ದಾಂಡೇಲಿಯ ಹಾರ್ನಬಿಲ್ ಭವನದಲ್ಲಿ ಹಾರ್ನಬಿಲ್ ಹಬ್ಬದ ನಿಮಿತ್ತ ಆಯೋಜಿಸಿದ್ದ ಚಿತ್ರಕಲೆ ಮತ್ತು ಶೈಕ್ಷಣಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು. 
ಉತ್ತರ ಕನ್ನಡ

ಹಾರ್ನಬಿಲ್ ಉತ್ಸವದ ಸ್ಪರ್ಧೆಗಳಿಗೆ ಚಾಲನೆ

ದಾಂಡೇಲಿ: ಪಟ್ಟಣದಲ್ಲಿ ಜ. 16ಮತ್ತು 17ರಂದು ಏರ್ಪಡಿಸಿರುವ ಹಾರ್ನಬಿಲ್ ಹಬ್ಬದ ಅಂಗವಾಗಿ ಹಾರ್ನಬಿಲ್ ಭವನದಲ್ಲಿ ವಿದ್ಯಾರ್ಥಿಗಳಿಗೆ ಶುಕ್ರವಾರ ಆಯೋಜಿಸಿದ್ದ ಚಿತ್ರಕಲೆ ಮತ್ತು ಶೈಕ್ಷಣಿಕ ಸ್ಪರ್ಧೆಗಳಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಚೌವ್ಹಾಣ್ ಚಾಲನೆ ನೀಡಿದರು.
ವಲಯ ಅರಣ್ಯಾಧಿಕಾರಿ ನದಾಫ್, ವನ್ಯಜೀವಿ ಛಾಯಾಚಿತ್ರಗಾರ ಹಾಗೂ ಪ್ರವಾಸೋದ್ಯಮಿ ಉಮೇಶ ಜಿ.ಈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವಕರ, ಗ್ರೀನ್ ಅಂಬ್ರೆಲ್ಲೋ ಇಕೋ ಕ್ಲಬ್‌ಅಧ್ಯಕ್ಷ ರಾಹುಲ್ ಬಾವಾಜಿ ಇತರರಿದ್ದರು. ಚಿತ್ರಕಲೆ, ಕ್ಲೆ ಮಾಡೆಲ್, ನಿಬಂಧ ಮತ್ತು ಕ್ವಿಜ್ ಸ್ಪರ್ಧೆಯಲ್ಲಿ ತಾಲೂಕಿನ 134 ವಿದ್ಯಾರ್ಥಿಗಳು ಭಾಗವಹಿಸಿದ್ದರು.