ಭಟ್ಕಳದ ಖಾಸಗಿ ಹೊಟೇಲಿನಲ್ಲಿ ಅರಣ್ಯವಾಸಿಗಳ ಸಭೆಯನ್ನು ಉದ್ದೇಶಿಸಿ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿದರು. ಚಂದ್ರು ನಾಯ್ಕ ಬೆಳಕೆ, ಚಂದ್ರ ಬೆಳಕೆ, ವೆಂಕಟ ನಾಯ್ಕ, ಶಿವು ಮರಾಠಿ ಮತ್ತಿತರರಿದ್ದರು.
ಭಟ್ಕಳ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಡಿ. 6ರಂದು ಕಾರವಾರದಲ್ಲಿ ಜರುಗಲಿರುವ ಅರಣ್ಯವಾಸಿಗಳ ಬೃಹತ್ ರ‌್ಯಾಲಿಯನ್ನು ಸಂಘಟಿಸುವ ಮೂಲಕ ಭೂಮಿ ಹಕ್ಕು ಸಂವಿಧಾನಬದ್ಧ ಹಕ್ಕು ಎಂದು ಪ್ರತಿಪಾದಿಸಿ ಅಂದು ಅಂಬೇಡ್ಕರ ಪರಿವರ್ತನಾ ದಿನಾಚರಣೆ ಆಚರಿಸಲಾಗುವುದು ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಪಟ್ಟಣದ ಖಾಸಗಿ ಹೊಟೇಲಿನಲ್ಲಿ ಅರಣ್ಯವಾಸಿಗಳ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಕಾನೂನು ಜಾಗೃತಿ ಜಾಥದ ಅಂಗವಾಗಿ ಜಿಲ್ಲಾದ್ಯಂತ 132 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾನೂನು ಜಾಗೃತ ಕಾರ್ಯಕ್ರಮವನ್ನು ಸಂಘಟಿಸಲು ಹೋರಾಟಗಾರರ ವೇದಿಕೆಯ ತೀರ್ಮಾನಿಸಿದೆ. ಅರಣ್ಯ ಹಕ್ಕು ಕಾಯಿದೆ ಜಾಗೃತ ಜಾಥವೂ ಡಿ.3 ರಂದು ಚಾಲನೆ ನೀಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯವಾಸಿಗಳು ಕಾನೂನು ಜಾಗೃತಿ ಜಾಥದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಸಂಚಾಲಕ ದೇವರಾಜ ಗೊಂಡ ಸ್ವಾಗತಿಸಿದರು. ಚಂದ್ರು ನಾಯ್ಕ ಬೆಳಕೆ, ಚಂದ್ರ ಬೆಳಕೆ, ವೆಂಕಟ ನಾಯ್ಕ, ಶಿವು ಮರಾಠಿ, ಕುಪ್ಪಯ್ಯ ಭಂಡಾರಿ, ಗಣೇಶ ಕಲ್ಯಾಣಿ, ಶಂಕರ್ ನಾಯ್ಕ, ದೇವಿ ಚಂದ್ರ ಗೊಂಡ, ಸಾದಿಯಾ ಹೆಬ್ಬಳೆ, ಶ್ರೀಧರ ಮುಣಕುಳಿ, ಗುಂಡು ಆಚಾರಿ, ಗಿರಿಜಾ ಮೋಗೇರ್, ದೇವಕಿ ಮೋಗೇರ್, ವಿಮಲಾ ಮೋಗೇರ, ಕೈರುನ್ನಿಸಾ, ಅಲಿಮಾ ಮತ್ತಿತರರಿದ್ದರು.