ಮುಂಡಗೋಡ ತಾಲೂಕಿನ ಟಿಬೆಟಿಯನ್ ಕ್ಯಾಂಪ್ (tibetancamp) ನಲ್ಲಿ ಸ್ಥಳಿಯ ಆಡಳಿತದ ಅನುಮತಿ ಇಲ್ಲದೆ ನಿರ್ಮಾಣವಾಗುತ್ತಿರುವ ಕಟ್ಟಡ.
- ಸ್ಥಳಿಯ ಆಡಳಿತದ ಅನುಮತಿ ಪಡೆಯದೇ ಕಾಮಗಾರಿ
- ಸುರಕ್ಷತೆ ಇಲ್ಲದೆ ಕಾಮಿರ್ಕರ ಜೀವಕ್ಕೂ ಕುತ್ತು
ಚಂದ್ರಶೇಖರಯ್ಯ ಹಿರೇಮಠ ಮುಂಡಗೋಡ
ತಾಲೂಕಿನ ಟಿಬೆಟಿಯನ್ ಕ್ಯಾಂಪ್ (tibetancamp)ಗಳಲ್ಲಿ ಅನುಮೋದನೆ ಅಥವಾ ಪರವಾನಗಿ ಇಲ್ಲದೇ ಅಕ್ರಮವಾಗಿ ಕಟ್ಟಡಗಳನ್ನು ನಿಮಿರ್ಸುತ್ತಿರುವ ಆರೋಪ ಕೇಳಿ ಬಂದಿದೆ.
ಆದರೆ, ಸಂಬಂಧಪಟ್ಟ ಇಲಾಖೆಗಳು ಅಥವಾ ಜಿಲ್ಲಾಡಳಿತ ಮಾತ್ರ ಜಾಣ ಕುರುಡು ವಹಿಸಿರುವುದು ಸ್ಥಳಿಯರ ಅಸಮಾಧಾನಕ್ಕೆ ಕಾರಣವಾಗಿದೆ.
ಚೀನಾದ ದೌರ್ಜನ್ಯಕ್ಕೆ ಒಳಗಾಗಿ ನಿರಾಶ್ರಿತರಾಗಿ ಬಂದ ಟಿಬೆಟಿಯನ್ನರಿಗೆ ಭಾರತ ಸರ್ಕಾರ ಆಶ್ರಯ ಕೊಡಲು ನಿರ್ಧರಿಸಿತು. ಅದರಂತೆ ಕರ್ನಾಟಕದಲ್ಲಿ ಬೈಲಕುಪ್ಪೆ, ಮುಂಡಗೋಡ, ಹೂವಿನಹಡಗಲಿ, ಗುರುಪುರ ಹಾಗೂ ಕೊಳ್ಳೆಗಾಲದಲ್ಲಿ ಜಾಗ ನೀಡಲಾಯಿತು. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಇಂದೂರು, ಹುನಗುಂದ, ನಂದಿಟ್ಟ, ಗುಂಜಾವತಿ ಗ್ರಾಪಂ ವ್ಯಾಪ್ತಿಯ 4032ಎಕರೆ ಅರಣ್ಯ ಭೂಮಿಯನ್ನು ಗುರುತಿಸಿ ಟಿಬೆಟಿಯನ್ ನಿರಾಶ್ರಿತರ ವಾಸ್ತವ್ಯಕ್ಕೆ ಅನುವು ಮಾಡಿಕೊಡಲಾಯಿತು.
1966ರಲ್ಲಿ ಡೊಂಗ್ಲಿಂಗ್ ಟಿಬೆಟಿಯನ್ ಸೆಟಲ್ಮೆಂಟ್ ಪ್ರಾರಂಭವಾಯಿತು. ಆಗ 4302 ಟಿಬೆಟಿಯನ್ ಕುಟುಂಬಗಳು ಹಾಗೂ ಬೌದ್ಧ ಬಿಕ್ಕುಗಳು ಅಲ್ಲಿ ಬಂದು ವಾಸ್ತವ್ಯ ಹೂಡಿದ್ದರು. ಮೊದಲು ತಾತ್ಕಾಲಿಕ ಶೆಡ್ಗಳಲ್ಲಿ ಅವರು ವಾಸ್ತವ್ಯ ಮಾಡುತ್ತಿದ್ದರು. ನಂತರ ಸಹಜವಾಗಿ ಕಾಯಂ ಮನೆಗಳನ್ನು ನಿಮಿರ್ಸಿಕೊಂಡು. ಈಗ ಅವರ ಜನಸಂಖ್ಯೆ 8376ಕ್ಕೆ ಏರಿಕೆಯಾಗಿದೆ.
ಟಿಬೆಟಿಯನ್ ನಿರಾಶ್ರಿತರ ಆಡಳಿತ ವ್ಯವಸ್ಥೆ ನೋಡಿಕೊಳ್ಳಲು ಭಾರತ ಸರ್ಕಾರದ ಗೃಹ ಇಲಾಖೆಯಡಿ ಸೆಂಟ್ರಲ್ ಟಿಬೆಟಿಯನ್ ಅಡ್ಮಿನಿಸ್ಟ್ರೆಷನ್ (ಸಿಟಿಎ) ರೂಪಿಸಲಾಗಿದೆ.
ಸೆಂಟ್ರಲ್ ಟಿಬೆಟಿಯನ್ ರಿಲೀ್ ಕಮಿಟಿ (ಸಿಟಿಆರ್ಸಿ) ಹೆಸರಿನಲ್ಲಿ ಅರಣ್ಯ ಭೂಮಿಯನ್ನು ಲೀಸ್ಗೆ ನೀಡಲಾಗಿದೆ. ಟಿಬೆಟಿಯನ್ ನಿರಾಶ್ರಿತರು ಅಲ್ಲಿ ಕೃಷಿ ಅಥವಾ ತಾವು ತಯಾರಿಸಿ ವಸ್ತುಗಳನ್ನು ಕ್ಯಾಂಪ್ ಹೊರಗೆ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದಾರೆ. ಕ್ಯಾಂಪ್ ಒಳಗೆ ಒಟ್ಟು 10 ಹಳ್ಳಿಗಳನ್ನಾಗಿ ವಿಂಗಡಿಸಿದ್ದು, ಪ್ರತಿ ಹಳ್ಳಿಗೂ ಮುಖ್ಯಸ್ಥರಿದ್ದಾರೆ. ಇಡೀ ಕ್ಯಾಂಪ್ನ ಒಳಗೂ ಅವರದ್ದೇ ಆದ ಆಡಳಿತ ವ್ಯವಸ್ಥೆ ಇದೆ.
ಸಿಟಿಎ ನಿಯಮದಂತೆ ಅಲ್ಲಿ ಯಾವುದೇ ಹೊಸ ಶಾಶ್ವತ ಕಟ್ಟಡ ನಿರ್ಮಾಣ ಮಾಡಬೇಕಾದರೆ ಸ್ಥಳಿಯ ಕಂದಾಯ ಇಲಾಖೆಗೆ ಮಾಹಿತಿ ನೀಡಬೇಕು ಎಂದಿದೆ. ಆದರೆ, ಯಾವುದೇ ನಿಯಮ ಪಾಲನೆಯಾಗುತ್ತಿಲ್ಲ. ಇನ್ನು ಕಟ್ಟಡಗಳಿಗೆ ಸ್ಥಳಿಯ ಆಡಳಿತಗಳಿಂದ ಎಂದರೆ ಗ್ರಾಪಂನಿಂದ ನೆ ಅನುಮೋದನೆ ಪಡೆಯಬೇಕು. ಕರ ಪಾವತಿ ಮಾಡಬೇಕು. ಯಾವುದೇ ಅನುಮತಿ, ಅನುಮೋದನೆ ಇಲ್ಲದೇ ಮೂರದಿಂದ ಐದು ಮಹಡಿಗಳ ಕಟ್ಟಡ ನಿರ್ಮಾಣ ನಡೆಯುತ್ತಿದೆ ಎಂಬುದು ಸ್ಥಳಿಯರ ಆರೋಪ.
ಶನಿವಾರ ತಾಲೂಕಿನ ಬಸಾಪುರ ಗ್ರಾಮದ ಸಂದೇಶ ನಾಗರಾಜ ಚಲವಾದಿ (23) ಎಂಬ ಯುವಕ ಟಿಬೆಟಿಯನ್ ಕ್ಯಾಂಪ್ (tibetancamp)ನಲ್ಲಿ ಕಟ್ಟಡ ಕಾಮಗಾರಿ ವೇಳೆ ನಾಲ್ಕನೇ ಮಹಡಿಯಿಂದ ಬಿದ್ದ ಮತಪಟ್ಟಿದ್ದಾನೆ. ಆದರೆ, ಇದು ಮೊದಲ ಟನೆಯಲ್ಲ. ಪ್ರತಿ ವರ್ಷ ಒಬ್ಬ ಅಥವಾ ಇಬ್ಬರು ಕಾಮಿರ್ಕರು ಕಟ್ಟಡಗಳ ಮೇಲಿಂದ ಬಿದ್ದು ಮೃತಪಡುವುದು ಅಥವಾ ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಯಾವುದೇ ಸುರತಾ ಕ್ರಮಗಳನ್ನು ವಹಿಸದೆ ಗುತ್ತಿಗೆದಾರರು ಕಾಮಿರ್ಕರ ಜೀವನದ ಜತೆ ಚೆಲ್ಲಾಟವಾಡುತ್ತಿದ್ದು ಸದ್ಯ ಕಾಮಿರ್ಕರ ಸಾವಿಗೆ ಯಾರೂ ಹೊಣೆ ಎಂಬ ಪ್ರಶ್ನೆ ಕೇಳಿ ಬರುತ್ತಿದೆ.
ಟಿಬೆಟಿಯನ್ ಕ್ಯಾಂಪ್ (tibetancamp) ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ನಿರ್ಮಾಣವಾಗುತ್ತಿಲ್ಲ ಎಂದು ತಹಸೀಲ್ದಾರ್ ಹೇಳುತ್ತಿದ್ದಾರೆ. ನಿದಿರ್ಷ್ಟ ಮಾಹಿತಿ ಇದ್ದಲ್ಲಿ ಪರಿಶೀಲಿಸಿ ಕ್ರಮ ವಹಿಸಲು ತಹಸೀಲ್ದಾರ್ ಅವರಿಗೆ ಸೂಚಿಸಲಾಗುವುದು.
— ಚಂದ್ರಶೇಖರ ಆರ್.ಜಿ. ಎಸಿ, ಶಿರಸಿ
ಟಿಬೆಟಿಯನ್ ಕ್ಯಾಂಪಗಳಲ್ಲಿ ನಿರ್ಮಾಣವಾಗಿರುವ ಹಾಗೂ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಬಗ್ಗೆ ತಾಲೂಕಾಡಳಿತ ಹಾಗೂ ಜಿಲ್ಲಾಡಳಿತ ಗಮನ ಹರಿಸಬೇಕಿದೆ. ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ಹಾಗೂ ಪಂಚಾಯಿತಿ ರಿಜಿಸ್ಟರ್ನಲ್ಲಿ ನಮೂದಿಸಿ ಮನೆಗಳ ತೆರಿಗೆ ಹಾಗೂ ನೀರಿನ ತೆರಿಗೆ ತುಂಬಿಸುವಂತ ಕೆಲಸವಾಗಬೇಕಿದೆ. ಇದರಿಂದ ಸ್ಥಳಿಯ ಪಂಚಾಯತಿಗಳಿಗೂ ಅನುಕೂಲವಾಗಲಿದೆ.
— ಮಂಜುನಾಥ ನಾಯ್ಕ ಸ್ಥಳಿಯ