ಕರ್ಣಾಟಕ ಬ್ಯಾಂಕ್ ಸಿ.ಎಸ್.ಆರ್. ಫಂಡ್‌ನಿಂದ ಇಲ್ಲಿನ ತಹಸೀಲ್ದಾರ್ ಭಟ್ಕಳ ಅವರ ಕಾರ್ಯಾಲಯಕ್ಕೆ ಎರಡು ಕಂಪ್ಯೂಟರ್ ಹಾಗೂ ಒಂದು ಜೆರಾಕ್ಸ್ ಮಷಿನ್ ನೀಡಲಾಯಿತು. ರಮೇಶ ವೈದ್ಯ, ನಾಗೇಂದ್ರ ಕೋಳಶೆಟ್ಟಿ, ರಂಜಿತ್ ಶೆಟ್ಟಿ, ಸುನೀಲ ಪೈ, ಇತರರಿದ್ದರು. 
ಉತ್ತರ ಕನ್ನಡ

ಕರ್ಣಾಟಕ ಬ್ಯಾಂಕ್‌ನಿಂದ ತಹಸೀಲ್ದಾರ್ ಕಚೇರಿಗೆ ಕಂಪ್ಯೂಟರ್ ವಿತರಣೆ

ದೀಪಕ ತಲವಾಯಿ
ಭಟ್ಕಳ: ಕರ್ಣಾಟಕ ಬ್ಯಾಂಕ್ ಸಿಎಸ್‌ಆರ್ ಫಂಡ್‌ನಿಂದ ಇಲ್ಲಿನ ತಹಸೀಲ್ದಾರ್ ಕಾರ್ಯಾಲಯಕ್ಕೆ ಎರಡು ಕಂಪ್ಯೂಟರ್ ಹಾಗೂ ಒಂದು ಜೆರಾಕ್ಸ್ ಮಷಿನ್ ನೀಡಲಾಯಿತು.
ಉಡುಪಿ ಪ್ರಾದೇಶಿಕ ಕಚೇರಿಯ ಉಪ ಮಹಾಪ್ರಬಂಧಕ ರಮೇಶ ವೈದ್ಯ ಮಾತನಾಡಿ, ಕರ್ಣಾಟಕ ಬ್ಯಾಂಕ್ ಸದಾ ತನ್ನ ಸಾಮಾಜಿಕ ಬದ್ಧತೆಯನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತಿದೆ. ಸಿಎಸ್‌ಆರ್ ನಿಧಿ ಬಳಕೆಯಲ್ಲಿಯೂ ಸಮಾಜದ ಹಿತವನ್ನು ಬಯಸುತ್ತಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ತಹಸೀಲ್ದಾರ್ ಕಚೇರಿಯಲ್ಲಿ ಬೇಡಿಕೆ ಇರುವ ಎರಡು ಕಂಪ್ಯೂಟರ್ ಮತ್ತು ಒಂದು ಜೆರಾಕ್ಸ್ ಮಷಿನ್ ನೀಡಿದ್ದೇವೆ ಎಂದರು.
ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಮಾತನಾಡಿ, ಸಾರ್ವಜನಿಕರಿಗೆ ಕೆಲಸ ಮಾಡಿಕೊಡಲು ಅನುಕೂಲವಾಗುವಂತೆ ಸಹಕರಿಸಿದ ಬ್ಯಾಂಕಿನ ಅಧಿಕಾರಿಗಳನ್ನು ಅಭಿನಂದಿಸಿದರು.
ಕುಮಟಾ ವಲಯದ ಮುಖ್ಯ ಪ್ರಬಂಧಕ ರಂಜಿತ್ ಶೆಟ್ಟಿ, ಭಟ್ಕಳ ಶಾಖಾ ವ್ಯವಸ್ಥಾಪಕ ಸುನೀಲ ಪೈ, ಸಿಬ್ಬಂದಿ ನಂದನ ಎಂ., ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.