ಗೋಕರ್ಣ ಬಳಿಯ ತೊರ್ಕೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿದ್ಯಾಥಿರ್ ಧನ ವಿತರಣೆ ಮತ್ತು ಬೀಳ್ಕೊಡುಗೆ ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು. ಉದಯ ನಾಯ್ಕ, ಆನಂದ ಕವರಿ, ಪ್ರದಿಪ ನಾಯಕ, ಮೋಹನ ನಾಯಕ, ಬೊಮ್ಮಯ್ಯ ಗಾಂವಕರ, ಬೇಬಿ ನಾಯಕ, ದತ್ತಾ ಗೌಡ ಮತ್ತಿತರರಿದ್ದರು.
ಗೋಕರ್ಣ: ಅನ್ನದಾನಕ್ಕಿಂತ ವಿದ್ಯಾದಾನ ಪರಮ ಶ್ರೇಷ್ಠವಾದುದು. ಅನ್ನದಾನ ಕ್ಷಣಿಕ ತೃಪ್ತಿಯನ್ನಿತ್ತರೆ ವಿದ್ಯಾದಾನ ಜೀವಮಾನದ ಕೊನೆವರೆಗೂ ಉಳಿಯುವಂತಹದ್ದು. ಕಾರಣ ವಿದ್ಯಾಥಿರ್ಗಳಿಗೆ ಮತ್ತು ಶಿಕ್ಷಣಕ್ಕೆ ಮಾಡಿದ ಸಹಾಯ ಯಾವತ್ತೂ ನಿಷ್ಫಲವಾಗುವುದಿಲ್ಲ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ತೊರ್ಕೆ ಗ್ರಾಮದ ಶ್ರೀರಾಮಕೃಷ್ಣ ಸಭಾಭವನದಲ್ಲಿ ನಡೆದ ವಿದ್ಯಾಥಿ ಧನ ವಿತರಣೆ ಮತ್ತು ಶಿಕ್ಷಕಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಮಾಧ್ಯಮದ ಇಂತಹ ವಿಷಮ ಪರಿಸ್ಥಿತಿಯಲ್ಲಿ ತೊರ್ಕೆ ಗ್ರಾಮದ ಉದ್ಯಮಿ ಆನಂದ ಕವರಿ, ಉದ್ಯಮಿ ಪ್ರದಿಪ ನಾಯಕ ಮತ್ತಿತರರ ಶಿಣ ಪ್ರೇಮಿಗಳು ಕನ್ನಡ ಶಾಲೆಯನ್ನು ವೈಯಕ್ತಿಕ ಅನುದಾನದ ಮೂಲಕ ಹೆಚ್ಚಿನ ಶಿಕರನ್ನು ನಿಯೋಜಿಸಿ ತೊರ್ಕೆ ಹಿರಿಯ ಪ್ರಾಥಮಿಕ ಶಾಲೆಯನ್ನು ಮಾದರಿ ಕನ್ನಡ ಶಾಲೆಯಾಗಿಸಲು ಶ್ರಮಿಸುತ್ತಿರುವುದು ಹಾಗೂ ಕನ್ನಡ ಮಾಧ್ಯಮದ ವಿದ್ಯಾಥಿರ್ಗಳಿಗೆ ಪ್ರತಿ ವರ್ಷ ಧನ ಸಹಾಯ ನೀಡುತ್ತಿರುವುದು ಶ್ಲಾನೀಯ ಎಂದರು.
ಜತೆಗೆ ಕ್ಷೇತ್ರದಲ್ಲಿ ಕೈಗೊಂಡ ಜನಪರ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದ ಶಾಸಕರು ವಿಶಾಲ ವ್ಯಾಪ್ತಿಯ ನನ್ನ ಕ್ಷೇತ್ರದಲ್ಲಿ ನೂರಕ್ಕೆ ನೂರು ಸಾಧನೆ ಮಾಡುವ ಬಗ್ಗೆ ಅವಿರತ ಪ್ರಯತ್ನ ನನ್ನದಾಗಿದೆ. ಆದರೆ, ಈ ಕ್ಷೇತ್ರದ ಅಭಿವೃದ್ಧಿಯಿಂದ ಹಿಂದಿದೆ ಎಂದು ನನ್ನ ಪ್ರಯತ್ನಗಳನ್ನು ಮರೆಮಾಚಿಸುವ ವಿಫಲ ಯತ್ನಕ್ಕೆ ಕೆಲವರು ಮುಂದಾಗಿರುವುದು ವಿಷಾದಕರ ಎಂದರು.
ವಿದ್ಯಾಥಿರ್ಗಳಿಗೆ ಪ್ರದಿಪ ನಾಯಕ ಅವರ ವತಿಯಿಂದ ಸಹಾಯ ಧನವನ್ನು ಶಾಸಕರು ವಿತರಿಸಿದರು. ಇದರ ಜತೆಗೆ ತೊರ್ಕೆ ಶಾಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತರಾದ ಬೇಬಿ ಮಂಜುನಾಥ ನಾಯಕ ಅವರನ್ನು ದಿನಕರ ಶೆಟ್ಟಿ ಸನ್ಮಾನಿಸಿ ಬೀಳ್ಕೊಟ್ಟರು.
ವಿದ್ಯಾಥಿರ್ಗಳಿಗೆ ಧನ ಸಹಾಯ ನೀಡುತ್ತ ಬಂದ ಜಿಪಂ ಮಾಜಿ ಸದಸ್ಯ ಪ್ರದಿಪ ನಾಯಕ,ಕ್ಷೇತ್ರ ಶಿಣಾಧಿಕಾರಿ ಉದಯ ನಾಯ್ಕ, ನಿವೃತ್ತ ಶಿಕ್ಷಕ ಹಿತ್ತಲಮಕ್ಕಿ, ಇಲ್ಲಿನ ಶ್ರೀಮಹಾಬಲೇಶ್ವರ ಸಹಕಾರಿ ಬ್ಯಾಂಕ್ ಅಧ್ಯ ಮೋಹನ ನಾಯಕ, ನಿವತ್ತ ಉಪನ್ಯಾಸಕ ಬೊಮ್ಮಯ್ಯ ಗಾಂವಕರ, ಎಸ್ಡಿಎಂಸಿ ಅಧ್ಯ ದತ್ತಾ ಗೌಡ ಮಾತನಾಡಿದರು. ಕಾರ್ಯಕ್ರಮದ ಅಧ್ಯತೆ ವಹಿಸಿ ಗ್ರಾಪಂ ಮಾಜಿ ಅಧ್ಯ ಆನಂದ ಕವರಿ ಮಾತನಾಡಿದರು. ವೇದಿಕೆಯಲ್ಲಿ ಹಿರಿಯರಾದ ಎನ್.ಎಚ್.ನಾಯಕ, ಯುವಕ ಸಂ ಅಧ್ಯ ಸುಹಾಗ ಕವರಿ, ಶಿಕ್ಷಕ ಮೋಹನ ನಾಯ್ಕ, ಸ್ಥಳಿಯ ಬಿಜೆಪಿ ಮಂಡಲಾಧ್ಯ ಗಣೇಶ ಪಂಡಿತ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಮನೋರಮಾ ನಾಯ್ಕ, ಅರ್ಬನ್ ಬ್ಯಾಂಕ್ ನಿರ್ದೇಶಕ ಅರುಣ ಕವರಿ, ಪತ್ರಕರ್ತ ಸುಭಾಷ ಕಾರೇಬೈಲು ನಿರ್ವಹಿಸಿದರು.