ಸಚಿವ ಮಂಕಾಳ ವೈದ್ಯ ಕುಮಟಾದಲ್ಲಿ ಸಭೆ ನಡೆಸಿದರು.  
ಉತ್ತರ ಕನ್ನಡ

ಜಲಜೀವನ ಮಿಷನ್‌ ಅರೆಬರೆ ಕಾಮಗಾರಿ: ಸಚಿವ ಮಂಕಾಳ ವೈದ್ಯ ವರಿ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಬಿರು ಬೇಸಿಗೆಯಿಂದ ಕುಡಿಯುವ ನೀರಿನ ಅಭಾವ ಒಂದೆಡೆಯಾದರೆ. ಕೋಟ್ಯಂತರ ರೂ. ಖರ್ಚು ಮಾಡಿಯೂ ಜಲಜೀವನ ಮಿಷನ್(ಜೆಜೆಎಂ) ನೀರು ಮನೆಗಳಿಗೆ ತಲುಪದ ಬಗ್ಗೆ `ವಿಜಯವಾಣಿ' `ಬರಿ ನಲ್ಲಿ ನೀರು ಎಲ್ಲಿ..?' ಎಂಬ ಸರಣಿ ವರದಿಯನ್ನು ಪ್ರಕಟಿಸುತ್ತಿದೆ. ಪರಿಣಾಮ ಸಚಿವ ಮಂಕಾಳ ವೈದ್ಯ ಸಭೆ ನಡೆಸಿದ್ದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕುಮಟಾ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕುಡಿಯುವ ನೀರು ಹಾಗೂ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಸಮಸ್ಯೆಗಳ ಬಗ್ಗೆ ಅವರು ಸಭೆ ನಡೆಸಿದರು. ಜಲಜೀವನ ಮಿಷನ್ ಯೋಜನೆಯ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಜಲ ಜೀವನ ಮೀಷನ್ ಮೂಲಕ ಪ್ರತಿ ಮನೆಗಳಿಗೆ ನೀರಿನ ನಳ ಅಳವಡಿಸಿದರೂ ಕೂಡ ನೀರು ಸರಬರಾಜು ಮಾಡಲು ಇಲಾಖೆ ವಿಫಲವಾಗಿದೆ. ಪ್ರತಿ ತಾಲೂಕಿಗೆ ಸುಮಾರು 100 ಕೋಟಿ ರೂ. ವೆಚ್ಚ ಮಾಡಲಾಗಿದೆ ಎನ್ನುತ್ತೀರಿ. ಯಾವುದಾದರೂ ಒಂದು ಗ್ರಾಮಕ್ಕೆ ನೀರು ಹೋಗಿದೆ ಎಂದಿದ್ದರೆ ತೋರಿಸಿ, ನಾನೂ ಬರುತ್ತೇನೆ ನೋಡಲು ಎಂದು ಅಧಿಕಾರಿಗಳಿಗೆ ಸವಾಲು ಹಾಕಿದರು. ಯಾವುದೇ ಅಽಕಾರಿಗಳು ಅದಕ್ಕೆ ಉತ್ತರಿಸಿಲ್ಲ. ನೀರು ಬರದೇ ಗ್ರಾಮ ಪಂಚಾಯಿತಿಗಳು ಕಾಮಗಾರಿಗಳನ್ನು ಹಸ್ತಾಂತರಿಸಿಕೊಂಡಿದ್ದೇಕೆ ಎಂದು ತಾಪಂ ಇಒಗಳಿಗೆ ಪ್ರಶ್ನೆ ಹಾಕಿದರು.

ಸಮಸ್ಯೆಯಾಗದಂತೆ ಕಾರ್ಯ ನಿರ್ವಹಿಸಿ:

ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಽಕಾರಿಗಳು ಕಾರ್ಯ ನಿರ್ವಹಿಸಿ, ಸಾರ್ವಜನಿಕರ ನೀರಿನ ಸಮಸ್ಯೆಯ ದೂರುಗಳಿಗೆ ತಕ್ಷಣವೇ ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಸೂಚನೆ ನೀಡಿದರು.
ಕುಮಟಾ ಉಪ ವಿಭಾಗಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಈ ಬಾರಿ ಕುಡಿಯುವ ನೀರಿನ ಅಭಾವದಿಂದ ಜನರು ತೊಂದರೆಗಿಡಾಗಿದ್ದು, ಕುಡಿಯುವ ನೀರಿನ ಮೂಲಗಳು ಇಲ್ಲದೇ ಕಡೆ ಟ್ಯಾಂಕರ್ ಮೂಲಕ ನೀರು ಒದಗಿಸುವಂತೆ ನಿರ್ದೇಶನ ನೀಡಿದ ಅವರು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವವರಿಗೆ 15 ದಿನಗಳ ಒಳಗೆ ಹಣ ಪಾವತಿಸಬೇಕು ಎಂದರು.
ಜಿಲ್ಲೆಯ ಎಲ್ಲ ತಾಲೂಕಿಗೆ ಟಾಸ್ಕ್ ಪೋರ್ಸ್ ಅಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ 25 ಲಕ್ಷ ರೂ. ಅನುದಾನ ಹಂಚಿಕೆಯಗಿದ್ದು, ಜಿಲ್ಲೆಗೆ ಇನ್ನೂ 3 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ಬರಲಿದೆ. ಕುಡಿಯುವ ನೀರಿನ ಸಮಸ್ಯೆಗೆ ಯಾವುದೇ ಅನುದಾನದ ಕೊರತೆಯಿಲ್ಲ, ಇನ್ನೂ ಹೆಚ್ಚುವರಿ ಅನುದಾನದ ಅಗತ್ಯವಿದ್ದರೂ ಕೂಡಾ ಸರ್ಕಾರದಿಂದ ಬಿಡುಗಡೆ ಮಾಡಿಸಲಾಗುವುದು ಎಂದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಗೆ ತಕ್ಷಣ ಸ್ಪಂದಿಸಲು ಅನುಕೂಲವಾಗುವoತೆ ತಹಸೀಲ್ದಾರ್ ಕಚೇರಿ ಮತ್ತು ತಾ.ಪಂ. ಕಚೇರಿ ಗಳಲ್ಲಿ ಸಹಾಯವಾಣಿ ಸಂಖ್ಯೆ ಗಳನ್ನು ತೆರೆಯುವಂತೆ ಸಚಿವರು ತಿಳಿಸಿದರು.
ಹೆದ್ದಾರಿ ಸಮಸ್ಯೆ
ಶಿರಸಿ-ಹಾವೇರಿ ವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬAಧಸಿದAತೆ ಮಳೆಗಾಲದಲ್ಲಿ ಸಾರ್ವಜನಿರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆ ಯಾಗದಂತೆ ತುರ್ತು ಕ್ರಮ ಕೈಗೊಳ್ಳುವಂತೆ ಸಚಿವ ಮಂಕಾಳ ವೈದ್ಯ ಸೂಚನೆ ನೀಡಿದರು. ಶಾಸಕ ಭೀಮಣ್ಣ ನಾಯ್ಕ ಕೂಡ ಈ ಬಗ್ಗೆ ಮಾತನಾಡಿ ಅಸಮಾಧಾನ ವ್ಯಕ್ತಪಡಿಸಿದರು. ಮಾಜಾಳಿ-ಭಟ್ಕಳ ರಾಷ್ಟ್ರೀಯ ಹೆದ್ದಾರಿ 66 ರ ಕಾಮಗಾರಿ ಪ್ರಾರಂಭವಾಗಿ 12 ವರ್ಷವಾದರೂ ಮಗಿಯದ ಬಗ್ಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಶಾಸಕ ದಿನಕರ ಶೆಟ್ಟಿ, ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ, ಎಸ್‌ಪಿ ದೀಪನ್ ಎಂ.ಎನ್., ಅಪರ ಜಿಲ್ಲಾಧಿಕಾರಿ, ಸಾಜೀದ್ ಮುಲ್ಲಾ, ಉಪ ವಿಭಾಗಾಧಿಕಾರಿ ಶ್ರವಣ್ ಕುಮಾರ್ ಇದ್ದರು
ಶಿರಸಿ ತಾಲೂಕಿನ 14 ಗ್ರಾಪಂ ಮತ್ತು ಸಿದ್ದಾಪುರ ತಾಲೂಕಿನ 19 ಗ್ರಾಪಂಗಳಲ್ಲಿ ಕುಡಿಯುವ ನೀರಿನ ಅಭಾವವಾಗಿದೆ. ಬಹುತೇಕ ಈ ಭಾಗದ ಕೆರೆಗಳು ಬತ್ತಿರುವುದರಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜೆಜೆಎಂ ಮೂಲಕವೂ ನೀರು ಸರಬರಾಜು ಆಗುತ್ತಿಲ್ಲ.
ಭೀಮಣ್ಣ ನಾಯ್ಕ
ಶಾಸಕ