ಸಿದ್ದಾಪುರದಲ್ಲಿ ಜಿಲ್ಲಾ ರೈತ ಕ್ಷೇಮಾಭಿವೃದ್ಧಿ ಸಮಿತಿ ಹಾಗೂ ವಿವಿಧ ಸಂಘಟನೆಯವರು ಉಪ ತಹಸೀಲ್ದಾರ್ ಜಿ.ಎಲ್. ಶಾಮಸುಂದರ ಅವರಿಗೆ ಮನವಿ ಸಲ್ಲಿಸಿದರು. ವೀರಭದ್ರ ನಾಯ್ಕ, ಪಿ.ವಿ. ಹೆಗಡೆ, ನಂದನ ಬೋರ್ಕರ್,ಶಿವಾನಂದ, ಮಾರುತಿ ನಾಯ್ಕ ಹೊಸೂರು, ಗುರುರಾಜ ಶಾನಭಾಗ, ಅನಿಲ್ ಕೊಠಾರಿ , ಲಕ್ಷಣ ನಾಯ್ಕ, ಚಂದ್ರಶೇಖರ ನಾಯ್ಕ, ಪಿ .ಡಿ. ನಾಯ್ಕ, ಸುರೇಶ ನಾಯ್ಕ, ತಿಮ್ಮಣ್ಣ ನಾಯ್ಕ, ರೇವಣ್ಣ ನಾಯ್ಕ, ವಿನಾಯಕ, ರಾಘವೇಂದ್ರ, ಕೃಷ್ಣಮೂರ್ತಿ ಇತರರಿದ್ದರು. 
ಉತ್ತರ ಕನ್ನಡ

ವೃದ್ಧಾಪ್ಯ ವೇತನದ ಆದಾಯ ಮಿತಿ ಒಂದು ಲಕ್ಷಕ್ಕೆ ಹೆಚ್ಚಿಸಿ

ಸಿದ್ದಾಪುರ: ವೃದ್ಧಾಪ್ಯ ವೇತನದ ಆದಾಯ ಮಿತಿಯನ್ನು 32ಸಾವಿರದಿಂದ ಒಂದು ಲಕ್ಷಕ್ಕೆ ಹೆಚ್ಚಿಸಬೇಕೆಂದು ಜಿಲ್ಲಾ ರೈತ ಕ್ಷೇಮಾಭಿವೃದ್ಧಿ ಸಮಿತಿ ಹಾಗೂ ವಿವಿಧ ಸಂಘಟನೆಯವರು ತಹಸೀಲ್ದಾರ್ ಎಂ.ಆರ್.ಕುಲಕರ್ಣಿ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ರೈತ ಮುಖಂಡ ವೀರಭದ್ರ ನಾಯ್ಕ ಮಾತನಾಡಿ, ಸಂಧ್ಯಾ ಸುರಕ್ಷಾ, ವೃದಾಪ್ಯ ವೇತನಕ್ಕೆ ಸಂಬಂಧಿಸಿದ ಆದಾಯ ಮಿತಿಯನ್ನು ಬಹಳ ಹಿಂದೆ ನಿಗದಿಪಡಿಸಲಾಗಿತ್ತು. ಈಗ ಆದಾಯ ಮಿತಿ ಪ್ರಮಾಣ ಪತ್ರ ಕೇಳಿದ್ದು ಇದರಿಂದ ಹಲವರಿಗೆ ತೊಂದರೆಯಾಗುತ್ತಿದೆ. ಕೂಡಲೇ ಸರ್ಕಾರ ಈ ನೀತಿ ಕೈ ಬಿಟ್ಟು ಆದಾಯ ಮಿತಿಯನ್ನು 32ಸಾವಿರದಿಂದ 1 ಲಕ್ಷಕ್ಕೆ ಏರಿಸಬೇಕು. ಬಡವರಿಗೆ ಬದಕಲು ಅವಕಾಶ ನೀಡಿ, ವಯಸ್ಸಾದವರಿಗೆ ಈ ಹಣ ಉಪಯೋಗ ಆಗುತ್ತಿತ್ತು ಅದಕ್ಕೆ ಕಡಿವಾಣ ಹಾಕುತ್ತಿರುವುದು ತಪ್ಪು. ಇದನ್ನ ಸರಿಪಡಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ಪ್ರಮುಖರಾದ ನಂದನ ಬೋರ್ಕರ್, ಶಿವಾನಂದ, ಮಾರುತಿ ನಾಯ್ಕ ಹೊಸೂರು, ಪಿ.ವಿ ಹೆಗಡೆ ಹೊಸಗದ್ದೆ, ಅನಿಲ್ ಕೊಠಾರಿ, ಲಕ್ಷಣ ನಾಯ್ಕ ಮತ್ತಿತರರು ಮಾತನಾಡಿ ಸರ್ಕಾರದ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚಂದ್ರಶೇಖರ ನಾಯ್ಕ, ಗುರುರಾಜ ಶಾನಭಾಗ, ಪಿ .ಡಿ. ನಾಯ್ಕ, ಸುರೇಶ ನಾಯ್ಕ, ತಿಮ್ಮಣ್ಣ ನಾಯ್ಕ, ರೇವಣ್ಣ ನಾಯ್ಕ, ವಿನಾಯಕ, ರಾಘವೇಂದ್ರ, ಕೃಷ್ಣಮೂರ್ತಿ ಇತರರಿದ್ದರು.