ದಾಂಡೇಲಿಯ ಹಳೇ ನಗರಸಭೆ ಮೈದಾನದಲ್ಲಿ ಹಿಂದೂ ಸಮಾಜೋತ್ಸವ ಸಮಿತಿಯವರು ಹಮ್ಮಿಕೊಂಡಿದ್ದ ಬೃಹತ್ ಹಿಂದೂ ಸಮಾವೇಶದಲ್ಲಿ ಶ್ರೀಕಾಂತ ಶೆಟ್ಟಿ ಕಾರ್ಕಳ ಅವರನ್ನು ಸನ್ಮಾನಿಸಲಾಯಿತು. ರಘುನಾಥ ರಾಂದಡ್, ಶ್ರೀನಾಥ ಪಾಸಲಕರ, ರಾಧಾಕೃಷ್ಣ ಹೆಗಡೆ, ನೇಹಾ ಅಚಲಕರ ಇತರರಿದ್ದರು. 
ಉತ್ತರ ಕನ್ನಡ

ಸಂಸ್ಕೃತಿ ಮರೆತರೆ ದೇಶವಾಗಿ ಉಳಿಯಲ್ಲ ಭಾರತ

ಪ್ರಮುಖ ಮುಖ್ಯಾಂಶಗಳು

  • ಶ್ರೀಕಾಂತ ಶೆಟ್ಟಿ ಕಾರ್ಕಳ ಅಭಿಪ್ರಾಯ
  • ದಾಂಡೇಲಿಯಲ್ಲಿ ಬೃಹತ್ ಹಿಂದೂ ಸಮಾವೇಶ
ದಾಂಡೇಲಿ: ಧರ್ಮ ಉಳಿದರೆ ಮಾತ್ರ ದೇಶ ಉಳಿಯುತ್ತದೆ. ಯಾವ ಸಂವಿಧಾನ, ಯಾವ ಮಿಲಿಟರಿ, ಯಾವ ಪೊಲೀಸ್ ವ್ಯವಸ್ಥೆಯಿಂದಲೂ ದೇಶ ಉಳಿಸಲು ಸಾಧ್ಯವಿಲ್ಲ. ನಾವು ನಮ್ಮ ದೇಶ, ಧರ್ಮ ಸಂಸ್ಕೃತಿಯನ್ನು ಮರೆತರೆ ಭಾರತ ದೇಶವಾಗಿ ಉಳಿಯುವುದಿಲ್ಲ ಎಂದು ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ ಪ್ರಮುಖ ಶ್ರೀಕಾಂತ ಶೆಟ್ಟಿ ಕಾರ್ಕಳ ಹೇಳಿದರು.
ಹಳೇ ನಗರಸಭೆ ಮೈದಾನದಲ್ಲಿ ದಾಂಡೇಲಿಯ ಹಿಂದೂ ಸಮಾಜೋತ್ಸವ ಸಮಿತಿಯವರು ಹಮ್ಮಿಕೊಂಡಿದ್ದ ಬೃಹತ್ ಹಿಂದೂ ಸಮಾವೇಶದಲ್ಲಿ ಬುಧವಾರ ಅವರು ದಿಕ್ಸೂಚಿ ಭಾಷಣ ಮಾಡಿದರು.
ನಮ್ಮ ಮಕ್ಕಳಿಗೆ ಧರ್ಮ ಶಿಕ್ಷಣ ಕೊಡಿಸುವಲ್ಲಿ ವಿಫಲರಾಗಿದ್ದೇವೆ. ಬೇರೆ ಸಮಾಜದವರು ಮೂರ್ನಾಲ್ಕು ಮಕ್ಕಳನ್ನು ಸಮಾಜಕ್ಕೆ ಕೊಟ್ಟರೆ, ನಮ್ಮ ಸಮಾಜದವರು ಒಂದು ಮಗುವಿಗೆ ಸಾಕು ಎನ್ನುತ್ತಾರೆ. ಜತೆಗೆ ಆ ಒಂದು ಮಗುವಿಗೂ ಧರ್ಮ ಮತ್ತು ಸಂಸ್ಕಾರದ ಬಗ್ಗೆ ಹೇಳಿಕೊಡುವುದಿಲ್ಲ. ಈ ದೇಶವನ್ನು, ಧರ್ಮವನ್ನು ಉಳಿಸಿಕೊಳ್ಳುವ ಕೆಲಸವನ್ನು ನಾವೆಲ್ಲ ಮಾಡಬೇಕಾಗಿದೆ ಎಂದರು.
ಸಮಿತಿ ಗೌರವಾಧ್ಯಕ್ಷ ರಘುನಾಥ ರಾಂದಡ್ ಅಧ್ಯಕ್ಷತೆ ವಹಿಸಿದ್ದರು. ಪಶು ವೈದ್ಯೆ ಡಾ. ಅರ್ಚನಾ ಸಿನ್ಹಾ, ಪ್ರವೀಣ ಅವರಾದಿ, ಲವ ಶೆಟ್ಟಣ್ಣವರ ಹಾಗೂ ಕ್ರೀಡಾ ಸಾಧಕಿ ಸಾನಿಯಾ ತೋರತ್ ಅವರನ್ನು ಸನ್ಮಾನಿಸಲಾಯಿತು.
ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಶ್ರೀನಾಥ ಪಾಸಲಕರ, ರಾಧಾಕೃಷ್ಣ ಹೆಗಡೆ, ನೇಹಾ ಅಚಲಕರ, ಪರಮೇಶಿ ಕಲಾಲ, ಶಿವಲೋಚನಾ ಸಾಂಗ್ಲೀಕರ, ಹನುಮಂತ ಕುಲಕರ್ಣಿ, ಪ್ರಾಣೇಶ ಮುಗಳಿಹಾಳ, ಗೋವರ್ಧನ ಸಿಂಗ ರಾಠೋಡ, ಪ್ರಮೋದ ಕುಡ್ತರಕರ ಇತರರಿದ್ದರು.
ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ವಾಸುದೇವ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ಸದ್ಭಾವನಾ ಸಮಿತಿ ಅಧ್ಯಕ್ಷ ಸಂತೋಷ ಸೋಮನಾಚೆ, ಎಸ್. ಪ್ರಕಾಶ ಶೆಟ್ಟಿ ಹಾಗೂ ಪದ್ಮಶ್ರೀ ಜೈನ್‌ಕಾರ್ಯಕ್ರಮ ನಿರ್ವಹಿಸಿದರು.