ಹೊನ್ನಾವರದಲ್ಲಿ ಆಯೋಜಿಸಿದ್ದ "ಕಾಗಿರ್ಲ್ ವಿಜಯ ದಿವಸ್' ಕಾರ್ಯಕ್ರಮದಲ್ಲಿ ಸೈನಿಕರ ಮನೆಯವರನ್ನು ಗೌರವಿಸಲಾಯಿತು. ತಹಸೀಲ್ದಾರ್ ಪ್ರವಿಣ ಕರಾಂಡೆ, ಕ್ಯಾ. ಅಶೋಕ ನಾಯ್ಕ ಹಾಗೂ ಮಾಜಿ ಸೈನಿಕರಿದ್ದರು.
ಹೊನ್ನಾವರ: ಸೈನಿಕರು ತಮ್ಮ ವೈಯಕ್ತಿಕ ಜೀವನವನ್ನು ಮರೆತು ದೇಶಕ್ಕಾಗಿ ಸೇವೆ ಸಲ್ಲಿಸುತ್ತಾರೆ. ಯುವಜನರಲ್ಲಿ ದೇಶಪ್ರೇಮ ಚಿಗುರಬೇಕು ಎಂದು ತಹಸೀಲ್ದಾರ್ ಪ್ರವೀಣ ಕರಾಂಡೆ ಹೇಳಿದರು.
ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಭವನದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ತಾಲೂಕು ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ "ಕಾಗಿರ್ಲ್ ವಿಜಯ ದಿವಸ್' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿರುವ ಮಾಜಿ ಸೈನಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದರು.
ಡಾ. ಅನಂತಮೂತಿರ್ ಶಾಸ್ತ್ರಿ ಮಾತನಾಡಿ, ದೇಶಸೇವೆಯೇ ಪರಮೋಚ್ಚ ಸೇವೆ. ಸೈನಿಕರು ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ನಾವು ನೆಮ್ಮದಿಯಾಗಿದ್ದೇವೆ. ದಕ್ಷಿಣ ಭಾರತದಲ್ಲಿ ಗಡಿ ಭಯವಿಲ್ಲದಿರುವುದರಿಂದ ನಮಗೆ ಸೈನ್ಯದ ಬಗ್ಗೆ ಹೆಚ್ಚಿನ ಅರಿವು ಮತ್ತು ಭಾವನಾತ್ಮಕತೆಯಿಲ್ಲ. ನಾವು ನಮ್ಮ ಮನೋಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ದೇಶಸೇವೆಗೆ ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಕಾಗಿರ್ಲ್ ಯುದ್ಧದಲ್ಲಿ ಮಡಿದವರಿಗೆ ಪುಷ್ಪನಮನ ಸಲ್ಲಿಸಲಾಯಿತು. ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಮನೆಯವರನ್ನು ಗೌರವಿಸಲಾಯಿತು. ಮಾಜಿ ಸೈನಿಕರ ಸಂದ ಅಧ್ಯ ಕ್ಯಾ. ಅಶೋಕ ನಾಯ್ಕ ಮಾತನಾಡಿದರು.
ಸಂದ ಗೌರವಾಧ್ಯ ವಾಮನ ನಾಯ್ಕ ಹಾಗೂ ಸಂದ ಸದಸ್ಯರು, ವಿವಿಧ ಸಂಟನೆಗಳ ಪ್ರಮುಖರಾದ ಅಣ್ಣಪ್ಪ ಮುಕ್ರಿ, ಹೆನ್ರಿ ಲೀಮಾ, ಜಿ.ಎನ್.ಗೌಡ, ಎಂ.ಜಿ.ನಾಯ್ಕ, ಸುಧೀಶ ನಾಯ್ಕ, ರಾಜು ಭಂಡಾರಿ, ವಿಕ್ರಮ ನಾಯ್ಕ, ಭಾರತಿ ಡಯಾಸ್ ಮತ್ತಿತರಿದ್ದರು. ಮಾಜಿ ಸೈನಿಕರ ಸಂದ ಕಾರ್ಯದಶಿರ್ ರಾಜೇಶ ನಾಯ್ಕ ಸ್ವಾಗತಿಸಿದರು. ಕೋಶಾಧ್ಯಕ್ಷ ರವಿ ನಾಯ್ಕ ವಂದಿಸಿದರು. ದಿನೇಶ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಸಂಟನೆಗಳಿಂದ ಮಾಜಿ ಸೈನಿಕರನ್ನು ಗೌರವಿಸಲಾಯಿತು.