ಸಿದ್ದಾಪುರ: ತಾಲೂಕಿನ ಹಸರಗೋಡ ಗ್ರಾಪಂ ಹೊಸಗದ್ದೆಯ ಶ್ರೀಧರ ಪರಮೇಶ್ವರ ಹೆಗಡೆ ಇವರ ಮನೆ ಅಂಗಳದಲ್ಲಿ ಕಟ್ಟಿದ ಆಕಳ ಕರುವನ್ನು ಗುರುವಾರ ರಾತ್ರಿ ಚಿರತೆ ತಿಂದು ಹಾಕಿದೆ.
ಆಕಳ ಕರುವಿನ ಹಿಂಬಾಗವನ್ನು ಸಮಪೂರ್ಣ ತಿಂದು ಹಾಕಿದ್ದು ರಕ್ತದ ಮಡುವಿನಲ್ಲಿ ಕರು ಬಿದ್ದಿದೆ.
ಸ್ಥಳಕ್ಕೆ ಹೇರೂರಿನ ಉಪವಲಯ ಅರಣ್ಯಾದಿಕಾರಿ ಯಶೋದಾ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.