ಗೋಕರ್ಣದ ಅಶೋಕೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ಗುರುವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ 33ನೇ ಅನ್ನಬ್ರಹ್ಮ ಚಾತುರ್ಮಾಸ್ಯ ದೀಕ್ಷಾಧಾರಿಗಳಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅವರಿಗೆ ಶ್ರೀಮಠ ಪ್ರಕಾಶಿಸುವ ಧಾರ್ಮಿಕ ಪಂಚಾಂಗದ ಪ್ರಕಟಣೆಗೆ ಸಿದ್ಧವಾಗಿರುವ ನೂತನ ಪ್ಲವಂಗ ಸಂವತ್ಸರದ ಕರಡು ಪ್ರತಿಯನ್ನು ಪಂಚಾಂಗ ಸಮಿತಿಯ ಪೊ.ಶಂಭು ಭಟ್ಟ ಕಡತೋಕಾ ಮತ್ತು ವಿದ್ವಾನ್ ಪತಂಜಲಿ ವೀಣಾಕರ ಶ್ರೀಗಳಿಗೆ ಸಮರ್ಪಿಸಿ ಆಶೀರ್ವಾದ ಪಡೆದರು.
ಗೋಕರ್ಣ: ನಿಯಮಿತವಾಗಿ ನಾವು ಸೇವಿಸುವ ಆಹಾರ ಅಥವಾ ಭೋಜನ ಜೀವ ಜೀವಗಳು ಐಕ್ಯಗೊಳ್ಳುವ ನಿತ್ಯದಲ್ಲಿ ನಡೆಯುವ ಅದ್ವೆತ ಸಾಧನೆಯಾಗಿದೆ. ಹೊರಗಿನ ಆಹಾರ ನಮ್ಮ ದೇಹವನ್ನು ಸೇರಿ ರಕ್ತ, ಮಜ್ಜೆ, ಮಾಂಸ ಇತ್ಯಾದಿ ಅವಯವಗಳ ಮುಖೇನ ಅಂತರ್ಯಾಮಿಯಾಗಿ ಕೊನೆಗೆ ಕರಗಿ ಬೆರೆತು ನಮ್ಮೊಳಗೆ ಒಂದಾಗುತ್ತದೆ. ಆಹಾರದ ಮೂಲಕದ ನಿತ್ಯದ ಈ ಅಗತ್ಯ ಪ್ರಕ್ರಿಯೆ ಅದ್ವೆತ ಸಾಧನೆಯ ನಿತ್ಯಾಭ್ಯಾಸ ಆಗಿದೆ ಎಂದು 33ನೇ ಅನ್ನಬ್ರಹ್ಮ ಚಾತುರ್ಮಾಸ್ಯ ದೀಕ್ಷಾಧಾರಿಗಳಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಅಶೋಕೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ಚಾತುಮಾಸ್ಯ ನಿಮಿತ್ತ ಗುರುವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಶ್ರೀಗಳು ಶರೀರದ ಉಪಸ್ತಂಭದಲ್ಲಿ ಪ್ರಧಾನವಾದ ಆಹಾರದ ಅಧ್ಯಾತ್ಮ ಭೂಮಿಕೆಯನ್ನು ಪರಿಚಯಿಸಿದರು.
ಜೀವೋ ಜೀವಸ್ಯ ಭೋಜನಂ:
ಆಹಾರ ಅಥವಾ ಭೋಜನ ಸೇವನೆಯಲ್ಲಿ ಜೈವಿಕವಾದ ಸಸ್ಯ ಅಥವಾ ಮಾಂಸ ಪ್ರಧಾನ ವಸ್ತು.ಪ್ರಾಣಿಜನ್ಯ ಮಾಂಸ ಮತ್ತು ಉಸಿರಾಡುವ ಸಸ್ಯ ಇವೆರಡು ಜೈವಿಕ ಮೂಲಗಳು. ಅಂದರೆ ಇವೆರಡೂ ಜೀವ ಪ್ರಧಾನವಾದ ಆಹಾರಗಳಾದ ಹಿನ್ನೆಲೆಯಲ್ಲಿ ಇವುಗಳನ್ನು ಸೇವಿಸುವ ಶರೀರದ ಜೊತೆಗೆ ಜೀವಕ್ಕೆ ಜೀವದ ಸಾಧಮ್ಯರ್ ಏರ್ಪಡುತ್ತದೆ. ಇದೇ ಜೀವೋ ಜೀವಸ್ಯ ಭೋಜನಂ. ಆಹಾರ ಶರೀರದ ಒಳಗೆ ಪ್ರವೇಶವಾದ ತರುವಾಯ ನೈಸಗಿರ್ಕ ಪಚನಕ್ರಿಯೆ ನಡೆದು ಎರಡು ಜೀವಗಳ ಅದ್ವೆತ ತಾದಾತ್ಮತೆಯ ಸಾಧಿತವಾಗುತ್ತದೆ. ಹೀಗೆ ಸೇರಿದ ಅಖಂಡ ಆಹಾರ ಸಂಪೂರ್ಣ ಜೀರ್ಣವಾದಾಗ ಶಾರೀರಿಕವಾದ ಅದ್ವೈತ ಪ್ರಕ್ರಿಯೆ ಪರಿಪೂರ್ಣಗೊಳ್ಳುತ್ತದೆ. ಈ ಮೂಲಕ ಅದ್ವೈತ ನಿತ್ಯಾನಂದದ ರೂಪ ಧಾರಣೆ ಮಾಡುತ್ತದೆ. ಒಂದು ಪಕ್ಷ ಆಹಾರ ಜೀರ್ಣವಾಗಿ ಅದ್ವೈತ ಸಾಧಿತವಾಗದೇ ಅಜೀರ್ಣವಾದರೆ ಅದೇ ಆಹಾರ ನಮ್ಮ ಶತ್ರುವಾಗಿ, ರೋಗಕ್ಕೆ ಮೂಲವಾಗಿ ಕೊನೆಗೆ ಶರೀರದ ಅಂತ್ಯಕ್ಕೆ ಕಾರಣವಾಗುತ್ತದೆ. ಹೀಗೆ ಅಜೀರ್ಣವಾದ ಆಹಾರ ನಮ್ಮನ್ನೇ ಜೀಣಿರ್ಸಬಹುದಾಗಿದೆ ಎಂದು ಶ್ರೀಗಳು ಎಚ್ಚರಿಕೆಯನ್ನಿತ್ತರು.
ಜೀವೋ ಜೀವಸ್ಯ ಜೀವನಂ:
ಸೃಷ್ಟಿಯಲ್ಲಿನ ಪ್ರತಿಯೊಂದೂ ಜೀವಿತವಾದುದಾಗಿದೆ. ಪ್ರಾಣಿಗಳಲ್ಲಿ ಮತ್ತು ಸಸ್ಯಗಳಲ್ಲಿ ಜೀವ ಪ್ರಕಟವಾಗಿರುತ್ತದೆ. ಅದೇ ಭೂಮಿ ಮತ್ತು ಮಣ್ಣಿನಲ್ಲಿ ಜೀವ ಗುಪ್ತ ಮತ್ತು ಸುಪ್ತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಸ್ಯ ಮತ್ತು ಮಣ್ಣಿನಲ್ಲಿ ಕೂಡ ಅದ್ವೈತವೇ ಸಾಧಿತವಾಗಿರುತ್ತದೆ. ಹಾಗಾದಾಗ ಮಾತ್ರ ಸಸ್ಯ ಬೆಳೆದು ಬಲಿಷ್ಠವಾಗುತ್ತದೆ. ಹೀಗೆ ಇಲ್ಲಿಯೂ ಒಂದು ಜೀವ ಇನ್ನೊಂದಕ್ಕೆ ಜೀವನ ಕೊಟ್ಟು "ಜೀವೋ ಜೀವಸ್ಯ ಜೀವನಂ' ಎಂಬ ಅದ್ವೈತವನ್ನು ಕಾಣಬಹುದಾಗಿದೆ.
ಜೀವೋದ್ಧಾರ: ಹುಟ್ಟು ಸಾವುಗಳಿಗೆ ಮಾತ್ರ ಸೀಮಿತವಾಗಿರುವ ಸಸ್ಯಗಳಿಗೆ ನಮ್ಮಂತೆ ಸ್ವತಂತ್ರ ಕರ್ಮಗಳಿಲ್ಲ. ಸಸ್ಯಗಳಿಗೂ ಸ್ವಾಸೋಚ್ಛ್ವಸ ಇರುವುದರಿಂದ ಸಸ್ಯಾಹಾರದಲ್ಲಿಯೂ ಹಿಂಸೆ ಇದೆ. ಇದರಿಂದಾಗಿಯೇ ಮನೆಯಲ್ಲಿ ನಾವು ಬಳಸುವ ಸುಡುವ ಒಲೆ, ಅರೆಯುವ ಒರಳು, ಕರಿಯುವ ಎಣ್ಣೆಯ ಬಂಡಿ ಇತ್ಯಾದಿ ಮನೆಯಲ್ಲಿನ ಐದು ವಧಾಸ್ಥಾನಗಳನ್ನು ಶಾಸ ಗುರುತಿಸಿದೆ. ಇಲ್ಲಿ ನಡೆಯವು ಸಸ್ಯಗಳ ವಧಾಪಾಪ ಪರಿಮಾರ್ಜನೆಗಾಗಿ ನಿತ್ಯ ಧಾಮಿರ್ಕ ವೈಶ್ವದೇವ ಕೈಗೊಳ್ಳಲಾಗುತ್ತದೆ. ನಮ್ಮ ನಿತ್ಯದ ಊಟ ಭಗವಂತನ ಮಾರ್ಗದಲ್ಲಿದ್ದು ಒಳ್ಳೆಯ ಕಾರ್ಯಕ್ಕೆ ನಾವು ಮುಂದಾದಲ್ಲಿ ಸಸ್ಯಗಳ ಸದುಪಯೋಗವಾಗಿ ಸಸ್ಯಗಳು ಕೂಡ ಉದ್ಧಾರಗೊಳ್ಳುತ್ತವೆ.
ನದಿಗಳು ಸಮುದ್ರವನ್ನು ಸೇರಿ ಕೊನೆಗೆ ಅವು ಸಮುದ್ರವೇ ಆಗುವ ಮೂಲಕ ಎರಡು ಏಕವಾಗಿ ಅದ್ವೆತಕ್ಕೆ ಕಾರಣವಾಗುತ್ತವೆ. ಇದೇ ರೀತಿ ಪ್ರತಿ ಜೀವ ಅಂತಿಮವಾಗಿ ದೇವರ ಜತೆ ಒಂದಾಗಿ ಅದ್ವೆತವನ್ನು ಸಾಧಿಸುತ್ತವೆ. ಇದೇ ದೇವಾದ್ವೆತ ಅಥವಾ ಬದುಕಿನ ಪರಮಾರ್ಥ ಸಾಧನೆಯಾಗಿದೆ. ಇಂತಹ ದೇವಾದ್ವೆತಕ್ಕೆ ನಾವು ನಿತ್ಯ ಮಾಡುವ ಆಹಾರ ಅಥವಾ ಭೋಜನ ಸೇವನೆ ಯುಕ್ತ ಕ್ರಮದಲ್ಲಿ ಜರುಗಿ ನಿತ್ಯಾದ್ವೆತದ ಸಾಧನೆಯಾಗಬೇಕು. ಹೀಗಾದಲ್ಲಿ ದಿನದ ಆಹಾರ ಮತ್ತು ಅನ್ನ ಬ್ರಹ್ಮದಂತೆ,ದೇವರಂತೆ ಕಾರ್ಯ ಮಾಡುತ್ತದೆ.ಅದರೊಂದಿಗೆ ಜೀವ ಮತ್ತು ದೈವಗಳ ಅದ್ವೆತ ಸಾಧನೆ ಮಾಡಿ ಸವೋರ್ದ್ಧಾರವಾಗಲಿ ಎಂದು ಗುರುವರ್ಯರು ಆಶೀರ್ವಾದವನ್ನಿತ್ತರು.
ಸಮರ್ಪಣೆ:
ಧರ್ಮಸಭೆಯಲ್ಲಿ ಶ್ರೀಮಠದಿಂದ ಪ್ರಕಟಣೆಯಾಗುವ ವಾಷಿರ್ಕ ಧಾಮಿರ್ಕ ಪಂಚಾಂಗದ ನೂತನ ಪ್ಲವಂಗ ಸಂವತ್ಸರದ ಕರಡು ಪ್ರತಿಯನ್ನು ಪಂಚಾಂಗ ಸಮಿತಿಯ ಪೊ.ಶಂಭು ಭಟ್ಟ ಕಡತೋಕಾ ಮತ್ತು ವಿದ್ವಾನ್ ಪತಂಜಲಿ ವೀಣಾಕರ ಶ್ರೀಗಳಿಗೆ ಸಮರ್ಪಿಸಿ ಆಶೀರ್ವಾದ ಪಡೆದರು.
ಸಾಗರ ಹವ್ಯಕ ಮಂಡಲದ ಕೆಳದಿ, ಉಳವಿ, ಕ್ಯಾಸನೂರ, ಇಕ್ಕೇರಿ, ಆವಿನಳ್ಳಿ ವಲಯಗಳ ಪರವಾಗಿ ನಡೆದ ಗುರುಭಿಕ್ಷಾ ಸೇವಾ ನಿಮಿತ್ತ ರಮೇಶ ಹಾರೆಗೊಪ್ಪ ಶ್ರೀಗಳಿಗೆ ಪೂರ್ಣಫಲ ಸಮಪಿರ್ಸಿದರು. ಸುಬ್ರಹ್ಮಣ್ಯ ಚಿಪ್ಳಿ, ರಾವೇಂದ್ರ ಹೊಡಬಟ್ಟೆ, ಗೋವಿಂದ ಹೆಗಡೆ, ನಿಖಿಲ್ ಭಟ್ಟ ಮತ್ತು ದಿನ ಪ್ರಧಾನರಾಗಿ ಗಣಪತಿ ಟಿ.ಆರ್. ವರದಾಮೂಲ ಉಪಸ್ಥಿತರಿದ್ದರು.