ಶಿರಸಿಯ ಯಡಳ್ಳಿಯಲ್ಲಿ ಆಯೋಜಿಸಿದ್ದ ಆಹಾರ, ಅಧ್ಯಾತ್ಮ ಸಮ್ಮೇಳನಕ್ಕೆSpiritual Conference ಪತಂಜಲಿ ಸಂಸ್ಥೆಯ ಭವರಲಾಲ್ ಆರ್ಯ ಚಾಲನೆ ನೀಡಿದರು. ಗೀತಾ ಪಾಟೀಲ, ವಿ.ಡಿ. ಭಟ್, ವಿನಯ ಹೆಗಡೆ ಇತರರಿದ್ದರು.  
ಉತ್ತರ ಕನ್ನಡ

ಸಾತ್ವಿಕ ಜೀವನದಿಂದ ಭಾರತ ವಿಶ್ವಗುರು Vishwaguru

ಶಿರಸಿ: ಸಾತ್ವಿಕ ಜೀವನ ಕ್ರಮ ಎಲ್ಲರದ್ದಾದರೆ ಭಾರತ ವಿಶ್ವಗುರು Vishwaguru ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಪತಂಜಲಿ ಯೋಗ ಸಂಸ್ಥೆ ದಕ್ಷಿಣ ಭಾರತ ಮುಖ್ಯಸ್ಥ ಭವರಲಾಲ್ ಆರ್ಯ ಹೇಳಿದರು.
 ತಾಲೂಕಿನ ಯಡಳ್ಳಿಯಲ್ಲಿ ಇಂಟರಾಕ್ಟಿವ್ ವರ್ಡ್ ಸ್ಕೂಲ್, ಸುಕರ್ಮ ಯಾಗ ಶಾಲೆ ಹಾಗೂ ಅರಿವು ವೇದಿಕೆ ಶನಿವಾರ ಆಯೋಜಿಸಿದ್ದ ಆಹಾರ ಆರೋಗ್ಯ ಅಧ್ಯಾತ್ಮ ಸಮ್ಮೇಳನಕ್ಕೆSpiritual Conference ಚಾಲನೆ ನೀಡಿ ಅವರು ಮಾತನಾಡಿದರು. 
ಬ್ರಿಟಿಷರು ಭಾರತ ಆಳುವ ವೇಳೆ ನಮ್ಮ ಶಿಕ್ಷಣ ಪದ್ಧತಿಯನ್ನು ನಾಶಪಡಿಸಲು ಯತ್ನಿಸಿದ್ದಾರೆ. ಬ್ರಿಟಿಷ್ ಅಧಿಕಾರಿ ಮೆಕಾಲೆ ದೇಶದ 7 ಲಕ್ಷ ಶಿಕ್ಷಣ ಸಂಸ್ಥೆಗಳನ್ನು ನಾಶ ಮಾಡಿರಬಹುದು. ಆದರೆ, ನಮ್ಮ ಶಿಕ್ಷಣ ಪದ್ಧತಿಯನ್ನು ಮರುಸ್ಥಾಪಿಸುವ ಅಗತ್ಯತೆ ಇದೆ. ಮುಂದಿನ 10 ವರ್ಷಗಳಲ್ಲಿ ಬಹುತೇಕ ಶಿಕ್ಷಣ ಸಂಸ್ಥೆಯನ್ನು ಗುರುಕುಲ ಮಾದರಿಯಲ್ಲಿ ಮಾಡುವ ಯತ್ನ ಪತಂಜಲಿಯಿಂದ ನಡೆದಿದೆ. ಭಾರತೀಯ ಸರ್ಕಾರದ ಶಿಕ್ಷಣ ಬೋರ್ಡ್‌ನಡಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ 7 ಜನ ಯೋಗ ಅಧಾತ್ಮ ಪ್ರಮುಖರು ನಿರ್ದೇಶಕರಾಗಿದ್ದಾರೆ ಎಂದರು. 
ಆಹಾರ, ಆರೋಗ್ಯ ಅಧ್ಯಾತ್ಮ ಗುರುಕುಲ ಶಿಕ್ಷಣ ಪದ್ಧತಿಯೊಂದಿಗೆ ಹೊಂದಿಕೊಂಡಿದೆ. 
ಯೋಗ, ಅಗ್ನಿ ಹೋತ್ರದ ಮೂಲಕ ಕರೊನಾದಂತಹ ರೋಗಗಳೂ ಭಾರತದಿಂದ ತೊಲಗಿಸಿದ್ದೇವೆ. ನಮ್ಮ ಸಂಸ್ಕೃತಿಯಲ್ಲಿರುವ ಸೂಕ್ತ ಶಕ್ತಿಯನ್ನು ಗುರುತಿಸಬೇಕು. ನಮ್ಮಲ್ಲಿರುವ ಈ ತಾಕತ್ತೇ ದೇಶವನ್ನು ಸೂಪರ್ ಪವರ್ ಮಾಡಲಿದೆ ಎಂದರು.
ಯೋಗ ಧ್ಯಾನದಿಂದ ನಮಗಾದ ಅನುಭವವನ್ನು ಇತರರಿಗೂ ಹಂಚುವ ಮೂಲಕ ಇತರರೂ ಯೋಗದತ್ತ ಆಕರ್ಷಿತವಾಗುವಂತೆ ಮಾಡಬೇಕು. ಪ್ರತಿ ಮನೆಗೂ ಸ್ವದೇಶಿ ವಸ್ತುಗಳನ್ನು ತರಬೇಕು ಎಂಬ ಸಂಕಲ್ಪವನ್ನು ನಾವು ಮಾಡಬೇಕು. ನಾವು ಭಾರತದಲ್ಲಿ ಉತ್ಪಾದನೆ ಆದ ವಸ್ತುಗಳನ್ನು  ಮಾತ್ರ ಖರೀದಿಸುತ್ತೇವೆ ಎಂಬ ಸಂಕಲ್ಪ ಮಾಡಿದರೆ ನಾವೇ ದೊಡ್ಡಣ್ಣ ಆಗ್ತೇವೆ. ಸ್ವದೇಶಿ ವಸ್ತುಗಳ ಬಳಕೆ, ಯೋಗ, ಧ್ಯಾನದಿಂದ ನಿರೋಗಿಯಾಗಿ ಬದುಕಿದರೆ ಇತರರಿಗೂ ಮಾದರಿ ಆಗುತ್ತೇವೆ ಎಂದರು. 
 ಡಿವೈಎಸ್ಪಿ ಗೀತಾ ಪಾಟೀಲ ಮಾತನಾಡಿ, ಒಂದು ಶಾಲೆ ತೆರೆಯುವುದು ಕೇವಲ ಕಟ್ಟಡ ಕಟ್ಟಿದಂತಲ್ಲ. ಶಾಲೆಗಳು ಉತ್ತಮ ಶಿಕ್ಷಣದ ಮೂಲಕ ಉತ್ತಮ ಸಮಾಜ ನಿರ್ಮಾಣ ಫ್ಯಾಕ್ಟರಿ ಆರಂಭಿಸಿದಂತೆ. ನಾವು ನಮ್ಮ ಮಕ್ಕಳು ಹೇಗೆ ಇರಬೇಕು ಎಂದು ಕಲ್ಪನೆ ಮಾಡಿಕೊಂಡರೆ ಮಾತ್ರ ಸಾಲದು. ನಾವೂ ಅದೇ ಮಾದರಿಯಲ್ಲಿ ಬದುಕಿದರೆ ಮಕ್ಕಳು ಸುಸಂಸ್ಕೃತರಾಗುತ್ತಾರೆ ಎಂದರು. 
ಆಶಯ ಮಾತನಾಡಿದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಸಂಸ್ಕೃತಿಯ ಸಂರಕ್ಷಣೆಯಲ್ಲಿ ಸಂತರ ಪಾತ್ರ ಪ್ರಮುಖವಾಗಿದೆ. ಇಂದು ಆಂಗ್ಲಭಾಷೆಯ ಶಿಕ್ಷಣದತ್ತ ನಾವು ಅನಿವಾರ್ಯವಾಗಿ ವಾಲಿದ್ದರೂ ನಮ್ಮತನ ಉಳಿಸಿಕೊಳ್ಳುವ ಬಗ್ಗೆ ಕಾರ್ಯಪ್ರವೃತ್ತರಾಗಬೇಕು. ವಿದೇಶಿ ಭಾಷೆಗಳಿಗೆ ಹೋಲಿಸಿದರೆ ಸಂಸ್ಕೃತದ ಮೂಲಕ ಜನಿಸಿದ ನಮ್ಮ ಭಾಷೆಗಳು ಅತ್ಯಂತ ಶಾಸ್ತ್ರೀಯಬದ್ಧವಾಗಿವೆ. ಶಬ್ದಗಳ ಜೊತೆ ಜೋಡಣೆಗೆ ವಿಭಕ್ತಿ ಪ್ರತ್ಯಯಗಳನ್ನು ನಮ್ಮ ದೇಶದ ಭಾಷೆಗಳಲ್ಲಿ ಕಾಣಬಹುದಾಗಿದೆ. ನಮ್ಮಭಾಷೆಯ ಬಗ್ಗೆ ಗೌರವ, ಶ್ರದ್ಧೆ ಬೇಕು ಎಂದರು. 
 ಪ್ರೊ. ಆರ್.ವಿ. ಭಾಗ್ವತ್, ವಿನಯ ಹೆಗಡೆ, ಭಾಸ್ಕರ ಶೆಟ್ಟಿ, ವಿ.ಡಿ. ಭಟ್, ಜನಾರ್ಧನ ಆಚಾರ್ಯ ಇತರರಿದ್ದರು. 

ಬದಲಾವಣೆಯಾಗಲಿ ಮಾನಸಿಕತೆ 

ಶಾಲೆಗಳಿಗೆ ವಿದೇಶಿ ಹೆಸರಿದ್ದರೆ ಮಾತ್ರ ತಮ್ಮ ಮಕ್ಕಳನ್ನು ಅಲ್ಲಿ ಶಿಕ್ಷಣಕ್ಕೆ ಬಿಡುವ ನಮ್ಮ ಮಾನಸಿಕತೆ ಬದಲಾವಣೆಯಾಗಬೇಕು. ಶಾಲೆ ಕಳಿಸುವ ಪ್ರತಿ ಜಿಲ್ಲೆ, ಗ್ರಾಮದಲ್ಲಿ ಆಧುನಿಕ ಶಿಕ್ಷಣದೊಂದಿಗೆ ಗುರುಕುಲ ಮಾದರಿಯ ಶಿಕ್ಷಣ ನೀಡಲು ಪತಂಜಲಿ ಮುಂದಾಗಿದೆ.