ಸಿದ್ದಾಪುರದ ಎಂಜಿಸಿ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ ನಡೆಯಿತು. ಜಗದೀಶ ನಾಯ್ಕ, ಪ್ರೊ. ಜಗನ್ನಾಥ ಮೊಗೇರ, ಡಾ. ಸುಲೋಚನಾ ಸುಖಸಾರೆ, ಪ್ರೊ. ಚೇತನಾ ಎಂ.ಎಚ್., ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದರು.  
ಉತ್ತರ ಕನ್ನಡ

ಯುವ ಜನತೆ ಮಾನವೀಯ ಕಾರ್ಯಗಳಲ್ಲಿ ಪಾಲ್ಗೊಳ್ಳಲಿ

ಸಿದ್ದಾಪುರ: ಪಟ್ಟಣದ ಎಂಜಿಸಿ ಕಲಾ ಮತ್ತು ವಾಣಿಜ್ಯ ಹಾಗೂ ಜಿಎಚ್‌ಡಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಶುಕ್ರವಾರ ರಕ್ತದಾನ ಶಿಬಿರ ನಡೆಯಿತು.
ತಾಲೂಕು ಆಸ್ಪತ್ರೆಯ ಕೌನ್ಸೆಲರ್ ಜಗದೀಶ ನಾಯ್ಕ ಶಿಬಿರ ಉದ್ಘಾಟಿಸಿ ಮಾತನಾಡಿ, ರಕ್ತ ದಾನ ಮಹಾದಾನವಾಗಿದೆ. ನಾವು ನೀಡುವ ಒಂದು ಯುನಿಟ್ ರಕ್ತ ಮೂವರ ಜೀವ ಉಳಿಸಬಲ್ಲದು. ಯುವಜನತೆ ಇಂತಹ ಮಾನವೀಯ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಜಗನ್ನಾಥ ಮೊಗೇರ ಅವರು ರಕ್ತದಾನದಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿದರು. ರೆಡ್‌ಕ್ರಾಸ್ ಘಟಕದ ಸಂಚಾಲಕಿ ಡಾ. ಸುಲೋಚನಾ ಸುಖಸಾರೆ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿ ಪ್ರೊ. ಚೇತನಾ ಎಂ.ಎಚ್. ನಿರೂಪಿಸಿದರು.