ಯಲ್ಲಾಪುರದ ಕಲ್ಮಠದಲ್ಲಿ ಧಾರ್ಮಿಕ ಸಭೆಯ (religious implementation)ಸಾನ್ನಿಧ್ಯ ವಹಿಸಿದ್ದ ಕೇದಾರ ಜಗದ್ಗುರು ಶ್ರೀ ಡಾ.ಭೀಮಾಶಂಕರ ಶಿವಾಚಾರ್ಯ ಭಗವತ್ಪಾದರಿಗೆ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ದ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಎಸ್. ಅಲ್ಲಯ್ಯನವರಮಠ ಫಲ ಸಮರ್ಪಿಸಿದರು. 
ಉತ್ತರ ಕನ್ನಡ

ದೃಢ ಮನಸ್ಥಿತಿಯಿಂದ ಅನುಷ್ಠಾನ ಕೈಗೊಳ್ಳಿ religious implementation

ವಿನಯ ಹೆಗಡೆ
ಯಲ್ಲಾಪುರ: ಧಾರ್ಮಿಕ ಅನುಷ್ಠಾನವೆಂದರೆ (religious implementation) ಕೇವಲ ಬಾಯಿ ಮಾತಲ್ಲ. ಭೂಮಿ ಆಕಾಶವೇ ಹೊದಿಕೆ ಮಾಡಿಕೊಂಡು ದೃಢ ಮನಸ್ಥಿತಿಯಿಂದ ಅನುಷ್ಠಾನ ಮಾಡಿದರೆ ದೃಢ ಸಂಕಲ್ಪವಾಗಿರುವ ಮನಕ್ಕೂ, ತಿಳಿಮುಖವಾಗಿರುವ ನೀರಿಗೂ ದಾರಿ ತಪ್ಪಿಸಲು ಜಗತ್ತಿನಲ್ಲಿ ಯಾರಿಗೂ ಸಾಧ್ಯವಿಲ್ಲ ಎಂದು ಕೇದಾರ ಜಗದ್ಗುರು ಶ್ರೀ ಡಾ.ಭೀಮಾಶಂಕರ ಶಿವಾಚಾರ್ಯ ಭಗವತ್ಪಾದರು ನುಡಿದರು.
ಪಟ್ಟಣದ ಕಲ್ಮಠದ ಶಿವ ಸಾನ್ನಿಧ್ಯ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಎಸ್. ಅಲ್ಲಯ್ಯನವರಮಠ ನೇತೃತ್ವದಲ್ಲಿ ಮಂಗಳವಾರ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಹಿಮಾಲಯದಲ್ಲಿ ನಮ್ಮ ಅಧೀನದಲ್ಲಿ 22 ಮಠಗಳಿವೆ. ಕೇದಾರದ ಅರ್ಥವೆಂದರೆ, ಕೇ ಅಂದರೆ ಸ್ವರ್ಗ, ದ್ವಾರ ಅಂದರೆ ಬಾಗಿಲು ಎಂದ ಅವರು, ಕೇದಾರ ಪೀಠವನ್ನು ಕರೆಸಿ, ಸೇವೆ ಮಾಡಿದರೆ ಸ್ವರ್ಗದ ದರ್ಶನ ಪಡೆದ ಫಲ ಬರುತ್ತದೆ. ಅಲ್ಲಯ್ಯನವರಮಠ ಅವರ ಸಂಘಟನೆಯಿಂದ ಇದು ಸಾಧ್ಯವಾಗಿದೆ ಎಂದರು.
ಕೇದಾರ ಪೀಠದ ಉತ್ತರಾಧಿಕಾರಿ ಶ್ರೀ ಕಣ್ವಕುಪ್ಪಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇವರು ಮತ್ತು ಗುರುಗಳನ್ನು ಸಮನಾಗಿ ನೋಡುವ ಪೀಠ ಕೇದಾರನಾಥವಾಗಿದೆ. ಪೂರ್ವ ಸುಕೃತ ಫಲವಾಗಿ ಶ್ರೀಗಳ ಅವರ ದರ್ಶನ ದೊರಕುತ್ತದೆ ಎಂದರು.
ಗುರುಪ್ರಸಾದ ಸಂಗಡಿಗರ ವೇದ ಘೋಷ ಮಾಡಿದರು. ಶಿವಲಿಂಗಯ್ಯ ಎಸ್. ಅಲ್ಲಯ್ಯನವರಮಠ ಕುಟುಂಬದವರು ಫಲ ಸಮರ್ಪಣೆ ಮಾಡಿದರು. ಇದಕ್ಕೂ ಮುನ್ನ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದರು. ಉದ್ಯಮಿ ಬಾಲಕೃಷ್ಣ ನಾಯಕ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದು, ನಂತರ ಅನ್ನಪ್ರಸಾದ ಸ್ವೀಕರಿಸಿದರು.