ಕಾರವಾರದಿಂದ ಬೆಂಗಳೂರಿಗೆ ಪ್ರಾರಂಭವಾದ ಬಸ್ ಸೇವೆಯನ್ನು ಸತೀಶ ಸೈಲ್ ಉದ್ಘಾಟಿಸಿದರು.
ಕಾರವಾರ: ಇಲ್ಲಿನ ಜನರ ಬಹು ದಿನಗಳ ಬೇಡಿಕೆ ಈಡೇರಿದೆ. ಕಾರವಾರ-ಬೆಂಗಳೂರು ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್ ಓಡಾಟ ಸೋಮವಾರ ಪ್ರಾರಂಭವಾಯಿತು.
ಶಾಸಕ ಸತೀಶ ಸೈಲ್ ಅವರು ಕಾರವಾರ ಬಸ್ ನಿಲ್ದಾಣದಲ್ಲಿ ಎರಡು ಪಲ್ಲಕ್ಕಿ ಬಸ್‌ಗಳಿಗೆ ಪೂಜೆ ಸಲ್ಲಿಸಿ, ಓಡಾಟಕ್ಕೆ ಚಾಲನೆ ನೀಡಿದರು. ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಾಜೇಂದ್ರ ರಾಣೆ, ಕಾರವಾರ ಎನ್‌ಡಬ್ಲುಕೆಆರ್‌ಟಿಸಿ ಡಿಪೋ ಮ್ಯಾನೇಜರ್ ಸೌಮ್ಯಾ ನಾಯಕ ಉಪಸ್ಥಿತರಿದ್ದರು.
ಮಂಗಳವಾರದಿAದ ವಾಣಿಜ್ಯಿಕ ಓಡಾಟ ಪ್ರಾರಂಭವಾಗಿದ್ದು, ಕಾರವಾರದಿಂದ ರಾತ್ರಿ 7.30 ಕ್ಕೆ ಹೊರಡಲಿದೆ, ಅಂಕೋಲಾ ರಾತ್ರಿ.8.15, ಗೋಕರ್ಣ 8.50, ಶಿರಸಿ 10.45 ಹಾಗೂ ಬೆಂಗಳೂರಿಗೆ ಬೆ.7.30 ಕ್ಕೆ ತಲುಪಲಿದೆ. ಬೆಂಗಳೂರಿನಿAದ ರಾತ್ರಿ 8.15 ಕ್ಕೆ ಹೊರಟು ಬೆಳಗ್ಗೆ 8 ಗಂಟೆಗೆ ಕಾರವಾರ ತಲುಪಲಿದೆ. ಈ ಬಸ್‌ಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಲು ಆನ್‌ಲೈನ್ ಬುಕ್ಕಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಎನ್‌ಡಬ್ಲುಕೆಆರ್‌ಟಿಸಿ ಪ್ರಕಟಣೆ ತಿಳಿಸಿದೆ.
ಕಾರವಾರದಿಂದ ಬೆಂಗಳೂರಿಗೆ ತೆರಳುವವರಿಗೆ ಸ್ಪೀಪರ್ ಅಥವಾ ನಾನ್ ಎಸಿ ಸೇವೆಗಳು ಲಭ್ಯವಿರಲಿಲ್ಲ. ಈ ಹಿಂದೆ ಇದ್ದ ಬಸ್‌ಗಳ ಓಡಾಟ ಬಂದಾಗಿತ್ತು. ಇದರಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರು ಕುಮಟಾ, ಶಿರಸಿಗೆ ತೆರಳಿ ಬಸ್ ಹತ್ತಬೇಕಿತ್ತು.
ಗೋಯರ್ ವರಗೆ ಬಸ್ ಸಂಚಾರ
ಕಾರವಾರದಿAದ ಗೋಯರ್‌ವರೆಗೆ ಬಸ್ ಸಂಚಾರ ಪುನರಾರಂಭಗೊAಡಿದೆ. ಈ ಮೊದಲು ಗೋಯರ್‌ಗೆ ಬಸ್ ಸಂಚಾರವಿತ್ತು. ನಡುವೆ ಸಂಚಾರ ಸ್ಥಗಿತಗೊಂಡು, ಕೋಟೆ ಬರಗದ್ದೆ ವರೆಗೆ ಮಾತ್ರ ಬಸ್ ಕಾರ್ಯಚರಿಸುತ್ತಿತ್ತು. ಎಂಸಿಎ ಅಧ್ಯಕ್ಷ ಹಾಗೂ ಶಾಸಕ ಸತೀಶ ಸೈಲ್ ಅವರು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಗೆ ಅನುಕೂಲವಾಗುವಂತೆ ಬಸ್ ಸಂಚಾರ ವ್ಯವಸ್ಥೆ ಕೈಗೊಳ್ಳುವಂತೆ ಸೂಚಿಸಿದ್ದರು. ಕಾರಣ ಬಸ್‌ನ್ನು ಗೋಯರ್‌ವರೆಗೂ ವಿಸ್ತರಿಸಲಾಗಿದೆ ಎಂದು ಎನ್‌ಡಬ್ಲುಕೆಆರ್‌ಟಿಸಿ ಪ್ರಕಟಣೆ ತಿಳಿಸಿದೆ.