ಕುಮಟಾದ ಮಹಾಸತಿ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ವಿವಿಧ ಅಂಚೆ ಸಂಟನೆಗಳ ಜಂಟಿ ದ್ವೈವಾರ್ಷಿಕ ಅಧಿವೇಶನವನ್ನು ಹೂವಪ್ಪ ಉದ್ಘಾಟಿಸಿದರು. ಜಿ. ಜಾನಕಿರಾಮ್, ರಂಗಪ್ಪ, ಎಂ.ಎಸ್. ಗೊಂಡ, ಎಂ.ಐ. ನಾಯ್ಕ, ಶಂಕರ ನಾಯ್ಕ, ರಾವೇಂದ್ರ ಹವಳೇರ, ರವಿ ಡಿ. ಪಾಟೀಲ ಇತರರಿದ್ದರು.
ಕುಮಟಾ: ಸಂಟಿತರಾಗಿ ಇದ್ದು ನಿಗದಿತ ಸೇವಾ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಜೀವನ ನಡೆಸಬೇಕು. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಮೂಲಕ ಅಂಚೆ ಇಲಾಖೆಯ ಶ್ರೇಷ್ಠತೆಯನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಕಾರವಾರ ಅಂಚೆ ವಿಭಾಗದ ಅಂಚೆ ಅಧೀಕ ಹೂವಪ್ಪ ಜಿ. ಹೇಳಿದರು.
ಪಟ್ಟಣದ ಮಹಾಸತಿ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಅಖಿಲ ಭಾರತ ಅಂಚೆ ನೌಕರರ ಸಂಘಗಳು ಗ್ರೂಪ್ ಸಿ ಪೋಸ್ಟ್ಮನ್, ಎಂಟಿಎಸ್ ಹಾಗೂ ಎಐಜಿಡಿಎಸ್ಯು ಕಾರವಾರ ವಿಭಾಗಗಳ 13ನೇ ಜಂಟಿ ದ್ವೈವಾರ್ಷಿಕ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.
ಎಐಪಿಇಯು ಗ್ರೂಪ್ "ಸಿ' ಮಾಜಿ ವಲಯ ಕಾರ್ಯದಶಿರ್ ಜಿ. ಜಾನಕಿರಾಮ್ ಮಾತನಾಡಿದರು. ಶಿವಮೊಗ್ಗ ವಿಭಾಗಕ್ಕೆ ವರ್ಗಾವಣೆಗೊಂಡ ಅಂಚೆ ಸಹಾಯಕ ರಂಗಪ್ಪ (ಜಾನಕಿಸುತ) ಅವರು ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಬರೆದ "ಪಡುವಣ ಕಡಲ ತೀರದಲ್ಲಿ' ಹಾಗೂ "ಆಪರೇಷನ್ ನೇತ್ರಾಣಿ' ಎಂಬ 2 ಕಾದಂಬರಿಗಳನ್ನು ಬಿಡುಗಡೆಗೊಳಿಸಲಾಯಿತು. ರಂಗಪ್ಪ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಸಂಟನೆಗಳ ಅಧ್ಯಕ್ಷರಾದ ಎಂ.ಎಸ್.ಗೊಂಡ, ಎಂ.ಐ.ನಾಯ್ಕ, ಶಂಕರ ನಾಯ್ಕ ಜಂಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಐಪಿಇಯು ಕರ್ನಾಟಕ ವಲಯ ಕಾಯದರ್ಶಿ ರಾವೇಂದ್ರ ಹವಳೇರ, ಎಐಪಿಇಯು ಪೋಸ್ಟ್ಮನ್ ವಿಭಾಗ ಮತ್ತು ಎಂಟಿಎಸ್ ಕರ್ನಾಟಕ ವಲಯದ ಅಧ್ಯ ರವಿ ಡಿ. ಪಾಟೀಲ, ಎಐಜಿಡಿಎಸ್ಯು ವಲಯ ಕಾಯದರ್ಶಿ ಎಚ್.ವಿ. ರಾಜಕುಮಾರ ಬೆಂಗಳೂರು, ಎಐಪಿಇಯು ಉಪವಲಯ ಕಾರ್ಯದಶಿರ್ ಧರ್ಮೇಂದ್ರ ಆರ್. ಜ್ಯಾಯಿ, ಎಐಪಿಇಯು ಮಲ್ಲಪ್ಪ ನರಗುಂದ ಆರ್.ಆರ್., ಎಂ.ಎನ್. ಕುರಹಟ್ಟಿ, ಮಾಜಿ ವಲಯ ಅಧ್ಯಕ್ಷ ಚಂದ್ರಸ್ವಾಮಿ, ವಿಜಯ್ ನಾಯರಿ, ಕುಮಟಾ ಅಂಚೆ ನಿರೀಕ ರಾಮಯ್ಯ ಡಿ. ಕೋಮಾರಿ, ಹೊನ್ನಾವರ ಅಂಚೆ ನಿರೀಕ್ಷಕ ಶಂಕರ ಲಮಾಣಿ, ಎಐಪಿಇಯು ಗ್ರೂಪ್ ಸಿ ಕಾರವಾರ ವಿಭಾಗದ ಕಾರ್ಯದರ್ಶಿ ಅವಿನಾಶ ಕಂಬಳಿ, ಎಐಪಿಇಯು ಪೋಸ್ಟ್ ಮನ್ ಮತ್ತು ಎಂಟಿಎಸ್ ಕಾರವಾರ ವಿಭಾಗದ ಕಾರ್ಯದರ್ಶಿ ವಿಶಾಲ ನಾಯ್ಕ, ಎಐಜಿಡಿಎಸ್ಯು ಕಾರವಾರ ವಿಭಾಗದ ಕಾರ್ಯದರ್ಶಿ ಸುರೇಶ ನಾಯ್ಕ, ಸ್ವಾಗತ ಸಮಿತಿಯ ಗೌರವಾಧ್ಯಕ್ಷ ದಿನೇಶ ನಾಯ್ಕ, ಅಧ್ಯಕ್ಷ ಸಿ.ಎಸ್. ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಳಿಕ ಅಧಿವೇಶನದಲ್ಲಿ ವಿವಿಧ ಸಂಟನೆಯ ಕಾರವಾರ ವಿಭಾಗದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅವಿರೋಧವಾಗಿ ನಡೆಯಿತು.
ಗ್ರೂಪ್ "ಸಿ'ಯಲ್ಲಿ ಅಧ್ಯರಾಗಿ ಕೃಷ್ಣ ನಾಯ್ಕ, ಕಾರ್ಯದರ್ಶಿಯಾಗಿ ವಿ.ಎಚ್. ನಾಯ್ಕ, ಖಜಾಂಚಿಯಾಗಿ ಸರ್ಪರಾಜ್ ಆಯ್ಕೆಯಾದರು. ಪೋಸ್ಟ್ಮನ್ ಎಂಟಿಎಸ್ದಲ್ಲಿ ಅಧ್ಯಕ್ಷರಾಗಿ ವಿಘ್ನೇಶ್ವರ ನಾಯ್ಕ, ಕಾರ್ಯದರ್ಶಿಯಾಗಿ ವಿಶಾಲ ನಾಯ್ಕ, ಖಜಾಂಚಿಯಾಗಿ ಗೋಪಾಲಕೃಷ್ಣ ಗೊಂಡ, ಜಿಡಿಎಸ್ನಲ್ಲಿ ಅಧ್ಯಕ್ಷರಾಗಿ ಸಂತೋಷ ಪೈ, ಕಾರ್ಯದಶಿರ್ಯಾಗಿ ಸುರೇಶ ನಾಯ್ಕ, ಖಜಾಂಚಿಯಾಗಿ ಅತುಲ ಆಚಾರಿ ಆಯ್ಕೆಯಾದರು.
ನಾಗರತ್ನ ನಾಯಕ, ಮಾಯಾ ಭಂಡಾರಿ ಪ್ರಾಥಿರ್ಸಿದರು. ಮಹೇಶ ನಾಯ್ಕ ಸ್ವಾಗತಿಸಿದರು, ಅವಿನಾಶ್ ಕಂಬಳಿ ಪ್ರಾಸ್ತಾವಿಕ ಮಾತನಾಡಿದರು. ಗಾಯತ್ರಿ ನಾಯ್ಕ ಅತಿಥಿಗಳನ್ನು ಪರಿಚಯಿಸಿದರು. ಸರ್ಪರಾಜ್ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ಪೈ ವಂದಿಸಿದರು.