ಕಾರವಾರದ ಶಿವಾಜಿ ಹೈಸ್ಕೂಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಲಾಯಿತು.  
ಉತ್ತರ ಕನ್ನಡ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನಿಷ್ಠ ಉತ್ತೀರ್ಣ ಅಂಕ: ಶೇ.33 ಕ್ಕೆ ಇಳಿಕೆ: ಹೊರಟ್ಟಿ ವಿರೋಧ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದು ರಾಜ್ಯ ಸರ್ಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನಿಷ್ಠ ಉತ್ತೀರ್ಣ ಅಂಕವನ್ನು ಶೇ.33 ಕ್ಕೆ ಇಳಿಸಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆರೋಪಿಸಿದರು.
ಜಿಪಂ, ಶಾಲಾ ಶೈಕ್ಷಣ ಇಲಾಖೆ, ಉತ್ತರ ಕನ್ನಡ ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದಿಂದ ಕಾರವಾರ ಬಾಡ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣಾ ಸಭೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
8 ಸಾವಿರ ವೇತನ ಪಡೆದ ಖಾಸಗಿ ಶಾಲೆ ಶಿಕ್ಷಕರು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜು ಮಾಡುತ್ತಾರೆ. ಸರ್ಕಾರಿ ಶಾಲೆಯ ಶಿಕ್ಷರೊಬ್ಬರು ಪ್ರಾರಂಭಿಕ ವೇತನವೇ 48 ಸಾವಿರ ರೂ. ಇದೆ. ಹಾಗಿದ್ದಾಗ ಕನಿಷ್ಠ 35 ಅಂಕ ಪಡೆಯುವಷ್ಟು ತಮ್ಮ ವಿದ್ಯಾರ್ಥಿಯನ್ನು ತಯಾರು ಮಾಡಲಾಗದವರು ಶಿಕ್ಷಕರಾಗಿ ಏಕಿರಬೇಕು ಎಂದು ಹೊರಟ್ಟಿ ಅವರು ಕಠುವಾಗಿ ಪ್ರಶ್ನಿಸಿದರು. ಈ ಬಗ್ಗೆ ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
100 ಅಂಕಗಳಲ್ಲಿ ಒಟ್ಟು 20 ಅಂಕಗಳು ಆಂತರಿಕ ಮೌಲ್ಯಮಾಪನದ ಅಂಕಗಳಿವೆ. ನಾನು ಕೆಲವು ಜಿಲ್ಲೆಗಳ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನ ಅಂಕಗಳನ್ನು ತರಿಸಿ ನೋಡಿದೆ. ಶೇ. 97 ವಿದ್ಯಾರ್ಥಿಗಳಿಗೆ ಶಿಕ್ಷಕರು 20 ಅಂಕಗಳನ್ನು ನೀಡಿದ್ದಾರೆ. 80 ಅಂಕಗಳಿಗೆ 13 ಅಂಕದ ಉತ್ತರ ಬರೆದ ವಿದ್ಯಾರ್ಥಿ ಉತ್ತೀರ್ಣನಾಗುತ್ತಾನೆ. ಮುಂದೆ ಶಿಕ್ಷಣ, ಉದ್ಯೋಗದಲ್ಲಿ ಗುಣಮಟ್ಟ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ವಿಶ್ವದ ಹಲವು ದೇಶಗಳನ್ನು ಸುತ್ತಿದ್ದೇನೆ. ಎಲ್ಲೂ ಸರ್ಕಾರ ಬದಲಾದರೆ ಯೋಜನೆಗಳು ಬದಲಾಗುವುದಿಲ್ಲ. ಆದರೆ, ದೇಶದಲ್ಲಿ ಮಾತ್ರ ಶಿಕ್ಷಣ ಸಚಿವರು ತಾವು ಪ್ರಸಿದ್ಧರಾಗುವ ಸಲುವಾಗಿ ಯೋಜನೆಯನ್ನೇ ಬದಲಾಯಿಸುತ್ತಾರೆ. ಅಽಕಾರಿಗಳ, ಶಿಕ್ಷಕರ ಸಭೆ ನಡೆಸದೇ ಶಿಕ್ಷಣ ಸಚಿವರು ಯೋಜನೆಗಳನ್ನು ಘೋಷಿಸುತ್ತಾರೆ ಎಂದು ಕಿಡಿ ಕಾರಿದರು.
ರಾಜ್ಯದಲ್ಲಿ 10 ಕ್ಕಿಂತ ಕಡಿಮೆ ಮಕ್ಕಳಿರುವ 1900 ಕ್ಕಿಂತ ಹೆಚ್ಚು ಶಾಲೆಗಳನ್ನು ವಿಲೀನ ಮಾಡುವ ಯೋಜನೆ ಇದೆ ಅದನ್ನು ಸದ್ಯಕ್ಕೆ ತಡೆ ಹಿಡಿದಿದ್ದಏನೆ. ಕೆಪಿಎಸ್ ಶಾಲೆಗಳನ್ನು ತೆರೆದು ಪಕ್ಕದ ಶಾಲೆಗಳನ್ನು ವಿಲೀನ ಮಾಡುವ ಯೋಜನೆ ಕೂಡ ಇದೆ. ವ್ಯವಸ್ಥೆ ಸರಿಯಾಗದ ಹೊರತೂ ವಿಲೀನ ಮಾಡದಂತೆ ಸೂಚಿಸಿದ್ದೇನೆ ಎಂದರು.
ಎಂಎಲ್‌ಸಿ ಗಣಪತಿ ಉಳ್ವೇಕರ್, ಜಿಪಂ ಉಪ ಕಾರ್ಯದರ್ಶಿ ಅಲ್ಲಾಭಕ್ಷ, ಶಾಲಾ ಶೈಕ್ಷಣಿಕ ಇಲಾಖೆಯ ಧಾರವಾಡ ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಚೇರಿ ನಿರ್ದೇಶಕ ಈಶ್ವರ ನಾಯ್ಕ, ಕಾರವಾರ ಡಿಡಿಪಿಐ ಲತಾ ನಾಯಕ,ಡಯಟ್ ಪ್ರಾಂಶುಪಾಲ ಎನ್.ಆರ್.ಹೆಗಡೆ, ಬಿಇಒ ಉಮೇಶ ನಾಯ್ಕ, ತಹಸೀಲ್ದಾರ್ ನಿಶ್ಚಲ ನರೋನಾ, ಉಡುಪಿ ಶಿಕ್ಷಕರ ಸಹಕಾರಿ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ವಿವಿಧ ಶಿಕ್ಷಕರ ಸಂಘದ ಪದಾಕಾರಿಗಳಾದ ಎಲ್.ಎಂ.ಹೆಗಡೆ,ಸುಽÃರ ನಾಯ್ಕ, ಕೆ.ಪಿ.ನಾಯ್ಕ,ಜೈ ರಂಗನಾಥ, ಆರ್.ಎಸ್.ನಾಯ್ಕ ಇತರರು ವೇದಿಕೆಯಲ್ಲಿದ್ದರು.ಎಂ.ಟಿ.ಗೌಡ ಅಭಿನಂದನಾ ನುಡಿ ಆಡಿದರು.ಪ್ರಭಾಕರ ಬಂಟ್ ಸ್ವಾಗತಿಸಿದರು. ಗಣೇಶ ಬಿಷ್ಠಣ್ಣನವರ್ ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಕರಿಗೆ ಇತರ ಹೊರೆ ಕಡಿಮೆ

ಶಿಕ್ಷಕರು ಮೊಟ್ಟೆ, ಬಾಳೆಹಣ್ಣು, ಬಿಸಿಯೂಟದ ಲೆಕ್ಕ ಇಡುವ ವ್ಯವಸ್ಥೆ ಬದಲಾಗಬೇಕು. ಅದನ್ನು ಜಾರಿಗೆ ತರದಿದ್ದಲ್ಲಿ ನಿಮ್ಮ ವಿರುದ್ಧ ಹಕ್ಕು ಬಾದ್ಯತಾ ಸಮಿತಿಗೆ ವರದಿ ಮಂಡಿಸುತ್ತೇನೆ ಎಂದು ಶಿಕ್ಷಣ ಸಚಿವರಿಗೆ ಎಚ್ಚರಿಸಿದ್ದೆ ಎಂದು ಬಸವರಾಜ ಹೊರಟ್ಟಿ ಹೇಳಿದರು. ಪಾಠ ಹೊರತಾದ ಚಟುವಟಿಕೆಗಳಿಗೆ ಬೇರೆ ವ್ಯವಸ್ಥೆ ಮಾಡುವುದಾಗಿ ಶಿಕ್ಷಣ ಸಚಿವರು ಭರವಸೆ ನೀಡಿದ್ದಾರೆ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.
ಸರ್ಕಾರಿ ಶಾಲೆಗಳಿಗೆ ಇಲ್ಲದ ಫೈರ್ ಸೇಫ್ಟಿ ಹಾಗೂ ಇತರ ಮಾನದಂಡಗಳನ್ನು ಖಾಸಗಿ ಶಾಲೆಗಳಿಗೆ ವಿಽಸಲಾಗುತ್ತಿದೆ. ಈ ಬಗ್ಗೆ ಜೂನ್1 ರ ನಂತರ ಸಭೆ ನಡೆಸಿ ವ್ಯವಸ್ಥೆ ಸರಿಪಡಿಸುವುದಾಗಿ ಹೊರಟ್ಟಿ ಅವರು ಭರವಸೆ ನೀಡಿದರು.