ಸಾಂದರ್ಭಿಕ ಚಿತ್ರ  
ಉತ್ತರ ಕನ್ನಡ

ಹಾಸ್ಟೆಲ್‌ ನಲ್ಲಿ ಬಾಲಕಿಗೆ ಶಿಶು ಜನನ!!

ಸುಭಾಸ ಹೆಗಡೆ ಧೂಪದಹೊಂಡ

ಪ್ರಮುಖ ಮುಖ್ಯಾಂಶಗಳು

  • 9 ನೇ ತರಗತಿ ಬಾಲಕಿ ಗರ್ಭವತಿಯಾಗಿದ್ದೇ ಗೊತ್ತಿರಲಿಲ್ಲ
  • ಶೌಚಗೃಹದಲ್ಲಿ ಮಗು ಹೆತ್ತು ಹೊರಗೆಸೆದ ಬಾಲಕಿ
  • ಮಗು ಸಾವು ಬಾಲಕಿಗೆ ಚಿಕಿತ್ಸೆ
  • ಸಂಬಂಧಿಯಿಂದಲೇ ಲೈಂಗಿಕ ದೌರ್ಜನ್ಯ ಶಂಕೆ
ಶಿರಸಿ: 9ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯೋರ್ವಳು ಗರ್ಭಪಾತವಾಗಿ, ಶಿಶುವನ್ನು ಹಾಸ್ಟೇಲ್ ಕಿಟಕಿಯಿಂದ ಹೊರಗೆಸೆದ ಘಟನೆ ತಾಲೂಕಿನ ಬಂಡಲದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೇಲ್‌ನಲ್ಲಿ ಶುಕ್ರವಾರ ನಡೆದಿದೆ. ಘಟನೆ ಸಾರ್ವಜನಿಕರನ್ನು ದಂಗುಗೊಳಿಸಿದೆ.
ಬಾಲಕಿಯ ಸಂಬಂಧಿಯೋರ್ವನೇ ಆಕೆಯ ಈ ಸ್ಥಿತಿಗೆ ಕಾರಣನಾಗಿದ್ದಾನೆ ಎನ್ನಲಾಗಿದೆ. 7 ತಿಂಗಳ ಗರ್ಭಿಣಿಯಾಗಿದ್ದ ಈ ಬಾಲಕಿ ಶುಕ್ರವಾರ ಶೌಚಗೃಹಕ್ಕೆ ತೆರಳಿದ್ದ ವೇಳೆ ಗರ್ಭಪಾತವಾಗಿದೆ. ಆತಂಕಗೊAಡ ಬಾಲಕಿ ಶಿಶುವನ್ನು ಶೌಚಗೃಹದ ಕಿಟಕಿಯಿಂದ ಹೊರಗೆಸೆದಿದ್ದಾಳೆ. ಹಾಸ್ಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಈ ಮೃತ ಮಗು ಸಿಕ್ಕಿದ್ದು, ವಿಷಯ ಹೊರಬಂದಿದೆ. ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿರುವ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಸಾದ ಆಲದಕಟ್ಟೆ, "ಬಂಡಲದ ಹಾಸ್ಟೇಲ್ ಬಾಲಕಿಯರ ಹಾಸ್ಟೇಲ್ ಆಗಿದ್ದು, ಕಟ್ಟು ನಿಟ್ಟಿನ ಕಾವಲು ಹೊಂದಿದೆ. ಬಾಲಕಿ ರಜೆಯಲ್ಲಿ ಮನೆಗೆ ತೆರಳಿದ್ದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಸಾಧ್ಯತೆ ಇದೆ . ಪೊಲೀಸ್ ದೂರು ನೀಡಲಾಗಿದ್ದು ತನಿಖೆಯಿಂದ ವಿಷಯ ಹೊರಬರಬೇಕಿದೆ" ಎಂದಿದ್ದಾರೆ.
ಬಾಲಕಿಯನ್ನು ನಗರದ ಸರ್ಕಾರಿ ಆಸ್ಪತ್ರೆಗೆ ಶುಶ್ರೂಷೆಗಾಗಿ ದಾಖಲಿಸಲಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾಳೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ಡಿವೈಎಸ್ ಪಿ ಗೀತಾ ಪಾಟೀಲ್, ತಹಸೀಲ್ದಾರ್ ಪಟ್ಟರಾಜ ಗೌಡ ಸ್ಥಳಕ್ಕೆ ಧಾವಿಸಿದ್ದಾರೆ. ವಿಚಾರಣೆಯ ವೇಳೆ ತನ್ನ ದೊಪ್ಪನ ಮಗನೇ ಈ ಕೃತ್ಯ ನಡೆಸಿದ್ದಾಗಿ ತಿಳಿಸಿದ್ದಾಳೆ. ಆರೋಪಿಯನ್ನು ಪೊಲೀಸರು ಶುಕ್ರವಾರ ಸಂಜೆ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಬೇಸಿಗೆ ರಜೆಗೆ ಎರಡು ತಿಂಗಳುಗಳ ಕಾಲ ಮನೆಗೆ ತೆರಳಿದ್ದ ಬಾಲಕಿ ಗರ್ಭಾವಸ್ತೆಯಲ್ಲಿಯೇ ತಾಯಿ ತಂದೆಯರೊಂದಿಗಿದ್ದಾಳೆ. ಈ ವೇಳೆಯಾದರೂ ಪಾಲಕರಿಗೆ ತನ್ನ ಮಗಳು ಗರ್ಭಿಣಿಯಾಗಿರುವ ವಿಷಯ ತಿಳಿಯಬೇಕಿತ್ತು. ಶಾಲೆಯ ರಜೆ ಮುಕ್ತಾಯವಾದ ಬಳಿಕ ಕಳೆದ ನಾಲ್ಕು ದಿನಗಳ ಹಿಂದೆ ಹಾಸ್ಟೇಲ್‌ಗೆ ಆಗಮಿಸಿದ್ದ ಈ ಬಾಲಕಿ ಎಂದಿನಂತೆ ಶಾಲೆಗೆ ತೆರಳುವ ಸಲುವಾಗಿ ಸ್ನಾನಕ್ಕಾಗಿ ಶೌಚಗೃಹಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ. ಕಿಟಕಿಯಿಂದ ಎಸೆದಿದ್ದರಿಂದ ಮಗು ಬಿದ್ದು ಸಾವಿಗೀಡಾಗಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆಯ ಕುರಿತು ಹಾಸ್ಟೇಲ್ ಇತರ ಬಾಲಕಿಯ ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಸ್ಟೇಲ್‌ನಲ್ಲಿ ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆ ನಡೆಸುವಾಗ ಆಕೆ ಗರ್ಭಿಣಿಯಾಗಿರುವುದು ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಮಾತನಾಡಿರುವ ತಹಸೀಲ್ದಾರ್ ಪಟ್ಟರಾಜ ಗೌಡ, "ಬಾಲಕಿ ಆತಂಕದಿAದಲೂ ತನ್ನ ದೊಡ್ಡಪ್ಪನ ಮಗನ ಹೆಸರು ಹೇಳಿರಬಹುದು. ಈ ಕುರಿತಂತೆ ಆರೋಪಿತನ ಡಿಎನ್ ಎ ಪರೀಕ್ಷೆ ನಡೆಸಲಾಗುತ್ತಿದ್ದು, ಆ ಬಳಿಕವೇ ಆರೋಪಿಯ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.