ಶಿರಸಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ ಕುಂಬ್ರಿ ಮರಾಠಿ Kumbri Marathi ಕುಟುಂಬವೊಂದರ ಸಾಂದಭಿರ್ಕ ಚಿತ್ರ. 
ಉತ್ತರ ಕನ್ನಡ

Kumbri Marathi ಕುಂಬ್ರಿ ಮರಾಠಿ ಸಮಾಜಕ್ಕೆ ರಾಜಕೀಯ ಮೀಸಲಾತಿ ಸಿಗಲಿ

ಶಿರಸಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಮಾಜಿಕ ಮೀಸಲಾತಿ ಪಟ್ಟಿಯಲ್ಲಿ ಕುಂಬ್ರಿ ಮರಾಠಿ Kumbri Marathi ಸಮಾಜವು ಸೇರ್ಪಡೆಗೊಂಡು 25 ವರ್ಷವಾದರೂ ಇಂದಿಗೂ ರಾಜ್ಯದ ರಾಜಕೀಯ ಮೀಸಲಾತಿ ಪಟ್ಟಿಗೆ ಸೇರ್ಪಡೆಯಾಗಿಲ್ಲ.
ಈ ಹಿನ್ನ್ನೆಲೆಯಲ್ಲಿ, ರಾಜಕೀಯ ಮೀಸಲಾತಿಗಾಗಿ ಕುಂಬ್ರಿ ಮರಾಠಿ ಜಾತಿ ಸೇರ್ಪಡೆಗೆ ಕಾರ್ಯ ಯೋಜನೆಗೆ ನಿರ್ಧರಿಸಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಶಿರಸಿ, ಸಿದ್ದಾಪುರ, ಭಟ್ಕಳ, ಹೊನ್ನಾವರ, ಕುಮಟಾ ಮತ್ತು ಅಂಕೋಲಾ ತಾಲೂಕಿನ ಗುಡ್ಡಗಾಡು ಅರಣ್ಯ ಪ್ರದೇಶದಲ್ಲಿ ಕುಂಬ್ರಿ ಮರಾಠಿ ಸಮಾಜ ಸುಮಾರು 23 ಸಾವಿರ ಜನಸಂಖ್ಯೆ ಹೊಂದಿದೆ.
ಕುಂಬ್ರಿ ಮರಾಠಿ ಗ್ರಾಮ್ಯ ಮರಾಠಿ ಭಾಷೆಯೊಂದಿಗೆ ಅರಣ್ಯ ಪ್ರದೇಶದಲ್ಲಿ ಕುಂಬ್ರಿ ಬೇಸಾಯ ವೃತ್ತಿಯ ಜೀವನ ನಡೆಸುತ್ತಿದ್ದರು. ಕುಂಬ್ರಿ ಮರಾಠಿ ಸಮಾಜವನ್ನು ಪ್ರಥಮ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯ ಪ್ರೊ. ರವಿ ವರ್ಮಾ ಕುಮಾರ್​ ಆಯೋಗದ ಶಿಾರಸ್ಸಿನಂತೆ 2000 ರ ಸೆಪ್ಟಂಬರ್​ 21ರಂದು ರಾಜ್ಯ ಸರ್ಕಾರದ ಮೀಸಲಾತಿ ಪಟ್ಟಿ ಸೇರ್ಪಡೆಗೆ ನಿರ್ಣಯವಾಗಿದೆ.
ಸಂವಿಧಾನಬದ್ಧ ಜನಪ್ರತಿನಿಧಿತ್ವವನ್ನು ಮೀಸಲಾತಿಯಿಂದ ವಂಚಿತರಾಗಿ, ಅನ್ಯಾಯಕ್ಕೆ ಒಳಗಾಗುತ್ತಿರುವ ಈ ಸಮಾಜವನ್ನು ಸ್ಥಳಿಯ ಚುನಾವಣಾ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲು ಕಾರ್ಯ ಯೋಜನೆ ಪ್ರಗತಿಯಲ್ಲಿದೆ.
ಆದರೆ, ಕುಂಬ್ರಿ ಮರಾಠಿ ಸಮಾಜ ಕರ್ನಾಟಕ ರಾಜ್ಯ ಸರ್ಕಾರದ ಅತೀ ಹಿಂದುಳಿದ ಪಟ್ಟಿ ಎ ಗುಂಪಿಗೆ ಸೇರಲ್ಪಟ್ಟು ಎರಡು ದಶಕಗಳಾದರೂ ಇಂದಿನವರೆಗೂ, ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಮೀಸಲಾತಿ ಪಟ್ಟಿಗೆ ಸೇರ್ಪಡ ಆಗದೇ ಇರುವುದನ್ನು ಸರ್ಕಾರ ಗಂಭೀರವಾಗಿ ಚಿಂತಿಸಬೇಕು ಎಂದು ಆಗ್ರಹಿಸಿದ್ದಾರೆ.