ಬಸ್‌ಲಾರಿ ಅಪಘಾತದ ಅಗ್ನಿ ದುರಂತದಲ್ಲಿ ಮೃತಪಟ್ಟ ಭಟ್ಕಳದ ಯುವತಿ ರಶ್ಮಿ ಮಹಾಲೆ ಅವರ ನಿವಾಸಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸುನೀಲ ನಾಯ್ಕ, ಎನ್.ಎಸ್. ಹೆಗಡೆ, ಗೋವಿಂದ ನಾಯ್ಕ ಮತ್ತಿತರರಿದ್ದರು. 
ಉತ್ತರ ಕನ್ನಡ

ಮೃತ ಯುವತಿಯ ಪೋಷಕರಿಗೆ ಕಾಗೇರಿ ಸಾಂತ್ವನ

ಭಟ್ಕಳ: ಹಿರಿಯೂರು ಸಮೀಪ ಸಂಭವಿಸಿದ ಭೀಕರ ಬಸ್‌ಲಾರಿ ಅಪಘಾತದಲ್ಲಿ ಮೃತಪಟ್ಟ ಭಟ್ಕಳದ ಯುವತಿ ರಶ್ಮಿ ಮಹಾಲೆ ಅವರ ನಿವಾಸಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮಗಳ ಅಗಲಿಕೆಯಿಂದ ತೀವ್ರ ಆಘಾತಕ್ಕೊಳಗಾಗಿರುವ ಪೋಷಕರಿಗೆ ಧೈರ್ಯ ತುಂಬಿದ ಅವರು, ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸಿದರು. ಈ ಭೀಕರ ದುರಂತದ ಬಗ್ಗೆ ಪ್ರಧಾನಮಂತ್ರಿ ಮೋದಿ ಅವರು ತೀವ್ರ ಸಂತಾಪ ಸೂಚಿಸಿ, ಮೃತರ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ ಎಂದರು.
ಮಾಜಿ ಶಾಸಕ ಸುನೀಲ ನಾಯ್ಕ, ಜಿಲ್ಲಾ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ಎನ್.ಎಸ್. ಹೆಗಡೆ, ಪ್ರಮುಖರಾದ ಗೋವಿಂದ ನಾಯ್ಕ ಮತ್ತಿತರರಿದ್ದರು.