ಶಿರಸಿಯಲ್ಲಿ ಸ್ಕೋಡ್‌ವೆಸ್ ಸಂಸ್ಥೆಯ ಶಕ್ತಿ ದಿವಸ್ ಕಾರ್ಯಕ್ರಮದಲ್ಲಿ ರೋ.ಎಸ್. ಜಯರಾಮ ಅವರಿಗೆ ಸ್ಕೋಡ್‌ವೆಸ್ ಕರ್ನಾಟಕ ಸೇವಾ ರತ್ನ ಪ್ರಶಸ್ತಿ, Award ಡಾ. ನಾರಾಯಣ ಅವರಿಗೆ ಶರಣ ಬಿರಾದಾರ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಶಿರಸಿ: 2047ಕ್ಕೆ ಭಾರತ ವಿಶ್ವಗುರುವಾಗುವ ಸಂಕಲ್ಪ ಸಫಲವಾಗಲು ನಾವೆಲ್ಲ ದೇಶದ Country ವಿಷಯದಲ್ಲಿ ಒಗ್ಗಟ್ಟಾಗಿ ನಿಲ್ಲಬೇಕಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನಗರದ ನೆಮ್ಮದಿ ಕುಟೀರದಲ್ಲಿ ಸ್ಕೋಡ್‌ವೆಸ್ ಸಂಸ್ಥೆಯ ಸಂಕಲ್ಪ ದಿನಾಚರಣೆಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಮಾನವೀಯ ಮೌಲ್ಯಗಳನ್ನು ಗುರುತಿಸಿಕೊಂಡು ಸಂಘಟನೆಯ ಮೂಲಕ ದೇಶ ಕಟ್ಟುವ ಕಾರ್ಯ ನಮ್ಮಿಂದಾಗಬೇಕು.
ಚಿಕ್ಕ ಪುಟ್ಟ ಆಸೆಗೆ ಮತ ಮಾರಿಕೊಳ್ಳುವುದು ಪ್ರಜಾಪ್ರಭುತ್ವದ ಆಶಯಕ್ಕೆ ದೂರವಾಗಿದೆ. ಇಂದು ಪ್ರಪಂಚದಾದ್ಯಂತ, ಯುದ್ಧ ಹಾಗೂ ಭೀತಿಯ ವಾತಾವರಣವಿದ್ದರೂ ಭಾರತ ಸುರಕ್ಷಿತ ತಾಣವಾಗಿದೆ. ನಾವು ಜಗತ್ತಿನ ಆಗು ಹೋಗು ಗಮನಿಸುತ್ತಿರಬೇಕಲ್ಲದೆ, ನಮ್ಮ ದೇಶವನ್ನು ಇನ್ನಷ್ಟು ಹೇಗೆ ಪ್ರಬಲಗೊಳಿಸಬಹುದು ಎಂಬ ಬಗ್ಗೆ ಚಿಂತನೆ ನಡೆಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಕೋಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ಡಾ. ವೆಂಕಟೇಶ ನಾಯ್ಕ, ಸಾಮಾಜಿಕ ಕ್ಷೇತ್ರ, ಆರೋಗ್ಯ ಕ್ಷೇತ್ರ ಸೇರಿದಂತೆ 9 ಕ್ಷೇತ್ರಗಳಲ್ಲಿ ಸ್ಕೋಡ್‌ವೆಸ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಇದೇ ವೇಳೆ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ರೋ.ಎಸ್. ಜಯರಾಮ ಅವರಿಗೆ ಸ್ಕೋಡ್‌ವೆಸ್ ಕರ್ನಾಟಕ ಸೇವಾ ರತ್ನ ಪ್ರಶಸ್ತಿ, ಡಾ. ನಾರಾಯಣ ಅವರಿಗೆ ಶರಣ ಬಿರಾದಾರ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ವಿಪ ಸದಸ್ಯ ಶಾಂತಾರಾಮ ಸಿದ್ದಿ, ಮೈಸೂರಿನ ಗ್ರಾಮ್ ಸಂಸ್ಥೆ ನಿರ್ದೇಶಕ ಡಾ. ಬಸವರಾಜು, ಬೆಂಗಳೂರು ಆಶ್ರಯ ಹಸ್ತ ಸಂಸ್ಥೆಯ ವಿಕ್ರಂ ಪಟೇಲ್, ಗುಜರಾತ ದೇಸಾಯಿ ಫೌಂಡೇಶನ್‌ನ ನಿತಿನ್ ಸಿಂಗ್, ಹಂಪಿ ಕನ್ನಡ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಚ್. ಸಿ. ಬೋರಲಿಂಗಯ್ಯ, ಸರಸ್ವತಿ ಎನ್. ರವಿ, ಕೆ. ಎನ್. ಹೊಸ್ಮನಿ, ಇತರರಿದ್ದರು.