ಸಿದ್ದಾಪುರ ತಾಲೂಕಿನ ಗ್ರಾಮೀಣ ಭಾಗದ ಕೃಷಿ ತೋಟದಲ್ಲಿ ಅಡಕೆ ಸಸಿ ನೆಡುತ್ತಿರುವುದು. 
ಉತ್ತರ ಕನ್ನಡ

ಕೃಷಿ ಕೂಲಿಕಾರರಿಗೆ ಹೆಚ್ಚಿದ ಬೇಡಿಕೆ

ವಿನಯ ಹೆಗಡೆ
ಸಿದ್ದಾಪುರ: ನಿರಂತರ ಮಳೆಯಿಂದಾಗಿ ಕುಂಠಿತಗೊಂಡಿದ್ದ ಕೃಷಿ ಚಟುವಟಿಕೆಗೆ ಈಗ ಚುರುಕುಗೊಂಡಿದ್ದು, ಕೃಷಿ ಕೂಲಿಕಾರರಿಗೆ ಬೇಡಿಕೆ ಹೆಚ್ಚಿದೆ.  
ಪ್ರಸಕ್ತ ವರ್ಷ ಮೇ 15ರಿಂದ ಆರಂಭಗೊಂಡ ಮಳೆ ನಿರಂತರವಾಗಿ ಐದುವರೆ ತಿಂಗಳು ಬಿದ್ದಿದ್ದು ಇದರಿಂದ ತಾಲೂಕಿನ ರೈತರ ಜೀವನಾಡಿ ಬೆಳೆಯಾಗಿರುವ ಅಡಕೆ ಹಾಗೂ ಭತ್ತದ ಬೆಳೆಗಳ ಮೇಲೆ ಮತ್ತು ಮತ್ತಿತರ ಉಪಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾದೆ.
ಅಡಕೆ ತೋಟದಲ್ಲಿ ಕಳೆ ತೆಗೆಯುವುದು, ಅಡಕೆ ಸಸಿ ನೆಡುವುದು, ಸಸಿ ಬುಡಮಾಡುವುದು, ಗೊಬ್ಬರ ಹಾಕುವುದು ಸಾಮಾನ್ಯವಾಗಿ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಮಾಡಿ ಮುಗಿಸುತ್ತಾರೆ. 
ಆದರೆ ಈ ವರ್ಷದ ನಿರಂತರ ಮಳೆಯಿಂದಾಗಿ ಎಲ್ಲ ಕೆಲಸಗಳು ಕುಂಠಿತಗೊಂಡಿದೆ. ಆದರೂ ಮಳೆ ಕಡಿಮೆ ಆದಾಗಿನ ಸಮಯವನ್ನು ನೋಡಿ ಕೆಲಸಗಳನ್ನು ಮಾಡುತ್ತಿದ್ದಾರೆ. 
ಆದರೆ ಈ ಎಲ್ಲ ಕೆಲಸಗಳನ್ನು ಮಾಡಲಿಕ್ಕೆ ಕೂಲಿಕಾರರ ಅವಶ್ಯಕತೆ ಇದೆ. ಒಮ್ಮೆ ಕೂಲಿಕಾರರು ಸಿಕ್ಕಿದರೆ ಅಂದೇ ಮಳೆ ಜೋರು, ಮಳೆ ಕಡಿಮೆ ಆದಾಗ ಕೂಲಿಕಾರರಿಗೆ ಬೇಡಿಕೆ ಹೆಚ್ಚಾಗುತ್ತಿದೆ.
"

ಮಳೆಯಿಂದಾಗಿ ಎಲ್ಲ ಕೆಲಸಗಳು ನಿಂತು ಹೋಗಿದ್ದವು. ಆದರೆ ಈಗ ಸ್ವಲ್ಪ ಮಟ್ಟಿಗೆ ಮಳೆ ಕಡಿಮೆ ಆಗಿರುವುದರಿಂದ ಅನಿವಾರ್ಯವಾಗಿ ಅಡಕೆ ಗಿಡ ನೆಡುವುದು, ಗೊಬ್ಬರ ಹಾಕುವುದು ಮತ್ತಿತರ ಕೆಲಸ ಮಾಡಬೇಕಾಗಿದೆ.

ಒಂದೆಡೆ ಮಳೆ ಹಾಗೂ ಕೂಲಿಕಾರರ ಸಮಸ್ಯೆಯಿಂದಾಗಿ ನಿಂತನೀರಾಗಿದ್ದ ಕೃಷಿ ಚಟುವಟಿಕೆಗಳು ಈಗ ನಿಧಾನವಾಗಿ ಚುರುಕುಗೊಳ್ಳುತ್ತಿದೆ. ಮಳೆಯ ಪ್ರಮಾಣ ಕಡಿಮೆ ಆಗಿದೆ. ಬಿಸಿಲು ಬೀಳುತ್ತಿದೆ. ಅಡಕೆ ಗಿಡ ನೆಡುವುದಕ್ಕೆ, ಬುಡ ಮಾಡುವುದಕ್ಕೆ ಹಾಗೂ ಗೊಬ್ಬರ ಹಾಕುವುದಕ್ಕೆ ಈಗ ಸಕಾಲವಾಗಿರುವುದರಿಂದ ಕೃಷಿಕರು ಹಾಗೂ ಕೂಲಿಕಾರರೂ ಬಿಡುವಿಲ್ಲದೇ ಕೆಲಸದಲ್ಲಿ ತೊಡಗಿದ್ದಾರೆ. 
ಆದರೆ ಇದು ಸಾಂಪ್ರದಾಯಿಕ ಕೃಷಿ ಕೆಲಸ ಅಲ್ಲದಿದ್ದರೂ ಅನಿವಾರ್ಯವಾಗಿ ಕೆಲವು ಕೆಲಸಮಾಡಬೇಕಾಗಿದೆ ಎನ್ನುವುದು ಕೃಷಿಕರ ಮಾತು.
ಒಂದೆಡೆ ವಿಪರೀತ ಮಳೆ ಇಂದಾಗಿ ಅಡಕೆ ಕೊಳೆ, ಕಳೆದ ಮೂರು ವರ್ಷದಿಂದ ಕಾಡುತ್ತಿರುವ ಎಲೆ ಚುಕ್ಕಿ ರೋಗದಿಂದಾಗಿ ಅಡಕೆ ಬೆಳೆ ಕಳೆದ ವರ್ಷಕ್ಕಿಂತ  ಶೇ.50ರಷ್ಟು ಕಡಿಮೆ ಆಗಿರುವುದರಿಂದ  ಅಡಕೆ ಬೆಳೆಗಾರರ ಸ್ಥಿತಿ ಚಿಂತಾಜನಕಾಗಿದೆ.