ಉತ್ತರ ಕನ್ನಡ ಜಿಲ್ಲೆಯ ನಕ್ಷೆ  
ಉತ್ತರ ಕನ್ನಡ

ಉತ್ತರ ಕನ್ನಡದಲ್ಲಿ ಹಿಂದುಳಿದ ತಾಲೂಕುಗಳ ಸಂಖ್ಯೆ ಹೆಚ್ಚಳ..?

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಿಂದುಳಿದ ತಾಲೂಕುಗಳ ಸಂಖ್ಯೆ ಹೆಚ್ಚುವರ ಸಾಧ್ಯತೆ ಇದೆ. ಆರ್ಥಶಾಸ್ತ್ರಜ್ಞ ಎಂ.ಗೋವಿಂದ ರಾವ್ ಅಧ್ಯಕ್ಷತೆಯ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯು ಜನವರಿ 31 ರಂದು ಮುಖ್ಯಮಂತ್ರಿ ಅವರಿಗೆ ತಮ್ಮ ಅಂತಿಮ ವರದಿಯನ್ನು ಸಲ್ಲಿಸಿದೆ. ಸರ್ಕಾರ ಪರಿಶೀಲನೆ ನಡೆಸಿ, ವರದಿಯನ್ನು ಜಾರಿಗೆ ತರುವುದು ಬಾಕಿ ಇದೆ. ಆ ವರದಿ ಜಾರಿಯಾದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ 8 ಹಿಂದುಳಿದ ತಾಲೂಕುಗಳು ಹಾಗೂ 1 ಅತಿ ಹಿಂದುಳಿದ ತಾಲೂಕು ಎಂದು ಗುರುತಿಸುವ ಸಾಧ್ಯತೆ ಇದೆ. ಅತೀ ಹೆಚ್ಚು ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ ಜಿಲ್ಲೆಯ ಯಾವುದೇ ತಾಲೂಕು ಸೇರ್ಪಡೆಯಾಗುವ ಸಾಧ್ಯತೆ ಕಡಿಮೆ. 
ಪ್ರಾದೇಶಿಕ ಅಸಮತೋಲನ ನಿವಾರಣೆ ಸಂಬAಧ 2000 ರಲ್ಲಿ ರಚನೆಯಾಗಿದ್ದ ಎಂ.ಡಿ.ನಂಜುಂಡಪ್ಪ ವರದಿಯಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಜೊಯಿಡಾ ಹಾಗೂ ಭಟ್ಕಳ ಅತಿ ಹಿಂದುಳಿದ ತಾಲೂಕುಗಳಾಗಿದ್ದರೆ ಸಿದ್ದಾಪುರ ಹಾಗೂ ಅಂಕೋಲಾ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿದ್ದವು. ಆ ತಾಲೂಕುಗಳಿಗೆ ಇತರ ತಾಲೂಕುಗಳಿಗಿಂತ ಹೆಚ್ಚು ಅನುದಾನ ನೀಡಿ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿತ್ತು. 
ಸಾಕಷ್ಟು ಅನುದಾನ ನೀಡಿದರೂ ಪ್ರಾದೇಶಿಕ ಅಸಮತೋಲನ ನಿವಾರಣೆಯಾಗಿಲ್ಲ. ಇತ್ತೀಚೆಗೆ ಸಲ್ಲಿಕೆಯಾದ ಎಂ.ಗೋವಿಂದ ರಾವ್ ವರದಿ ಹೇಳಿದೆ. ಅಲ್ಲದೇ ಕೆಲವು ಮಾನದಂಡಗಳನ್ನು ಆಧರಿಸಿ ಅಭಿವೃದ್ಧಿ ಹೊಂದಿದ, ಹಿಂದುಳಿದ, ಅತಿ ಹಿಂದುಳಿದ ಹಾಗೂ ಅತೀ ಹೆಚ್ಚು ಹಿಂದುಳಿದ ತಾಲೂಕುಗಳು ಎಂದು ನಾಲ್ಕು ವಿಭಾಗ ಮಾಡಿ ಮರು ಗುರುತಿಸಲಾಗಿದೆ. ಅಭಿವೃದ್ಧಿ ಹೊಂದಲು ಹಲವು ಶಿಫಾರಸುಗಳನ್ನು ಮಾಡಲಾಗಿದೆ. 
ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಕುಮಟಾ, ಹೊನ್ನಾವರ ಮೂರು ತಾಲೂಕುಗಳನ್ನು ಮಾತ್ರ ಮುಂದುವರಿದ ತಾಲೂಕುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಹಳಿಯಾಳ ತಾಲೂಕನ್ನು ಅತಿ ಹಿಂದುಳಿದವರ ಪಟ್ಟಿಯಲ್ಲಿ ಸೇರಿಸಲಾಗಿದೆ. ಮುಂಡಗೋಡ, ಜೊಯಿಡಾ, ದಾಂಡೇಲಿ, ಕಾರವಾರ, ಯಲ್ಲಾಪುರ, ಅಂಕೋಲಾ, ಸಿದ್ದಾಪುರ ಹಾಗೂ ಭಟ್ಕಳ ತಾಲೂಕುಗಳನ್ನು ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸರ್ಕಾರ ವರದಿಯನ್ನು ಅಽಕೃತವಾಗಿ ಒಪ್ಪಿ, ಜಾರಿಗೆ ತಂದ ಮೇಲಷ್ಟೇ ಈ ಬಗ್ಗೆ ಸ್ಪಷ್ಟತೆ ದೊರೆಯಲಿದೆ. 

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲೂ ಹಿಂದೆ 

ರಾಜ್ಯ ಸಾಂಖ್ಯಿಕ ಇಲಾಖೆ ನಡೆಸಿದ 2024-23 ಕರ್ನಾಟಕ ಆರ್ಥಿಕ ಸಮೀಕ್ಷೆಯ ವರದಿಯಂತೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಉತ್ತರ ಕನ್ನಡ ಜಿಲ್ಲೆಯು ರಾಜ್ಯದಲ್ಲಿ 11 ನೇ ಸ್ಥಾನದಲ್ಲಿದೆ. 2015 ಕ್ಕೆ ಹೋಲಿಸಿದರೆ 10 ವರ್ಷಗಳಲ್ಲಿ ಉತ್ತರ ಕನ್ನಡದ ಪರಿಸ್ಥಿತಿ ತೀರ ಬದಲಾದಂತೆ ಕಾಣುವುದಿಲ್ಲ. ಬೆಂಗಳೂರು ನಗರ 0.73 ಮಾನವ ಅಭಿವೃದ್ಧಿ ಸೂಚ್ಯಂಕ (ಎಚ್‌ಡಿಐ) ಒಂದಿಗೆ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದರೆ ಉತ್ತರ ಕನ್ನಡ 0.63 ಸೂಚ್ಯಂಕದೊAದಿಗೆ 11 ನೇ ಸ್ಥಾನದಲ್ಲಿದೆ. 
ಮಹತ್ವಾಕಾಂಕ್ಷಿ ತಾಲೂಕುಗಳು 
ಕೇಂದ್ರ ನೀತಿ ಆಯೋಗದ ಮಾನದಂಡದAತೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಹಾಗೂ ಜೊಯಿಡಾ ತಾಲೂಕುಗಳನ್ನು ಮಹತ್ವಾಕಾಂಕ್ಷಿ ತಾಲೂಕುಗಳು ಎಂದು ಗುರುತಿಸಲಾಗಿದೆ. ಆರೋಗ್ಯ, ಶಿಕ್ಷಣ, ಕೃಷಿ ಹಾಗೂ ಜನಸಂಪನ್ಮೂಲ ಹೀಗೆ 32 ಮಾನದಂಡಗಳನ್ನು ಆಧರಿಸಿ ಮಾನವ ಅಭಿವೃದ್ಧಿ ಸೂಚ್ಯಂಕಗಳನ್ನು ಉತ್ತಮ ಪಡಿಸಲು ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. 
"

ನಂಜುಂಡಪ್ಪ ವರದಿಯಂತೆ ಹಿಂದುಳಿದ ತಾಲೂಕು ಅಭಿವೃದ್ಧಿ ಕಾರ್ಯಕ್ರಮಗಳು ಮುಕ್ತಾಯವಾಗಿವೆ. ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ವರದಿ ಸಂಬಂಧ ಯಾವುದೇ ಸೂಚನೆಗಳು ನಮಗೆ ಬಂದಿಲ್ಲ. 

 ಸೋಮಶೇಖರ ಮೇಸ್ತ ಜಿಪಂ ಮುಖ್ಯ ಯೋಜನಾಧಿಕಾರಿ