ಕುಮಟಾ ತಾಲೂಕಿನ ಹೊಲನಗದ್ದೆ ಯುವಕ ಸಂಘದ ಸಭಾಭವನದಲ್ಲಿ ಅರಣ್ಯ ಹಕ್ಕು ಹೋರಾಟಗಾರರ ಕಾನೂನು (law) ಜಾಗೃತಿ ಜಾಥಾ ಜರುಗಿತು.
ಕುಮಟಾ: ಅರಣ್ಯವಾಸಿಗಳಲ್ಲಿ ಕಾನೂನು law ಸಬಲೀಕರಣ ಮಾಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಕಾನೂನು ಜಾಗೃತಿ ಜಾಥಾವನ್ನು ಡಿ.4 ರಂದು ಗಿಬ್ ವೃತ್ತದಿಂದ ಹಮ್ಮಿಕೊಳ್ಳಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ತಾಲೂಕಿನ ಹೊಲನಗದ್ದೆಯ ಸ್ಪಂದನ ಯುವಕ ಸಂಘದ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರವಾರ ಚಲೋ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಅರಣ್ಯವಾಸಿಗಳಿಗೆ ಕಾನೂನಿನ ತಿಳಿವಳಿಕೆ ಕೊರತೆ ಮತ್ತು ಮಂಜೂರಿ ಪ್ರಕ್ರಿಯೆಯಲ್ಲಿ ಅಧಿಕಾರಿಗಳಿಗೆ ಕಾನೂನಿನ ಅಜ್ಞಾನದಿಂದ ಅರಣ್ಯವಾಸಿಗಳು ಹಕ್ಕು ಪಡೆಯಲು ವಿಫಲವಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ಒಕ್ಕಲೆಬ್ಬಿಸುವ ಪ್ರಕ್ರಿಯೆ ಮತ್ತು ಅರ್ಜಿ ತಿರಸ್ಕಾರದಲ್ಲಿ ಅರಣ್ಯವಾಸಿಗಳಿಗೆ ಅನ್ಯಾಯವಾಗುತ್ತಿದೆ.
ಕಾನೂನು ಜಾಗೃತಿ ಜಾಥಾದಲ್ಲಿ ಅರಣ್ಯವಾಸಿಗಳಿಗೆ ಕಾನೂನು ಅಂಶಗಳ ಕರಪತ್ರ ವಿತರಿಸಲಾಗುವುದು. ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಡಿ.6 ರಂದು ಸರ್ಕಾರಕ್ಕೆ ಅರಣ್ಯವಾಸಿಗಳ ಬೇಡಿಕೆ ಪತ್ರ ನೀಡಲಾಗುವುದು. ಜಿಲ್ಲಾದ್ಯಂತ ಅರಣ್ಯವಾಸಿಗಳು ಸ್ಪಂದಿಸಬೇಕು ಎಂದರು.
ಅರಣ್ಯವಾಸಿಗಳು ಅರಣ್ಯ ಭೂಮಿ ಸಾಗುವಳಿ ಹಕ್ಕಿಗಾಗಿ ನೀಡಿದ ಒಟ್ಟು 6,603 ಅರ್ಜಿಗಳು ಸಲ್ಲಿಸಿದ್ದು, ಅವುಗಳಲ್ಲಿ 6,160 ಅರ್ಜಿಗಳು ತಿರಸ್ಕಾರವಾಗಿದೆ.
ಕೇವಲ 137 ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದೆ. ಬಂದಿರುವ ಅರ್ಜಿಗಳಲ್ಲಿ ಶೇ.93.23 ರಷ್ಟು ಅರ್ಜಿಗಳು ತಿರಸ್ಕಾರವಾಗಿ ಒಕ್ಕಲೆಬ್ಬಿಸುವ ಆತಂಕದಲ್ಲಿ ಇದ್ದಾರೆ ಎಂದು ವಿವರಿಸಿದರು.
ತಾಲೂಕಾಧ್ಯಕ್ಷ ಮಂಜುನಾಥ ಮರಾಠಿ ನಾಗೂರು, ಮುಜೀಪ್ ಹುಸ್ಮಾನ ಶರೀಫ, ವೆಂಕಟರಮಣ ಪಟಗಾರ, ಕೃಷ್ಣ ನಾರಾಯಣ ಬೈಲೂರು, ಸುಧಾಕರ ನಾಯ್ಕ, ಇತರರು ಇದ್ದರು.