- ಟ್ರಾನ್ಸ್‌ಪಾಂಡರ್‌ಗಳಲ್ಲಿ ತಾಂತ್ರಿಕ ದೋಷ
- ಮೀನುಗಾರಿಕಾ ದೋಣಿಗಳಿಗೆ ಸಂವಹನ ಸಾಧನ
ಆಳ ಸಮುದ್ರದಲ್ಲಿ ಮೀನುಗಾರಿಕೆ ದೋಣಿಗಳ ದ್ವಿಮುಖ ಸಂಪರ್ಕಕ್ಕಾಗಿ ಇಸ್ರೊದಿಂದ ಅಭಿವೃದ್ಧಿಪಡಿಸಿ, ಸರ್ಕಾರದಿಂದ ಅಳವಡಿಸಿದ್ದ ಸಂವಹನ ಸಾಧನ (ಟ್ರಾನ್ಸ್‌ಪಾಂಡರ್)ಗಳಲ್ಲಿ ದೋಷ ಕಾಣಿಸಿಕೊಂಡಿದ್ದು, ಪೂರೈಕೆ ಮಾಡಿದ ಸಂಸ್ಥೆ ಅದನ್ನು ವಾಪಸ್ ಪಡೆದಿದೆ.
ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ದೋಣಿಗಳು ಅಪಾಯಕ್ಕೆ ಸಿಲುಕಿದರೆ ಸಹಾಯಕ್ಕಾಗಿ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗುತ್ತಿರಲಿಲ್ಲ. ರಕ್ಷಣಾ ಕಾರ್ಯ ನಡೆಸಲು ಅವುಗಳ ಪತ್ತೆ ಕಾರ್ಯವೇ ಕಷ್ಟವಾಗಿತ್ತು. ಇದರಿಂದ ಕೇಂದ್ರ ಸರ್ಕಾರ ಮತ್ಸ್ಯ ಸಂಪದ ಯೋಜನೆಯಲ್ಲಿ ವೇಸಲ್ ಕಮ್ಯುನಿಕೇಶನ್ ಆ್ಯಂಡ್ ಸಪೋರ್ಟ್ ಸಿಸ್ಟಂ (ವಿಸಿಎಸ್‌ಎಸ್) ಅಳವಡಿಸಲು 2024 ರಲ್ಲಿ ನಿರ್ಧರಿಸಿತ್ತು. ಅದಕ್ಕಾಗಿ ಕೇಂದ್ರ ಮೀನುಗಾರಿಕೆ ಇಲಾಖೆ 364 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು.
2025 ರಲ್ಲಿ ಕರ್ನಾಟಕದಲ್ಲಿ ಇವುಗಳ ಅಳವಡಿಕೆ ಪ್ರಾರಂಭವಾಗಿತ್ತು. ಉತ್ತರ ಕನ್ನಡ ಜಿಲ್ಲೆಗೆ ಕಳೆದ ಒಂದು ವರ್ಷದಲ್ಲಿ 3821 ಕ್ಕೂ ಅಧಿಕ
ಪೂರೈಕೆಯಾಗಿದ್ದು, 1659 ಸಾಧನಗಳ ಅಳವಡಿಕೆಯೂ ಪೂರ್ಣವಾಗಿತ್ತು. ಆದರೆ, ಈ ತಿಂಗಳಲ್ಲಿ 1648 ಸಾಧನಗಳನ್ನು ವಾಪಸ್ ಪಡೆಯಲಾಗಿದೆ.
ಇಸ್ರೋದಿಂದ ಅಭಿವೃದ್ಧಿ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಭಿವೃದ್ಧಿಪಡಿಸಿದ ಸಂಪೂರ್ಣ ಭಾರತೀಯ ತಂತ್ರಜ್ಞಾನದ ವಿಸಿಎಸ್‌ಎಸ್ ವ್ಯವಸ್ಥೆಯನ್ನು ಸಂಸ್ಥೆಯ ವಾಣಿಜ್ಯ ವಿಭಾಗ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್(ಎನ್‌ಎಸ್‌ಐಎಲ್) ದೋಣಿಗಳಿಗೆ ಅಳವಡಿಸುವ ಜವಾಬ್ದಾರಿ ವಹಿಸಿಕೊಂಡಿತ್ತು. ಇದರ ಶೇ.60 ರಷ್ಟು ಹಣವನ್ನು ಕೇಂದ್ರ ಸರ್ಕಾರ ಭರಿಸಿದರೆ, ರಾಜ್ಯ ಶೇ.40 ರಷ್ಟು ವೆಚ್ಚ ಭರಿಸುತ್ತಿದೆ.ಮೀನುಗಾರರಿಗೆ ಇದು ಸಂಪೂರ್ಣ ಉಚಿತವಾಗಿ ಲಭಿಸಲಿದೆ. ದೇಶದ 13 ಕರಾವಳಿ ರಾಜ್ಯಗಳ ಒಟ್ಟು 1 ಲಕ್ಷ ಮೋಟರೀಕೃತ ಹಾಗೂ ಯಾಂತ್ರೀಕೃತ ದೋಣಿಗಳಿಗೆ ಈ ವ್ಯವಸ್ಥೆ ಅಳವಡಿಸುವ ಗುರಿ ಹೊಂದಲಾಗಿದ್ದು ಜೂನ್‌ವರೆಗೆ ದೇಶದಲ್ಲಿ ಸುಮಾರು 52,310 ಟ್ರಾನ್ಸ್ಫಾಂಡರ್‌ಗಳ ಅಳವಡಿಕೆ ಕಾರ್ಯ ಮುಗಿದಿದೆ ಎಂದು ಕೇಂದ್ರ ಮೀನುಗಾರಿಕೆ ಇಲಾಖೆ ಪ್ರಕಟಿಸಿತ್ತು. ಆದರೆ, ಸಾಧನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ ಎಂಬ ಕಾರಣ ನೀಡಿ ಎಲ್ಲವನ್ನೂ ವಾಪಸ್ ಪಡೆಯಲಾಗಿದೆ.
ಉಪಗ್ರಹಗಳಿಂದ ಸಂದೇಶ ಪಡೆಯುವ ಮಾಡಲಿದೆ. ದೋಣಿಯಲ್ಲಿರುವ ಮೀನುಗಾರ `ನಭ ಮಿತ್ರ' ಎಂಬ ಆ್ಯಪ್ ಬಳಸುವ ಮೂಲಕ ರಕ್ಷಣೆಯ ಸಂದೇಶ ಕಳಿಸಬಹುದು. ಸಮುದ್ರದ ಹವಾಮಾನದ ಮಾಹಿತಿ ಪಡೆಯಬಹುದು. ದೋಣಿ ಎಲ್ಲಿ ಚಲಿಸುತ್ತಿದೆ ಎಂಬ ದತ್ತಾಂಶವೂ ಸುರಕ್ಷಿತವಾಗಿರುತ್ತದೆ. ಇನ್ನು ದೇಶದ ಅಂತಾರಾಷ್ಟಿçÃಯ ಗಡಿ ದಾಟಿದಲ್ಲೂ ಇದು ಎಚ್ಚರಿಕೆ ಸಂದೇಶ ನೀಡುತ್ತದೆ. ಇದರಿಂದ ದೇಶದ ಭದ್ರತೆಗೂ ಬಹಳ ಅನುಕೂಲವಾಗಲಿದೆ. ಒಡಿಶಾದಲ್ಲಿ ಚಂಡ ಮಾರುತ ಬಂದಾಗ ದೋಣಿಗಳಿಗೆ ಯಶಸ್ವಿಯಾಗಿ ಸಂದೇಶ ರವಾನಿಸಲಾಗಿತ್ತು.
ಉತ್ತರ ಕನ್ನಡದಲ್ಲಿ ಪೂರೈಕೆಯಾದ ಟ್ರಾನ್ಸ್‌ಪಾಂಡರ್‌ಗಳು
ತಾಲೂಕು ಯಾಂತ್ರೀಕೃತ ದೋಣಿಗಳು ಮೋಟರೀಕೃತ ದೋಣಿಗಳು
ತಾಲೂಕು ಪೂರೈಕೆಯಾಗಿದ್ದು ವಾಪಸ್ ಪಡೆದಿದ್ದು ಪೂರೈಕೆಯಾಗಿದ್ದು ವಾಪಸ್ ಪಡೆದಿದ್ದು
ಎನ್‌ಎಸ್‌ಐಎಲ್ ತಂತ್ರಜ್ಞರೇ ಬಂದು ನೋಂದಾಯಿತ ದೋಣಿಗಳಿಗೆ ಸಂವಹನ ಸಾಧನ ಅಳವಡಿಕೆ ಮಾಡುತ್ತಿದ್ದರು. ಈಗ ಕೆಲವನ್ನು ವಾಪಸ್ ಪಡೆದಿದ್ದು, ಶೀಘ್ರದಲ್ಲಿ ಅವುಗಳನ್ನು ಮರು ಅಳವಡಿಕೆ ಮಾಡುವುದಾಗಿ ತಿಳಿಸಿದ್ದಾರೆ.
ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ