ಕಾರವಾರ: ಜಲಜೀವನ ಮಿಷನ್ ಯೋಜನೆ ಜಾರಿ ಜಿಲ್ಲೆಯಲ್ಲಿ ಅಸಮರ್ಪಕವಾಗಿರುವ ಬಗ್ಗೆ ಕಂಟ್ರೋಲರ್ ಆ್ಯಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ(ಸಿಎಜಿ) ಕೂಡ ಖಚಿತ ಮಾಡಿದೆ.
2019-24 ರವರೆಗೆ ಕರ್ನಾಟಕದಲ್ಲಿ ಕೈಗೊಂಡಿರುವ ಜಲಜೀವನ ಮಿಷನ್ ಕಾಮಗಾರಿಗಳ ಬಗ್ಗೆ ಸಿಎಜಿ ಲೆಕ್ಕ ಪರಿಶೋಧನೆ ಮಾಡಿ ಹಲವು ಅಂಶಗಳನ್ನು ಪಟ್ಟಿ ಮಾಡಿದೆ. ರಾಜ್ಯದಲ್ಲಿ ಯೋಜನೆ ಜಾರಿಯಲ್ಲಿ ವಿಳಂಬವಾಗಿದೆ. ಕೇಂದ್ರದಿAದ ಬಂದ ಶೇ.45 ರಷ್ಟು ಮಾತ್ರ ಅನುದಾನವನ್ನು ಬಳಸಿಕೊಳ್ಳಲಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ. ಇದರಿಂದ ಕಾರ್ಯಕ್ಷಮತೆ ಆಧಾರಿತ ಅನುದಾನ ಪಡೆಯುವಲ್ಲಿ ರಾಜ್ಯ ವಿಫಲವಾಗಿದೆ ಎಂದು ಸಿಎಜಿ ವರದಿ ಹೇಳಿದೆ. ಸಿಎಜಿ ತಂಡ ಆಯ್ದು ಲೆಕ್ಕ ಪರಿಶೀಲನೆ ನಡೆಸಿದ ಕೆಲವು ಜಿಲ್ಲೆಗಳಲ್ಲಿ ಉತ್ತರ ಕನ್ನಡವೂ ಸೇರಿದೆ ಎಂಬುದು ಗಮನಿಸಬೇಕಾದ ಅಂಶ.
ಬೇಸ್‌ಲೈನ್ ಸರ್ವೇ ಮಾಡಿಲ್ಲ:
ಉತ್ತರ ಕನ್ನಡದಲ್ಲಿ ನೀರಿನ ಅಗತ್ಯದ ಬಗ್ಗೆ ಸರಿಯಾಗಿ ಪ್ರಾಥಮಿಕ ಸರ್ವೇ ಮಾಡದೇ ಇರುವುದು, ಟೆಂಡರ್ ಕರೆಯುವಲ್ಲಿ ವಿಳಂಬ, ನೀರಿನ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿ, ಕ್ರಮ ವಹಿಸದೇ ಇರುವ ವಿಚಾರವನ್ನು ಸಿಎಜಿ ಆಡಿಟ್‌ನಲ್ಲಿ ಗುರುತಿಸಿ ಲ್ಲೇಖಿಸಲಾಗಿದೆ. ಜಿಲ್ಲೆಯ ಅರಗಾ, ಅಲಗೇರಿ, ಕಡವಾಡ ಮುಂತಾದ ಗ್ರಾಮಗಳಲ್ಲಿ ಬೇಸ್‌ಲೈನ್ ಸರ್ವೇಯನ್ನೇ ಸರಿಯಾಗಿ ಮಾಡಿಲ್ಲ ಎಂದು ಸಿಎಜಿ ವರದಿ ಹೇಳಿದೆ.
ಜಿಲ್ಲೆಯಲ್ಲಿ ಜಲಜೀವನ ಮಿಷನ್ ಯೋಜನೆಯ ಕುರಿತು ಪ್ರಚಾರ ಕಾರ್ಯ(ಐಎಸ್‌ಎ) ಸರಿಯಾಗಿ ಆಗಿಲ್ಲ. 2022-23 ರಲ್ಲಿ ಐಎಸ್‌ಎ ಕಾರ್ಯಕ್ರಮದ ಶೇ.50 ರಷ್ಟೂ ಪೂರ್ಣವಾಗಿರಲಿಲ್ಲ ಎಂದು ವರದಿ ಗುರುತಿಸಿದೆ. ಅಲ್ಲದೇ, 5 ಕಾಮಗಾರಿಗಳು ಅನುಮೋದನೆಯಾದ ನಂತರ ಟೆಂಡ್ ಕರೆದು, ಕಾರ್ಯಾದೇಶ ನೀಡಲು 20 ರಿಂದ 35 ತಿಂಗಳು ಪಡೆಯಲಾಗಿದೆ ಎಂದು ವಿವರಿಸಲಾಗಿದೆ. ಇನ್ನು ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬವಾಗಿದೆ. ಉತ್ತರ ಕನ್ನಡದಲ್ಲಿ 2022 ರಲ್ಲಿ ಕೈಗೊಳ್ಳಲಾಗದ 66 ಕಾಮಗಾರಿಗಳಲ್ಲಿ 10ಮಾತ್ರ ಜಾರಿಯಾಗಿದೆ ಎಂದು ವರದಿ ಹೇಳಿದರು. ಜಲಜೀವನ ಮಿಷನ್ ಯೋಜನೆ ಅನುಷ್ಠಾನದ ಕುರಿತು ತಿಂಗಳಿಗೊಂದು ಸಭೆ ನಡೆಸಬೇಕು ಎಂದಿದೆ. ಅದರಲ್ಲೂ ಉತ್ತರ ಕನ್ನಡ ಹಿಂದೆ ಬಿದ್ದಿದೆ. 2022 ರಲ್ಲಿ ಜಿಲ್ಲೆಯಲ್ಲಿ ಒಂದೂ ಸಭೆ ನಡೆಸದೇ ಇರುವುದು ಕಂಡುಬAತು ಎಂದು ವರದಿ ಹೇಳಿದೆ.
ಉಪ್ಪು ನೀರು ಶುದ್ಧೀಕರಣ ಘಟಕವಿಲ್ಲ
ಕರಾವಳಿಯ ನೀರಿನ ಮೂಲಗಳಿಗೆ ಸಮುದ್ರದ ಉಪು÷್ಪ ನೀರಿನ ಸಮಸ್ಯೆ ಉಂಟಾಗುತ್ತದೆ. ಅದನ್ನು ಪರಿಹರಿಸಲು ಉಪು÷್ಪ ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ(ಡಿ-ಸ್ಯಾಲಿನೇಶನ್) ಘಟಕ ಪ್ರಾರಂಭಕ್ಕೆ ಅವಕಾಶವಿತ್ತು. ಆದರೆ, ಯಾವುದೇ ಘಟಕವನ್ನು 2025 ರವರೆಗೂ ಪ್ರಾರಂಭಿಸಿಲ್ಲ ಎಂದು ಉಲ್ಲೇಖಿಸಲಾಗಿದೆ.
ನೀರಿನ ಗುಣಮಟ್ಟ ಬಗ್ಗೆ ಲಕ್ಷ್ಯವಿಲ್ಲ
ವರದಿಯ ಅವಽಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ 1 ಹಾಗೂ ತಾಲೂಕು ಮಟ್ಟದ 3 ನೀರು ಪರೀಕ್ಷಾ ಲ್ಯಾಬ್‌ಗಳಿದ್ದವು. ಸುಮಾರು 6 ಸಾವಿರದಷ್ಟು ಮಾದರಿಗಳನ್ನು ಪಡೆದು ಪರಿಶೀಲಿಸಲಾಗಿದೆ. ಆದರೆ, ಅದರ ಪರೀಕ್ಷಾ ಅವಽ 9 ರಿಂದ ಗರಿಷ್ಠ 75 ದಿನಗಳ ಒಳಗಿರಬೇಕು ಎಂದಿದೆ. ಜಿಲ್ಲೆಯಲ್ಲಿ ನೀರಿನ ಗುಣಮಟ್ಟ ಪರೀಕ್ಷೆಯ ಅವಽ ಮೀರಿದೆ ಎಂದು ಉಲ್ಲೇಖಿಸಲಾಗಿದೆ. ಅಲ್ಲದೇ ನೀರಿನ ಗುಣಮಟ್ಟ ಪರೀಕ್ಷೆಯ ವೇಳೆ ಕೆಲವೆಡೆ ಅಪಾಯಕಾರಿ ಕೋಲಿ ಫಾರ್ಮ್ ಅಂಶವು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗುರುತಿಸಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕಂಡುಬAದಿದೆ. ಅವುಗಳನ್ನು ಸರಿಪಡಿಸಲು ಯಾವುದೇ ಕ್ರಮ ವಹಿಸಲಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
"
ಜಲಜೀವನ ಮಿಷನ್ ಯೋಜನೆಯಲ್ಲಿ ಆದ ಲೋಪಗಳನ್ನು ಸರಿಪಡಿಸಲು ಈಗಾಗಲೇ ಕ್ರಮ ವಹಿಸಲಾಗಿದೆ. ಇನ್ನುಳಿದ ಅಂಶಗಳ ಬಗ್ಗೆಯೂ ಪರಿಶೀಲಿಸಿ ಕ್ರಮ ವಹಿಸಲಾಗುವುದು.
ಡಾ.ದಿಲೀಶ್ ಶಶಿ ಜಿಪಂ ಸಿಇಒ