ಕಾರವಾರ: ಮಹಿಳೆಯ ಮೇಲೆ ಬಲಾತ್ಕಾರ ಮಾಡಿದ ಅಪರಾಧಿಗೆ 10 ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ನೊಂದ ಮಹಿಳೆಗೆ 10 ಸಾವಿರ ರೂ. ಪರಿಹಾರ ರೂಪದಲ್ಲಿ ನೀಡಬೇಕು ಮತ್ತು ನೊಂದ ಮಹಿಳೆಯು ಜಿಲ್ಲಾ ಉಚಿತ ಕಾನೂನು ಪ್ರಾಧಿಕಾರದಿಂದ ಪರಿಹಾರ ಪಡೆಯಬಹುದೆಂದು ಶಿರಸಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ, ಪಿಠಾಸೀನ ನ್ಯಾಯಾಧೀಶರಾದ ಕಿರಣ ಕಿಣಿ ತೀರ್ಪು ನೀಡಿದ್ದಾರೆ.
ಪ್ರಕರಣ ಹಿನ್ನಲೆ:
ಉಲ್ಲಾಸ ಸಡಕೋ ಗಾವಡಾ ಜೋಯಿಡಾ ತಾಲೂಕಿನ ಅಣಶಿ ಗ್ರಾಮದ ಕೈಲವಾಡಾ ಮಜರೆಯ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಅಣಶಿ ವನ್ಯಜೀವಿ ವಲಯದಲ್ಲಿ 2018 ಡಿಸೆಂಬರ್ ತಿಂಗಳಲ್ಲಿ ದನ ಮೇಯಿಸಲು ಹೋದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ನಂತರ ಈ ವಿಷಯವನ್ನು ಯಾರಿಗಾದರೂ ಹೇಳಿದರೇ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವ ಬೇದರಿಕೆ ಹಾಕಿದ್ದ. ಅಲ್ಲದೆ, ತಾನು ಕೃತ್ಯದ ದಿನದಂದು ಹಾಕಿಕೊಂಡ ಬಟ್ಟೆಯಲ್ಲಿ ಯಾವುದೇ ಕುರುಹುಗಳು ಸಿಗಬಾರದೆಂಬ ಉದ್ದೇಶದಿಂದ ಪ್ಯಾಂಟ್ ಮತ್ತು ಟಿ ಶರ್ಟನ್ನು ತೊಳೆದು ಸಾಕ್ಷಿ ಪುರಾವೆ ನಾಶಪಡಿಸಿದ ಬಗ್ಗೆ ಆತನ ವಿರುದ್ಧ ದೇಷಾರೋಪಣೆ ಪತ್ರ ಸಲ್ಲಿಕೆಯಾಗಿ ವಿಚಾರಣೆ ನಡೆಸಲಾಗಿತ್ತು.
ಜೋಯಿಡಾ ವೃತ್ತದ ಅಂದಿನ ತನಿಖಾಧಿಕಾರಿಯಾದ ಪೊಲೀಸ್ ವೃತ್ತ ನಿರೀಕ್ಷಕ ರಮೇಶ ಎಸ್ ಹೂಗಾರ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೇಷಾರೋಪಣೆ ಪತ್ರ ಸಲ್ಲಿಸಿದ್ದರು ಹಾಗೂ ಕಾನ್ಸ್‌ಟೇಬಲ್ ಲಿಯಾಕತ್ ಅಲಿ ಮತ್ತು ಖಲೀಲ್ ಮುಲ್ಲಾ ರವರು ಸಾಕ್ಷಿ ವಿಚಾರಣೆಯ ಕಾಲಕ್ಕೆ ಸಕ್ಷಿದಾರರನ್ನು ಸಮಯೋಜಿತ ಪ್ರಕರಣದಲ್ಲಿ ಹಾಜರು ಪಡಿಸಿ ಆರೋಪತನಿಗೆ ಶಿಕ್ಷೆ ಗುರಿಪಡಿಸುವಲ್ಲಿ ಸಹಕರಿಸಿದ್ದರು.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಆಭಿಯೋಜಕ ರಾಜೇಶ್ ಎಂ. ಮಳಗಿಕರ್ ಪ್ರಕರಣದ ವಿದ್ಯಮಾನಗಳನ್ನು ಮತ್ತು ಸಾಕ್ಷಿದಾರರ ಸಾಕ್ಣ್ಯಗಳನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿತನಿಗೆ ಶಿಕ್ಷೆ ವಿಧಿಸಬೇಕೆಂದು ಸದೀರ್ಘ ವಾದ ಮಂಡಿಸಿದ್ದರು.