ಕರಾವಳಿ ಉತ್ಸವ ವೇದಿಕೆಯಲ್ಲಿ ಕೃಷ್ಣಾನಂದ ಬಾಂದೇಕರ್‌ ಕಾವ್ಯ ವಾಚನ ಮಾಡಿದರು 
ಉತ್ತರ ಕನ್ನಡ

ಕರಾವಳಿ ಉತ್ಸವದಲ್ಲಿ ಗಮನ ಸೆಳೆದ ಕವಿ, ಕಾವ್ಯ, ಕುಂಚ ಕಾರ್ಯಕ್ರಮ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಕರಾವಳಿ ಉತ್ಸವದ ಅಂಗವಾಗಿ, ರವೀಂದ್ರನಾಥ ಠಾಗೋರ್ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ಕವಿ-ಕಾವ್ಯ-ಕುಂಚ ಕಾರ್ಯಕ್ರಮ ಶುಕ್ರವಾರ ಗಮನ ಸೆಳೆಯಿತು.
ಬಾಲಿವುಡ್‌, ಸ್ಯಾಂಡಲ್‌ವುಡ್‌, ರ್ಯಾಪ್‌ ಗಾಯಕರ ಹಾಡುಗಳು, ಕಿವಿಗಡಚಿಕ್ಕುವ ಸದ್ದುಗಳ ನಡುವೆ ಸುಮಧುರ ಕಾರ್ಯಕ್ರಮವೊಂದು ವಿಶೇಷವಾಗಿತ್ತು. ಗಾಯಕರ ಸಾಹಿತ್ಯಾಸಕ್ತರಿಗೆ ಅತ್ಯುತ್ತಮ ರಸದೌತಣ ಬಡಿಸಿದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಕವಿಗೋಷ್ಠಿಯಲ್ಲಿ ಕವಿಗಳಾದ, ರೇಣುಕಾ ರಮಾನಂದ ಅಂಕೋಲಾ, ಕೃಷ್ಣ್ಣಾನಂದ ಬಾಂದೇಕರ ಕಾರವಾರ, ಅಪರ್ಣಾ ಹೆಗಡೆ,
ಶಿರಸಿ, ಜೆ. ಪ್ರೇಮಾನಂದ, ಅಂಕೋಲಾ, ಪೂರ್ಣಿಮಾ ನಾಯ್ಕ, ಭಟ್ಕಳ, ವೆಂಕಟೇಶ ಬೈಲೂರು, ಕುಮಟಾ. ಎಸ್.ಆರ್.ಎನ್. ಮೂರ್ತಿ,ಕೈಗಾ, ಕೃಷ್ಣಾ ಭಟ್ಟ, ನಾಯ್ಕನಕೆರೆ, ಯಲ್ಲಾಪುರ, ಸೀತಾ ದಾನಗೇರಿ, ಜೋಯಿಡಾ, ಕಾಳಿದಾಸ ಬಡಿಗೇರ, ಹಳಿಯಾಳ ಅವರು ಕಾವ್ಯ ವಾಚನ ಮಾಡಿದರು.
ಸುದಾಮ ದಾನಗೇರಿ ಗುಂದ. ಜೋಯಿಡಾ ಮತ್ತು ಗೀತಾ ಶಿವರಾಮ ಭಾಗ್ವತ್ ಕನಕನಹಳ್ಳಿ ಇವರು ಗಾಯನ ಕಾರ್ಯಕ್ರಮ
ನಡೆಸಿಕೊಟ್ಟರು. ಹಾರ್ಮೂನಿಯಂ ನಲ್ಲಿ ಸತೀಶ್ ಭಟ್ ಹೆಗ್ಗಾರ, ತಬಲಾ ದಲ್ಲಿ ಗಣೇಶ ಭಾಗ್ಯತ್ ಗುಂಡ್ಕಲ್ ಯಲ್ಲಾಪುರ, ರಿದಂಪ್ಯಾಡ್ ನಲ್ಲಿ , ವಿ.ಟಿ. ಭಟ್ ಹಳವಳ್ಳಿ (ಯಲ್ಲಾಪುರ), ಕೊಳಲು ವಾದನದಲ್ಲಿ ಓಂಕಾರ ಗಾಂಪ್ಟರ್ (ದಾಂಡೇಲಿ), ಹಾಡಿಗೆ ತಕ್ಕಂತೆ ಕುಂಚ ಕಲಾವಿದರಾಗಿ ರವಿ ಹುದ್ದಾರ ಮತ್ತು ನಾಗರಾಜ ಹನೇಹಳ್ಳಿ ಚಿತ್ರ ಬಿಡಿಸಿದರು.