ಅಬಕಾರಿ ಅಧಿಕಾರಿಗಳು ಅಕ್ರಮ ಮದ್ಯ ವಶಕ್ಕೆ ಪಡೆದರು 
ಉತ್ತರ ಕನ್ನಡ

ಸಿನಿಮೀಯ ರೀತಿ ಸ್ಕೂಟರ್‌ ಬೆನ್ನತ್ತಿ ಅಕ್ರಮ ಸಾರಾಯಿ ಹಿಡಿದ ಅಬಕಾರಿ ಅಧಿಕಾರಿಗಳು

ಸುಭಾಸ ಹೆಗಡೆ ಧೂಪದಹೊಂಡ

ಕಾರವಾರ: ಅಬಕಾರಿ ಅಧಿಕಾರಿಗಳು ಗೋವಾ ಮದ್ಯದ ಮೇಲೆ ನಿರಂತರ ದಾಳಿ ನಡೆಸಿದ್ದು, ಅಕ್ರಮ ಮದ್ಯ ವಶಕ್ಕೆ ಪಡೆಯುತ್ತಿದ್ದಾರೆ. ಮಂಗಳವಾರ ಮುಡಗೇರಿ ಬಳಿ ಸ್ಕೂಟರ್ ಒಂದನ್ನು ಬೆನ್ನಟ್ಟಿದ ಅಬಕಾರಿ ನಿರೀಕ್ಷಕ ವಿಜಯ ಮಹಾಂತೇಶ ಲಮಾಣಿ ಹಾಗೂ ತಂಡ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 36 ಬಾಟಲಿ ಗೋವಾ ಪೆನ್ನಿ 12 ಕಿಂಗ್ ಫಿಶರ್ ಸ್ಟ್ರಾಂಗ್‌ ಬಿಯರ್ ಬಾಟಲಿಗಳು ಹಾಗೂ ಸ್ಕೂಟರ್ ವಶಕ್ಕೆ ಪಡೆದಿದ್ದಾರೆ. ಬೈಕ್ ಪಲ್ಟಿಯಾಗುತ್ತಿದ್ದಂತೆ ಚಾಲಕ ಪರಾರಿಯಾಗಿದ್ದಾನೆ. ಸೋಮವಾರ ಮಧ್ಯಾಹ್ನ ಮಾಜಾಳಿ ತನಿಖಾ ಠಾಣೆಯಲ್ಲಿ ತಲೆಯ ಸಮೀಪ ತಲೆಯಲ್ಲಿ ಗೋವಾ ಮದ್ಯ ಸಾಗಿಸುತ್ತಿದ್ದ ಮಹಿಳೆಯೊಬ್ಬಳನ್ನು ಬಂಽಸಿ ಆಕೆಯಿಂದ 27.5 ಲೀಟರ್ ಗೋವಾ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ. ಮಾಜಾಳಿ ತನಿಖಾ ಠಾಣೆಯಲ್ಲಿ ಗುರುವಾರ ಸ್ಕೂಟರ್ ಮೇಲೆ ಸಾಗಿಸುತ್ತಿದ್ದ 27 ಲೀಟರ್ ಗೋವಾ ಮದ್ಯವನ್ನು ತನಿಖಾ ಠಾಣೆಯ ಸಿಬ್ಬಂದಿ ವಶಕ್ಕೆ ಪಡೆದಿದ್ದು, ಚಾಲಕ ಪರಾರಿಯಾಗಿದ್ದಾನೆ.