ಕರಾವಳಿ ಭೀಮೋತ್ಸವದ ಸುದ್ದಿಗೋಷ್ಠಿ ನಡೆಸಲಾಯಿತು. 
ಉತ್ತರ ಕನ್ನಡ

ಏಪ್ರಿಲ್ 11 ರಿಂದ ಕರಾವಳಿ ಭೀಮೋತ್ಸವ

ಕಾರವಾರ: ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿ ಏಪ್ರಿಲ್ 11 ರಿಂದ 25 ರವರೆಗೆ ಕರಾವಳಿ ಭೀಮೋತ್ಸವ ಆಯೋಜಿಸಲಾಗಿದೆ ಎಂದು ದೀಪಕ ಕುಡಾಲಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಅಂಬೇಡ್ಕರ್ ಅವರ ಜೀವನ ಚರಿತ್ರೆ ಪ್ರಚುರಪಡಿಸಿರುವ ಸಂವಿಧಾನದ ಬಗ್ಗೆ ಪ್ರಚಾರ ಮಾಡುವ ಉದ್ದೇಶದಿಂದ ರೂಪಕ, ನೃತ್ಯ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.‌
ಮಯೂರವರ್ಮ ವೇದಿಕೆಯಿಂದ ವಿವಿಧ ಟಿವಿಶೋಗಳ ಪ್ತಸಿದ್ಧರನ್ನು ಕರೆಸಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿದಿನ ನಡೆಯಲಿದೆ ಎಂದು ತಿಳಿಸಿದರು.
ಏಪ್ರಿಲ್ 11 ರಂದು ಮಧ್ಯಾಹ್ನ 3 ಗಂಟೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್ ಪುತ್ಥಳಿ ಮೆರವಣಿಗೆ ಮಾಡಲಾಗುವುದು. ನಂತರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಸಚಿವ ಮಹಾದೇವಪ್ಪ ಉತ್ಸವಕ್ಕೆ ಚಾಲನೆ ನೀಡುವರು. ಸಚಿವರಾದ ಪ್ರಿಯಾಂಕ ಖರ್ಗೆ, ಮಂಕಾಳ ವೈದ್ಯ, ಎಂಸಿಎ ಅಧ್ಯಕ್ಷ ಸತೀಶ ಸೈಲ್ ಇತರರು ಉಪಸ್ಥಿತರಿರುವರು ಎಂದರು.
ಏಪ್ರೀಲ್12 ರಂದು ಉಚಿತ ಆರೋಗ್ಯ ಶಿಬಿರ ಮಾಡಲಾಗುವುದು. ಏಪ್ರಿಲ್ 14 ರಂದು ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು. ವಿಧ್ಯಾರ್ಥಿಗಳಿಗಾಗಿ ಸಂವಿಧಾನ ಕುರಿತು ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಲಾವಿದರು ಪ್ರದರ್ಶನ ನೀಡಲು ಅವಕಾಶವಿದ್ದು, ಮಾರ್ಚ್ 2 ರ ಒಳಗೆ ಮೊಬೈಲ್ ಸಂಖ್ಯೆ 9448628953 ಅಥ ಅ 8618864094 ಕ್ಕೆ ಸಂಪರ್ಕಿಸಬಹುದು ಎಂದರು.
ಸಂಘಟಕರಾದ ರಾಜನ್ ಬಾನಾವಳಿ, ಗಾರು ಮಾಂಗ್ರೆಕರ್, ಕಿರಣ ಬೋರ್ಕರ್, ಸಚಿನ್ ಬೋರ್ಕರ್, ರೋಹನ್ ಕಿಡಾಳಕರ್, ಪ್ರಶಾಂತ ಗಡ್ಕರ್, ಸುಭಾಷ ಪಾವಸ್ಕರ್, ಮಂಜುನಾಥ ಪೆಡ್ನೇಕರ್ ಸುದ್ದಿಗೋಷ್ಠಿಯಲ್ಲಿದ್ದರು.