ಹೊನ್ನಾವರ ತಾಲೂಕು ನಕ್ಷೆ  
ಉತ್ತರ ಕನ್ನಡ

ಹೊನ್ನಾವರ ಕೋಟಾ ಹಡೀಲ್‌ ಗ್ರಾಮ ಪಂಚಾಯಿತಿಯ ಕ್ಷೇತ್ರಗಳ ವಿಂಗಡನೆ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಹೊನ್ನಾವರ ತಾಲೂಕಿನ ಕೋಟಾ ಮತ್ತು ಹಡಿಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಪ್ರದೇಶಗಳನ್ನು, ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಂಗಡಿಸಿ, ಸದಸ್ಯ ಸ್ಥಾನಗಳನ್ನು ಹಂಚಿಕೆ ಮಾಡಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಈ ಆದೇಶ ಮಾಡಿದ್ದಾರೆ. ಈ ಹಿಂದೆ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಕರಡು ಅಧಿಸೂಚನೆಯಿಂದ ಬಾಧಿತರಾಗಬಹುದಾದ ಸಾರ್ವಜನಿಕರಿಂದ ಜೂನ್ 22 ರೊಳಗಾಗಿ ಆಕ್ಷೇಪಣೆಗಳನ್ನು
ಆಹ್ವಾನಿಸಲಾಗಿದ್ದು, ನಿಗಧಿತ ಅವಧಿಯಲ್ಲಿ ಒಟ್ಟು 4 ಆಕ್ಷೇಪಣೆಗಳು ಸ್ವೀಕೃತವಾಗಿದ್ದು, ಅಕ್ಷೇಪಣೆ ಮತ್ತು ಸಲಹೆಗಳನ್ನು ಪರಿಶೀಲನೆಯಿಂದ ನಿಯಾಮಾನುಸಾರ ಇತ್ಯರ್ಥಪಡಿಸಿ, ಹಂಚಿಕೆ ಮಾಡಲ್ಪಟ್ಟ ಸದಸ್ಯ ಸ್ಥಾನಗಳ ಸಂಖ್ಯೆಗಳ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಟಾ ಗ್ರಾಮ ಪಂಚಾಯಿತಿಗೆ ಒಟ್ಟು ಕ್ಷೇತ್ರಗಳು: 4. ಕೋಟಾ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯು ಕೋಟಾ ಮಜರೆ,
ಕೋಟಾ, ಅರೆಸುಳ್ಯಕೋಟಾ, ತುಂಬೇಬೀಳು, ಸುಳೆಬೀಳು ಹಾಗೂ ಸಂಪೋಳ್ಳಿ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು, 3 ಸದಸ್ಯ ಸ್ಥಾನವನ್ನು ಹಂಚಿಕೆ ಮಾಡಲಾಗಿದೆ.
ಹೆರಾಳಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಗೆ , ಹೆರಾಳಿ ಮಜರೆ, ಹೆರಾಳಿ, ಮುಂಡರಮಾವ ಗ್ರಾಮ ಕುಚ್ಚೋಡಿ ಪೂರ್ತಿ
ವ್ಯಾಪ್ತಿಯನ್ನು ಹೊಂದಿದ್ದು, 1 ಸದಸ್ಯ ಸ್ಥಾನವನ್ನು ಹಂಚಿಕೆ ಮಾಡಲಾಗಿದೆ. ಹಡಿಕಲ್ ಗ್ರಾಮ ಪಂಚಾಯಿತಿಗೆ ಒಟ್ಟು ಕ್ಷೇತ್ರಗಳು 5 ದಬ್ಬೋಡ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಗೆ ದಬ್ಬೋಡ ಮಜರೆ,ದಬ್ಬೋಡ, ಕೆರೆಕುಳಿ, ತುರುಮೆ ವ್ಯಾಪ್ತಿಯನ್ನು ಹೊಂದಿದ್ದು, 1 ಸದಸ್ಯ ಸ್ಥಾನವನ್ನು ಹಂಚಿಕೆ ಮಾಡಲಾಗಿದೆ.
ಆಡುಕಳ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಗೆ, ಆಡುಕಳ ಭಾಗಶಃ ಮಜರೆ, ಬಾಳಗಟ್ಟು, ಮಡಕಿಗದ್ದೆ, ಶೀಗಡಿ, ಅಮ್ಮಾರು, ಆಡುಕಳ, ಕಲ್ಲಂಚು ವ್ಯಾಪ್ತಿಯನ್ನು ಹೊಂದಿದ್ದು, 2 ಸದಸ್ಯ ಸ್ಥಾನವನ್ನು ಹಂಚಿಕೆ ಮಾಡಲಾಗಿದೆ.ಹಡಿಕಲ್ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಗೆ ಹಡಿಕಲ್ ಪೂರ್ತಿ, ಆಡುಕಳ ಭಾಗಶಃ ಮಜರೆ, ಯತ್ನಳ್ಳಿ, ನೆಸಲನೀರು ವ್ಯಾಪ್ತಿಯನ್ನು ಹೊಂದಿದ್ದು, 1 ಸದಸ್ಯ ಸ್ಥಾನವನ್ನು ಹಂಚಿಕೆ ಮಾಡಲಾಗಿದೆ. ಅಡ್ಕೆಕುಳಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಗೆ ಅಡ್ಕೆಕುಳಿ ಮಜರೆ
ವ್ಯಾಪ್ತಿಯನ್ನು ಹೊಂದಿದ್ದು, 1 ಸದಸ್ಯ ಸ್ಥಾನವನ್ನು ಹಂಚಿಕೆ ಮಾಡಲಾಗಿದೆ. ಅಶಿಕೇರಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಗೆ ಅಡ್ಕೆಕುಳಿ ಮಜರೆ, ಹಾಲಳ್ಳಿ, ಮುರಗೋಳಿ ಮತ್ತು ಅಶಿಕೇರಿ ಪೂರ್ತಿ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು, 1 ಸದಸ್ಯ ಸ್ಥಾನವನ್ನು ಹಂಚಿಕೆ ಮಾಡಲಾಗಿದೆ.