ಸಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಹೇಳಿದರು.
ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೆಟ್ಟ ಬಳಕೆದಾರ ಹಕ್ಕು ಸಂರಕ್ಷಣೆ, ಬಳಕೆ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಕೀಲ ರವಿ ಹೆಗಡೆ ಹೂವಿನಮನೆ ಮಾತನಾಡಿ, ಸೊಪ್ಪಿನ ಬೆಟ್ಟದ ಸಮರ್ಪಕ ನಿರ್ವಹಣೆ ಮಾಡಿಕೊಳ್ಳಬೇಕು. ನಮ್ಮ ಸೊಪ್ಪಿನ ಬೆಟ್ಟದ ಮೇಲೆ ಅರಣ್ಯ ಇಲಾಖೆಗೆ ಯಾವುದೇ ಅಧಿಕಾರ ಇಲ್ಲ. ಇದರ ಬಗ್ಗೆ ಜಾಗೃತಿ ಮೂಡಬೇಕು. ಬೆಟ್ಟ ಸಂರಣೆದಾರರ ಜಿಲ್ಲಾ ಮಟ್ಟದ ಸಮಿತಿ ರಚಿಸಿ, ಹಕ್ಕುಗಳಿಗಾಗಿ ಹೋರಾಟದಲ್ಲಿ ತೊಡಗಬೇಕು ಎಂದರು.
ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಟ್ಟದ ಹಕ್ಕನ್ನು ಪಾರಂಪರಿಕವಾಗಿ ಬಳಸಿಕೊಂಡು ಬಂದಿದ್ದೇವೆ. ಅರಣ್ಯ ಕಳ್ಳರ ಮೇಲೆ ಇಲಾಖೆ ಕ್ರಮ ಕೈಗೊಳ್ಳಲಿ. ಆದರೆ ಬೆಟ್ಟದ ಮರವನ್ನು ಉಳಿಸಿಕೊಂಡು ಅದನ್ನು ಬಳಕೆ ಮಾಡುವ ಸಣ್ಣ ರೈತರ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ಎಸಗುವುದು ಸರಿಯಲ್ಲ. ಇಲಾಖೆಯ ಮುಂದೆ ರೈತರು ಭಿಕ್ಷೆ ಬೇಡುವ ಸ್ಥಿತಿ ಬರಬಾರದು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ರೈತರು ಸಂಟಿತರಾಗಿ ಮುನ್ನಡೆಯಬೇಕು ಎಂದರು.
ವಕೀಲ ಆರ್.ಕೆ. ಭಟ್ಟ ಮಾತನಾಡಿ, ಸೊಪ್ಪಿನ ಬೆಟ್ಟದಲ್ಲಿ ರೈತರು ದರಕು, ಸೊಪ್ಪು, ಕಲ್ಲು,ಮಣ್ಣು ಬಳಕೆ ಮಾಡಿಕೊಳ್ಳಬಹುದು. ಬೆಟ್ಟ ಭೂಮಿ ಅರಣ್ಯ ಇಲಾಖೆಯದ್ದಲ್ಲ, ಅದು ಕಂದಾಯ ಇಲಾಖೆಯ ಪರಿಮಿತಿಯಲ್ಲಿ ಬರುತ್ತದೆ. ಬೆಟ್ಟದ ಹಕ್ಕಿನ ಸಲುವಾಗಿ ಬೀದಿಗಿಳಿದು ಹೋರಾಟ ಮಾಡಬೇಕಾದ ಸ್ಥಿತಿ ಇದೆ. ಬೆಟ್ಟ ಕೇವಲ ಸವಲತ್ತಿಗಾಗಿ ಅಲ್ಲ, ಇದು ಹಕ್ಕೊತ್ತಾಯ ಆಗಬೇಕು ಎಂದರು.
ಶಿರಸಿಯ ಬೆಟ್ಟ ಜಾಗೃತಿ ಅಭಿಯಾನದ ಸಂಚಾಲಕ ಎಸ್.ಕೆ. ಭಾಗ್ವತ, ಟಿಎಂಎಸ್ ಅಧ್ಯ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ರಾವೇಂದ್ರ ಭಟ್ಟ ಮಾತನಾಡಿದರು.
ಸಂಚಾಲಕ ಕೆ.ಟಿ. ಹೆಗಡೆ ಸ್ವಾಗತಿಸಿದರು. ದೀಪಕ ಭಟ್ಟ ಮಲವಳ್ಳಿ ನಿರ್ವಹಿಸಿದರು. ಮಹೇಶ ದೇಸಾಯಿ ವಂದಿಸಿದರು.