ಕೈಗಾ 5 ಮತ್ತು 6 ನೇ ಘಟಕ ಕಾಮಗಾರಿಗಳಿಗೆ ಎಇಸಿ ಅಧ್ಯಕ್ಷ ಅಜಿತ್ ಕುಮಾರ ಮೊಹಂತಿ ಚಾಲನೆ ನೀಡಿದರು.  
ಉತ್ತರ ಕನ್ನಡ

ಅಣು ವಿದ್ಯುತ್‌ ಕ್ಷೇತ್ರದಲ್ಲಿ ಭಾರತ ಆತ್ಮ ನಿರ್ಭರ : ಎಇಸಿ ಅಧ್ಯಕ್ಷ ಡಾ.ಅಜಿತ್ ಕುಮಾರ ಮೊಹಂತಿ

ಕೈಗಾ 5 ಮತ್ತು 6 ನೇ ಘಟಕದ ಕಾಂಕ್ರೀಟ್ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಇಂಧನ,ಟರ್ಬೈನ್‌ಗಳು, ಸ್ಟೀಮ್ ಜನರೇಟರ್‌ಗಳು ಹಾಗೂ ವಿವಿಧ ಉಪಕರಣಗಳೂ ಭಾರತದಲ್ಲೇ ತಯಾರಾಗುತ್ತವೆ. ಭಾರ ಜಲ ಅಥವಾ ಹೆವಿ ವಾಟರ್ ತಯಾರಿಸುವ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದ್ದು, ಭಾರಿ ಬೇಡಿಕೆ ಇದೆ. ನಾವು ರಷ್ಯಾ, ಯುಎಸ್‌ಎ, ಅರ್ಜೆಂಟೀನಾ ಸೇರಿ ಸಾಕಷ್ಟು ರಾಷ್ಟ್ರಗಳಿಗೆ ರಫ್ತು ಮಾಡುತ್ತೇವೆ. ಇನ್ನಷ್ಟು ದೇಶಗಳಿಂದ ಬೇಡಿಕೆ ಇದೆ ಎಂದರು.
ಕೈಗಾ 5 ಮತ್ತು 6 ನೇ ಘಟಕದಲ್ಲಿ ಇದೇ ಮೊದಲ ಬಾರಿಗೆ ಭೂಮಿಯ ಉತ್ಖನನ, ಪರಮಾಣು ಸ್ಥಾವರ ನಿರ್ಮಾಣ, ಟರ್ಬೈನ್ ದ್ವೀಪ ನಿರ್ಮಾಣ ಹಾಗೂ ವಿವಿಧ ಉಪಕರಣಗಳ ಪೂರೈಕೆ ಸೇರಿ ಎಲ್ಲ ಕಾರ್ಯಗಳನ್ನು ಕೆಲವೇ ದೊಡ್ಡ ನಿರ್ಮಾಣ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. ಮೆಗಾ ಇಂಜಿನಿಯರಿAಗ್ ಆ್ಯಂಡ್ ಇನ್‌ಪ್ರಾಸ್ಟçಕ್ಚರ್ ಕಂಪನಿ ಗುತ್ತಿಗೆ ಪಡೆದಿದೆ. ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಕಂಪನಿಗೆ ಸೂಚಿಸಲಾಗಿದೆ ಎಂದರು. ಇನ್ನು 13 ಘಟಕಗಳು ದೇಶದ ವಿವಿಧೆಡೆ ನಿರ್ಮಾಣ ಹಂತದಲ್ಲಿವೆ. 2031 ರ ಹೊತ್ತಿಗೆ 22 ಗಿಗಾವ್ಯಾಟ್ ಗುರಿ ಮುಟ್ಟುವ ವಿಶ್ವಾಸವಿದೆ ಎಂದರು.