ವಿದೇಶಿ ಮಹಿಳೆಯನ್ನು ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದರು.
ಗೋಕರ್ಣ: ಇಲ್ಲಿನ ಕುಡ್ಲೆ ಕಡಲ ತೀರದಲ್ಲಿ ಅಪಾಯಕ್ಕೆ ಸಿಲುಕಿದ ವಿದೇಶಿ ಮಹಿಳೆಯನ್ನು ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ.
ಸೋಮವಾರ ಬೆಳಗ್ಗೆ ಘಟನೆ ನಡೆದಿದೆ. ರಷ್ಯಾ ಸಮೀಪದ ಕಜಕಿಸ್ತಾನ ಮೂಲದ ವಿದೇಶಿ ಪ್ರವಾಸಿ ದಂಪತಿ ಗೋಕರ್ಣದ ಕುಡ್ಲೆ ಕಡಲ ತೀರದಲ್ಲಿ ಈಜಲು ತೆರಳಿದ್ದರು. ಅದರಲ್ಲಿ ಮಹಿಳೆ ಐದಾಲಿ (25) ಸಮುದ್ರದ ಬಾರಿ ಅಲೆಗೆ ಸಿಲುಕಿರುತ್ತಾರೆ ಅದನ್ನು ಗಮನಿಸಿದ ಜೀವ ರಕ್ಷಕ ಸಿಬ್ಬಂದಿ ಮಂಜುನಾಥ ಹರಿಕಂತ್ರ ಗಿರೀಶ ಗೌಡ ನಾಗೇಂದ್ರ ಕುರ್ಲೆ ಮತ್ತು ಮೈ ಸ್ಟಿಕ್ ಗೋಕರ್ಣ ಅಡ್ವೆಂಚರ್ ಸಿಬ್ಬಂದಿ ಲಕ್ಷ್ಮಿಕಾಂತ ಹರಿಕಂತ್ರ ಅವರು Jetski(ವಾಟರ್ ಬೈಕ್) ಮೂಲಕ ರಕ್ಷಣೆಗೆ ತೆರಳಿದ್ದಾರೆ.
ಬಾರಿ ಅಲೆಗಳನ್ನು ಲೆಕ್ಕಿಸದೆ ಜೀವದ ಹಂಗು ತೊರೆದು ವಿದೇಶಿ ಪ್ರವಾಸಿ ಮಹಿಳೆಯನ್ನು ಜೀವ ರಕ್ಷಣೆ ಮಾಡಿದ್ದಾರೆ ಇದಕ್ಕೆ ಟೂರಿಸ್ಟ್ ಮಿತ್ರ ಶೇಖರ್ ಹರಿಕಂತ ಸಹಾಯ ಮಾಡಿದ್ದಾರೆ.