ಕೈಗಾ 5 ಮತ್ತು 6 ನೇ ಘಟಕಕ್ಕೆ ಕಾಂಕ್ರಿಟೀಕರಣ ನಡೆಯಿತು 
ಉತ್ತರ ಕನ್ನಡ

ಕೈಗಾ 5 ಮತ್ತು 6 ನೇ ಘಟಕ ಕಾಂಕ್ರೀಟೀಕರಣ ಪ್ರಾರಂಭ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ:ಕೈಗಾದಲ್ಲಿ 5 ಮತ್ತು 6 ನೇ ಘಟಕದ ನಿರ್ಮಾಣ ಕಾರ್ಯ ಶುರುವಾಗಿದ್ದು, ಭಾನುವಾರ ಮೊದಲ ಕಾಂಕ್ರಿಟೀಕರಣ ನಡೆಯಿತು.
ಅಣುವಿದ್ಯುತ್ ಇಲಾಖೆಯ ಕಾರ್ಯದರ್ಶಿ, ಅಣು ವಿದ್ಯುತ್ ನಿಗಮದ ಅಧ್ಯಕ್ಷ ಅಜಿತ್ ಕುಮಾರ ಮೊಹಂತಿ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಒಟ್ಟು 21 ಸಾವಿರ ಕೋಟಿ ರೂ ವೆಚ್ಚದಲ್ಲಿ ತಲಾ 700 ಮೆಗಾವಾಟ್ ಸಾಮರ್ಥ್ಯದ ಎರಡು ಘಟಕಗಳು ನಿರ್ಮಾಣವಾಗುತ್ತಿವೆ. 2030 ರ ವೇಳೆಗೆ ಮುಕ್ತಾಯವಾಗುವ ಸಾಧ್ಯತೆ ಇದೆ.
ಅಣು ವಿದ್ಯುತ್ ನಿಗಮದ ಅಧ್ಯಕ್ಷ ಭುವನ ಚಂದ್ರ ಪಾಠಕ್, ಇದ್ದರು. ಸ್ಥಳ ನಿರ್ದೇಶಕ ವಿನೋದ ಕುಮಾರ ಸ್ವಾಗತಿಸಿದರು.