ಕೆಡಿಪಿ ಸಭೆಯಿಂದ ಶಾಸಕ ಸತೀಶ ಸೈಲ್‌ ಹೊರ ನಡೆದರು.  
ಉತ್ತರ ಕನ್ನಡ

ಕೆಡಿಪಿ ಸಭೆಯಿಂದ ಹೊರ ನಡೆದ ಸತೀಶ ಸೈಲ್‌

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕ ಸತೀಶ ಸೈಲ್ ನಡುವೆ ಕೆಡಿಪಿ ಸಭೆಯ ವೇದಿಕೆಯಲ್ಲಿ ಜಟಾಪಟಿ ನಡೆದು, ಸೈಲ್ ಸಭೆ ಬಿಟ್ಟು ಎದ್ದು ಹೋದ ಘಟನೆ ಸೋಮವಾರ ನಡೆಯಿತು.
ಸಭೆಯ ಪ್ರಾರಂಭದಿAದಲೂ ವಿವಿಧ ವಿಚಾರಗಳಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಬಸ್ ವ್ಯವಸ್ಥೆ ಅಸಮರ್ಪಕತೆ, ವಿದ್ಯುತ್ ತಂತಿ ಬದಲಾವಣೆ ವಿಚಾರಗಳ ಬಗ್ಗೆ ಸೈಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅದಕ್ಕೆ ಸಚಿವ ಮಂಕಾಳ ವೈದ್ಯ ಭಿನ್ನ ಅಭಿಪ್ರಾಯ ಎತ್ತಿದ್ದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು, `ನಾನು ಅಂಗೂಟಾ ಚಾಫ್' ಎನ್ನುತ್ತ ಸೈಲ್ ಸಭೆಯಿಂದ ಹೊರ ನಡೆದರು.
ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, `ಸರ್ಕಾರ ನಮ್ಮದೇ ಇರಬಹುದು. ಆದರೆ ಸಮಸ್ಯೆಗಳು ಸರ್ಕಾರದ ಗಮನಕ್ಕೆ ಬಾರದೇ ಹೋದರೆ ಅವುಗಳು ಬಗೆಹರಿಯುವುದಿಲ್ಲ. ಸುಸೂತ್ರವಾಗಿ ಸಭೆ ನಡೆಯಬೇಕು ಎಂಬ ಕಾರಣಕ್ಕೆ ನಾನು ಕ್ಷೇತ್ರದ ಜನರಿಗೆ ಅನ್ಯಾಯ ಮಾಡಲು ಸಿದ್ಧನಿಲ್ಲ ಎಂದರು.
ನಂತರ ಸ್ಪಷ್ಟನೆ ನೀಡಿದ ಸಚಿವ ಮಂಕಾಳ ವೈದ್ಯ, `ಶಾಸಕರ ಅಧ್ಯಕ್ಷತೆಯ ಆರೋಗ್ಯ ರಕ್ಷಾ ಸಮಿತಿಯ ಸಭೆಯಲ್ಲೇ ಔಷಧ ಖರೀದಿಗೆ ಒಪ್ಪಿಗೆ ನೀಡಲಾಗುತ್ತದೆ. ಔಷಧಗಳ ಕೊರತೆ ಇದ್ದರೆ ಅದರ ಖರೀದಿಗೆ ಶಾಸಕರ ಅಧ್ಯಕ್ಷತೆಯ ಸಮಿತಿಯೇ ಕ್ರಮ ವಹಿಸಬಹುದು. ಇಂಥ ವಿಚಾರಗಳು ಶಾಸಕರ ಅಧ್ಯಕ್ಷತೆಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಯಾಗಬೇಕು. ಅಲ್ಲಿ ಬಗೆಹರಿಯದಿದ್ದರೆ ಇಲ್ಲಿ ಚರ್ಚಿಸಬಹುದು ಎಂದು ಹೇಳಿದ್ದೇನೆ. ನಾನು ಸತೀಶ ಸೈಲ್ ಗಂಡ-ಹೆಂಡತಿ ಇದ್ದಂತೆ ಎಂದರು.
ಆರೋಗ್ಯ ರಕ್ಷಾ ಸಮಿತಿ ಕಾರವಾರದಲ್ಲಿಲ್ಲ
ಇತ್ತೀಚೆಗೆ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ಕೆಡಿಪಿ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಡಿಎಚ್‌ಒ ಅವರು ತಪ್ಪು ಮಾಹಿತಿ ನೀಡಿ ನನ್ನನ್ನು ತಪ್ಪಿತಸ್ಥನನ್ನಾಗಿ ಮಾಡಲು ಯತ್ನಿಸಿದರು ಎಂದು ಶಾಸಕ ಸತೀಶ ಸೈಲ್ ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರ ಕೆಡಿಪಿ ಸಭೆಯಲ್ಲಿ ಅವರು ಜಿಲ್ಲಾ ಕೆಡಿಪಿ ಸಭೆಯ ಬಗ್ಗೆ ಸ್ಪಷ್ಟನೆ ನೀಡಿದರು.
ಕಾರವಾರ ತಾಲೂಕಿಗೆ 2023 ನೇ ಸಾಲಿನಲ್ಲಿ 18 ಕೋಟಿ ರೂ. 2024 ನೇ ಸಾಲಿನಲ್ಲಿ 9 ಕೋಟಿ ರೂ. ಹಾಗೂ 2025 ನೇ ಸಾಲಿನಲ್ಲಿ ಕೇವಲ ಕೋಟಿ ರೂ. ಮೌಲ್ಯದ ಔಷಧ ಪೂರೈಕೆಯಾಗಿದೆ. ಇದರಿಂದ ಔಷಧಗಳ ಕೊರತೆ ಇದೆ ಎಂಬುದನ್ನು ಜಿಲ್ಲಾ ಔಷಧ ಉಗ್ರಾಹಣ ಅಮಿತ್ ಎಂಬುವವರಿಗೆ ಕರೆ ಮಾಡಿ ಶಾಸಕ ಸತೀಶ ಸೈಲ್ ಖಚಿತ ಮಾಡಿಕೊಂಡರು.
ತಾಲೂಕು ಆಸ್ಪತ್ರೆ ಇರುವಲ್ಲಿ ಆಯಾ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಆರೋಗ್ಯ ರಕ್ಷಾ ಸಮಿತಿ ಇರುತ್ತದೆ. ಕಾರವಾರದಲ್ಲಿ ತಾಲೂಕು ಆಸ್ಪತ್ರೆ ಇಲ್ಲ. ಜಿಲ್ಲಾ ಆಸ್ಪತ್ರೆಯೂ ಇಲ್ಲ. ಇದರಿಂದ ಆರೋಗ್ಯ ರಕ್ಷಾ ಸಮಿತಿಯೇ ಇಲ್ಲ. ಇದರಿಂದ ಯಾವುದೇ ಅಽಕಾರಿಗಳೂ ತಿಳಿಸದೇ ಸಭೆಯ ದಾರಿ ತಪ್ಪಿಸಿದರು ಎಂದು ಸೈಲ್ ವಿಷಯ ಬಿಚ್ಚಿಟ್ಟರು.