ಸಿದ್ದಾಪುರ ತಾಲೂಕಿನ ಕಾನಸೂರಿನ ಕಾಳಿಕಾ ಭವಾನಿ ಪ್ರೌಢಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಪ್ರಯೋಗ ಶಾಲೆಯನ್ನು ಕೆ.ಆರ್​. ಹೆಗಡೆ ಉದ್ಘಾಟಿಸಿದರು. ಶಂಕರನಾರಾಯಣ ಭಟ್ಟ, ಗಣಪತಿ ಭಟ್ಟ, ಸುಪ್ರೀತ್​ ಕಿಟ್ಟೆನಕೆರೆೆ, ಸುರೇಂದ್ರ ಕುಲಕಣಿರ್, ರಾಜು ಅಡಕಳ್ಳಿ, ನಾಗೇಂದ್ರ ಮುತ್ಮುರ್ಡು, ವಸಂತ್​ ಹೆಗಡೆ ಇತರರಿದ್ದರು. 
ಉತ್ತರ ಕನ್ನಡ

ವಿಜ್ಞಾನದ ಅರಿವಿಗೆ ಪ್ರಯೋಗಶಾಲೆ ಸಹಕಾರಿ

ವಿನಯ ಆಶೋಕ ನಾಯ್ಕ

ಸಿದ್ದಾಪುರ:

ಕಾನಸೂರಿನ ಕಾಳಿಕಾ ಭವಾನಿ ಪ್ರೌಢಶಾಲೆಯಲ್ಲಿ ಮಂಗಳವಾರ ಮನುವಿಕಾಸ ಸಂಸ್ಥೆ ಕರ್ಜಗಿ ಹಾಗೂ ಗ್ಯಾನ್​ ಪ್ರೊ ಸಂಸ್ಥೆ ಬೆಂಗಳೂರು ಅವರ ಸಹಯೋಗದೊಂದಿಗೆ ಗಣಿತ ಮತ್ತು ವಿಜ್ಞಾನ ಪ್ರಯೋಗ ಶಾಲೆಯ ಉದ್ಘಾಟನೆ ಜರುಗಿತು. ನಿವೃತ್ತ ಶಿಕ ಕೆ.ಆರ್​. ಹೆಗಡೆ ಪ್ರಯೋಗ ಶಾಲೆ ಉದ್ಘಾಟಿಸಿದರು.


ಗ್ಯಾನ್​ ಪ್ರೊ ಸಂಸ್ಥೆಯ ಸ್ಥಾಪಕ ಸುಪ್ರೀತ್​ ಕಿಟ್ಟೆನಕೆರೆ ಮಾತನಾಡಿ, ಪ್ರಯೋಗಶಾಲೆಯಿಂದ ಮಕ್ಕಳಿಗೆ ವಿಜ್ಞಾನ ಕ್ಷೇತ್ರದಲ್ಲಿ ಮುಂದುವರೆಯಲು ಹೆಚ್ಚು ಆಸಕ್ತಿ ಮೂಡಿಸುವುದರ ಜತೆಗೆ ವಿಜ್ಞಾನದ ಕುರಿತು ತಿಳಿದುಕೊಳ್ಳಲು ಸಾಧ್ಯ ಎಂದರು.
ಮನುವಿಕಾಸ ಸಂಸ್ಥೆ ನಿರ್ದೇಶಕ ಗಣಪತಿ ಭಟ್ಟ ಕರ್ಜಗಿ ಮಾತನಾಡಿ, ಮನುವಿಕಾಸ ಸಂಸ್ಥೆಯು ಗ್ಯಾನ್​ ಪ್ರೊ ಸಹಯೋಗದೊಂದಿಗೆ ಗ್ರಾಮೀಣ ಶಾಲೆಗಳಲ್ಲಿ ಲ್ಯಾಬ್​ ಇನ್​ ಎ ಬಾಕ್ಸ್​ ಕಾರ್ಯಕ್ರಮ ಅನುಷ್ಠ್ಠಾನಗೊಳಿಸುತ್ತಿದೆ ಎಂದರು.
ವಿಜ್ಞಾನಿ ಸುರೇಂದ್ರ ಕುಲಕಣಿರ್, ದೇಶದ ರಣೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವವನ್ನು ವಿವರಿಸಿದರು.
ಕಾಳಿಕಾ ಭವಾನಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಕರನಾರಾಯಣ ಭಟ್​ ಗಿರಿಗಡ್ಡೆ ಅಧ್ಯತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸುರೇಂದ್ರ ಕುಲಕಣಿರ್, ರಾಜು ಅಡಕಳ್ಳಿ, ಗಣಪತಿ ಭಟ್ಟ ಮತ್ತು ಸುಪ್ರೀತ್​ ಕಿಟ್ಟೆನಕೆರೆ ಅವರನ್ನು ಸನ್ಮಾನಿಸಲಾಯಿತು. ಲೇಖಕ ರಾಜು ಅಡಕಳ್ಳಿ, ನಾಗೇಂದ್ರ ಮುತ್ಮುರ್ಡು, ವಸಂತ್​ ಮಂಜುನಾಥ್​ ಹೆಗಡೆ ಮಾದನಕಳ್ಳು, ಕಾಳಿಕಾ ಭವಾನಿ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಎಲ್ಲ ಶಿಕರು ಮತ್ತು ಮನುವಿಕಾಸ ಸಂಸ್ಥೆ ಸಿಬ್ಬಂದಿ ಇದ್ದರು.
ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಜಿ.ಐ. ಹೆಗಡೆ ಸ್ವಾಗತಿಸಿದರು. ಶಿಕ್ಷಕ ಹನುಮಂತಪ್ಪ ಎಸ್​.ಆರ್​. ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಯಶಸ್ವಿನಿ ಮೂತಿರ್ ವಂದಿಸಿದರು.