ಕಾಳಿ ಸೇತುವೆ ಮೇಲೆ ಭೀಕರ ಅಪಘಾತ ಸಂಭವಿಸಿತು.  
ಉತ್ತರ ಕನ್ನಡ

ಕಾಳಿ ಸೇತುವೆ ಮೇಲೆ ಭೀಕರ ಅಪಘಾತ

ಕಾರವಾರ: ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಕಾಳಿ ಸೇತುವೆಯ ಮೇಲೆ ನಡೆದಿದೆ.

ರಾಜಸ್ತಾನ ಮೂಲದ ಅಶೋಕ ಕುಮಾರ್(24) ಮೃತರು. ಗೋವಾದಿಂದ ಕಾರವಾರಕ್ಕೆ ಬರುವಾಗ ರಾಷ್ಟ್ರೀಯ ಹೆದ್ದಾರಿ 66 ರ ಸದಾಶಿವಗಡ-ಕೋಡಿಬಾಗ ಕಾಳಿ ಸೇತುವೆಯ ಮೇಲೆ ಘಟನೆ ನಡೆದಿದೆ. ಬೈಕ್ ಹಿಂಬದಿ ಸವಾರ ಹಾಗೂ ಮತ್ತೊಂದು ಬೈಕ್ ಚಾಲಕ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕ್ರಿಮ್ಸ್ಗೆ ಸೇರಿಸಲಾಗಿದೆ. ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಿಂದ ಕೆಲ ಕಾಲ ಕಾಳಿ ಸೇತುವೆಯ ಮೇಲೆ ಸಂಚಾರ ವ್ಯತ್ಯಯ ಉಂಟಾಗಿತ್ತು.