ಸಚಿವ ಮಂಕಾಳ ವೈದ್ಯ  
ಉತ್ತರ ಕನ್ನಡ

ಮೆರಿಟೈಮ್‌ ಬೋರ್ಡ್‌-ಮಹತ್ವದ ಮಾಹಿತಿ ನೀಡಿದ ಸಚಿವ ಮಂಕಾಳ ವೈದ್ಯ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ:  ಕರ್ನಾಟಕ ಮೆರಿಟೈಮ್ ಬೋರ್ಡ್(ಕೆಎಂಬಿ) ಆಡಳಿತ ವ್ಯವಸ್ಥೆ ಸರಿದಾರಿಗೆ ತರುವ ಕಾರ್ಯ ಮಾಡಲಾಗುತ್ತಿದೆ ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದರು. ದೇಶದ ವಿವಿಧ ಕರಾವಳಿ ರಾಜ್ಯಗಳಲ್ಲಿ ಇದ್ದಂತೆ ಕರ್ನಾಟಕದಲ್ಲೂ ಮೆರಿಟೈಮ್ ಬೋರ್ಡ್ ರಚನೆ ಮಾಡಲಾಗಿದೆ. ಆದರೆ, 8 ವರ್ಷ ಕಳೆದರೂ ಅಲ್ಲಿ ಇದುವರೆಗೂ ಆಡಳಿತ ವ್ಯವಸ್ಥೆ ಸರಿಯಾಗಿಲ್ಲ. 
ಕೆಎಂಬಿಗೆ ಒಬ್ಬರೂ ಅಽಕಾರಿ, ಸಿಬ್ಬಂದಿ ಇಲ್ಲ. ಬೇರೆ ಇಲಾಖೆಯ ಸಿಬ್ಬಂದಿಯನ್ನು ಪ್ರಭಾರಿಯಾಗಿ ನೇಮಿಸಬೇಕು. ಇದರಿಂದ ಆಡಳಿತಕ್ಕೆ ಸಮಸ್ಯೆ ಉಂಟಾಗುತ್ತಿದೆ. ಮೊದಲು ಲೋಕೋಪಯೋಗಿ ಇಲಾಖೆಯ ಜೊತೆ ಬಂದರು ಇಲಾಖೆ ಸೇರಿಕೊಂಡಿತ್ತು. ಈಗ ಮೂಲ ಸೌಕರ್ಯ ಇಲಾಖೆಯ ಜೊತೆ ಸೇರಿಕೊಂಡಿದೆ. 
ನಾನು ಬಂದರು ಸಚಿವನಾದ ನಂತರ ಕೆಎಂಬಿ ನೀತಿಗಳನ್ನು ರೂಪಿಸಲಾಯಿತು. 90 ಅಽಕಾರಿ ಸಿಬ್ಬಂದಿ ನೇಮಕಕ್ಕೆ ಸಿದ್ಧತೆ ನಡೆದಿದೆ. ಆಡಳಿತ ವ್ಯವಸ್ಥೆಯನ್ನು ಸರಿಯಾಗಿ ರೂಪಿಸುವ ಕ್ರಮವನ್ನು ಹಂತ, ಹಂತವಾಗಿ ಮಾಡುತ್ತಿದ್ದೇವೆ ಎಂದರು.