ಜೀವ ವೈವಿಧ್ಯ ಮಂಡಳಿ ಪಶ್ಚಿಮ ಘಟ್ಟಗಳಲ್ಲಿ ನಡೆಸಿದ ವೆಜ್ಞಾನಿಕ ಅಧ್ಯಯನಗಳ ವರದಿಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಡುಗಡೆಗೊಳಿಸಿದರು. ವಡ್ನಾಳ್​ ಜಗದೀಶ, ಅನಂತ ಅಶೀಸರ, ಡಾ. ಬಾಲಚಂದ್ರ ಸಾಯೀಮನೆ, ನಾರಾಯಣ ಹೆಗಡೆ ಗಡಿಕೈ, ವಿಜಯಲಕ್ಷ್ಮೀ ಇತರರಿದ್ದರು. 
ಉತ್ತರ ಕನ್ನಡ

ಧಾರಣಾ ಸಾಮರ್ಥ್ಯ ಅಧ್ಯಯನವಾಗಲಿ

ವಿನಯ ಆಶೋಕ ನಾಯ್ಕ

ಶಿರಸಿ: ಜೀವ ವೈವಿಧ್ಯ ಮಂಡಳಿ ಸಮಗ್ರ ಪಶ್ಚಿಮಘಟ್ಟ ಪರಿಸರ ಧಾರಣಾ ಸಾಮರ್ಥ್ಯ ಕುರಿತು ಅಧ್ಯಯನ ನೆಡೆಸಲು ಮುಂದಾಗಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ.


ಬೆಂಗಳೂರಿನ ಜೀವವೈವಿಧ್ಯ ಮಂಡಳಿ ಕಚೇರಿಯ ಸಭಾಂಗಣದಲ್ಲಿ ಜೀವ ವೈವಿದ್ಯ ಮಂಡಳಿಯಲ್ಲಿ ಪಶ್ಚಿಮ ಟ್ಟದಲ್ಲಿ ನಡೆದ ವೈಜ್ಞಾನಿಕ ಅಧ್ಯಯನಗಳ ಕುರಿತು ವಿಶೇಷ ವರದಿಯನ್ನು ಬುಧವಾರ ಬಿಡುಗಡೆಗೊಳಿಸಿ ಮಾತನಡಿದರು.
ಮಂಡಳಿಯ ಅಧ್ಯ ವಡ್ನಾಳ್​ ಜಗದೀಶ್​ ಅವರಿಗೆ ಉಕ ಜಿಲ್ಲೆಯ ಮಿರಿಸ್ಟಿಕಾ ಸ್ವಾಂಪ್ಸ್​(ರಾಂಪತ್ರೆ ಜಡ್ಡಿ) ಗಳ ಸಂರಣ ಮಾದರಿ ಯೋಜನೆಯನ್ನು ಮಂಡಳಿ ಜಾರಿ ಮಾಡಬೇಕು ಎಂಬ ವಿಶೇಷ ಮನವಿಯನ್ನು ಸಂಸದರ ಮೂಲಕ ಮಂಡಳಿಗೆ ವೃ ಅಂದೋಲನ ಸಲ್ಲಿಸಿತು. ಅಪ್ಪೇಮಿಡಿ ಅನಾಶಿನಿ ಸಂರತ ಜೀವ ವೈವಿಧ್ಯ ತಾಣ ಎಂಬ ಮಾನ್ಯತೆ ನೀಡಿದಕ್ಕೆ ಸಂಸದರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಯಲ್ಲಾಪುರ ಜೀವ ವೈವಿಧ್ಯ ಸಮಿತಿ ಈ ಹಿಂದೆ ನಡೆಸಿದ ಕಾರ್ಯಾಗಾರ ರಾಜ್ಯಕ್ಕೇ ಮಾದರಿ ಎಂದು ಮಂಡಳಿ ಅಧ್ಯ ವಡ್ನಾಳ್​ ಜಗದೀಶ್​ ತಿಳಿಸಿದರು. ಮಂಡಳಿ ಸದಸ್ಯ ಕಾರ್ಯದಶಿರ್ ಸಂತೋಷ ಕುಮಾರ್​, ವಿಜ್ಞಾನಿ ಪ್ರಸನ್ನ, ಮಂಡಳಿ ಮಾಜಿ ಅಧ್ಯ ಅನಂತ ಹೆಗಡೆ ಅಶೀಸರ, ಡಾ. ಬಾಲಚಂದ್ರ ಸಾಯಿಮನೆ, ಡಾ. ವಿ.ಆರ್​. ಹೆಗಡೆ, ನಾರಾಯಣ ಗಡಿಕೆ, ಡಾ. ರಾಜೇಂದ್ರ, ಡಾ. ಪ್ರೀತಮ್​, ಪವಿತ್ರ, ವಿಜಯಲಕ್ಷ್ಮೀ ಇತರರಿದ್ದರು.